ಮೈಸೂರು

ವಾಣಿಜ್ಯ ಕಟ್ಟಡಗಳಲ್ಲಿ ಉಚಿತ ಪಾರ್ಕಿಂಗ್

ಪಾಲಿಕೆ ವ್ಯಾಪ್ತಿಯ ಎಲ್ಲ ವಾಣಿಜ್ಯ ಮಳಿಗೆಗಳ ನೆಲಮಾಳಿಗೆ (ಸೆಲ್ಲರ್)ಗಳಲ್ಲಿ ವಾಹನ ನಿಲುಗಡೆಗೆ ಉಚಿತ ಅವಕಾಶ ಕಲ್ಪಿಸುವ ಆದೇಶ ಹೊರಡಿಸಲಾಗಿದೆ.

ಮೈಸೂರು: ಪಾಲಿಕೆ ವ್ಯಾಪ್ತಿಯ ಎಲ್ಲ ವಾಣಿಜ್ಯ ಮಳಿಗೆಗಳ ನೆಲಮಾಳಿಗೆ (ಸೆಲ್ಲರ್)ಗಳಲ್ಲಿ ವಾಹನ ನಿಲುಗಡೆಗೆ ಉಚಿತ ಅವಕಾಶ ಕಲ್ಪಿಸುವ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಗ್ರಾಹಕರಿಂದ ಶುಲ್ಕ ವಸೂಲು ಮಾಡಿದರೆ ಅಂತಹ ವಾಣಿಜ್ಯ ಮಳಿಗೆಗಳ ಪರವಾನಗಿಯನ್ನು ರದ್ದುಗೊಳಿಸುವ ಎಚ್ಚರಿಕೆ ನೀಡಲಾಗಿದೆ.

ಈ ಕುರಿತು ಪಟ್ಟಣ ಯೋಜನೆ ಮತ್ತು ಸುಧಾರಣೆಗಳ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ್‌ ಪ್ರೀತಂ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಆದರೆ, ಕೆಲವಡೆ ವಾಹನ ನಿಲುಗಡೆಗೆ ಅವಕಾಶವಿಲ್ಲದೆ ಇದ್ದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿದೆ. ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ವಾಹನ ಸಂಚಾರಕ್ಕೂ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆಯು ಈ ಹಿಂದಿನ ಕೌನ್ಸಿಲ್‌ ಸಭೆಯಲ್ಲಿ ಎಲ್ಲ ಕಟ್ಟಡಗಳಲ್ಲಿ ವಾಹನ ನಿಲುಗಡೆಗೆ ನೆಲಮಾಳಿಗೆಯಲ್ಲಿ ಸೌಲಭ್ಯ ಕಲ್ಪಿಸಬೇಕು ಎಂದು ತೀರ್ಮಾನಿಸಿತ್ತು ಎಂದು ಉಲ್ಲೇಖಿಸಿದರು.

ರಿಲಯನ್ಸ್‌ಗೆ ಗಡುವು: ನಗರದ ರಿಲಯಲ್ಸ್‌ ಕಂಪೆನಿಯು ಬಾಕಿ ಉಳಿಸಿಕೊಂಡಿರುವ ₹ 76 ಕೋಟಿ ಕಂದಾಯವನ್ನು 1 ವಾರದೊಳಗೆ ಪಾವತಿಸದೆ ಇದ್ದಲ್ಲಿ ದೂರಸಂಪರ್ಕ ಕೇಬಲ್‌ಗಳನ್ನು ಕಡಿತಗೊಳಿಸುವುದಾಗಿ ಸಭೆಯಲ್ಲಿ ತಿಳಿಸಲಾಯಿತು. ಸದಸ್ಯೆ ಸಮೀನಾ ಜಬೀನ್‌, ತಸ್ಲೀಂ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಸ್ಥಾನದ ಘನತೆ ಕುಂದಿಸಿದ ಪ್ರಧಾನಿ

ಮೈಸೂರು
ಸ್ಥಾನದ ಘನತೆ ಕುಂದಿಸಿದ ಪ್ರಧಾನಿ

19 Mar, 2018
ಮುಖ್ಯಮಂತ್ರಿ ಪಾತ್ರವೂ ಇದೆ: ಶ್ರೀನಿವಾಸಪ್ರಸಾದ್

ಮೈಸೂರು
ಮುಖ್ಯಮಂತ್ರಿ ಪಾತ್ರವೂ ಇದೆ: ಶ್ರೀನಿವಾಸಪ್ರಸಾದ್

17 Mar, 2018
ಮೈಸೂರು: ಮಳೆಗೆ ನೆಲಕಚ್ಚಿದ ಬಾಳೆ ತೋಟ

ಮೈಸೂರು
ಮೈಸೂರು: ಮಳೆಗೆ ನೆಲಕಚ್ಚಿದ ಬಾಳೆ ತೋಟ

17 Mar, 2018
ಪ್ರಾಣೇಶರ ಹಾಸ್ಯ ಚಟಾಕಿ: ನಕ್ಕು ಸುಸ್ತಾದ ಪ್ರೇಕ್ಷಕರು

ಮೈಸೂರು
ಪ್ರಾಣೇಶರ ಹಾಸ್ಯ ಚಟಾಕಿ: ನಕ್ಕು ಸುಸ್ತಾದ ಪ್ರೇಕ್ಷಕರು

17 Mar, 2018

ಮೈಸೂರು
ಮೌಢ್ಯಕ್ಕೆ ವಾಲುತ್ತಿರುವ ರಾಜಕಾರಣಿಗಳು

ಧಾರ್ಮಿಕ ಮುಖಂಡರು ಹಾಗೂ ರಾಜಕಾರಣಿಗಳು ಮೌಢ್ಯಾಚರಣೆಯತ್ತ ವಾಲುತ್ತಿದ್ದಾರೆ ಎಂದು ಜಾನಪದ ವಿದ್ವಾಂಸ ಪ್ರೊ.ಹಿ.ಶಿ.ರಾಮಚಂದ್ರಗೌಡ ವಿಷಾದ ವ್ಯಕ್ತಪಡಿಸಿದರು.

17 Mar, 2018