ಸಾರ್ವಜನಿಕರಿಂದ ಅಂತಿಮ ದರ್ಶನ

ಧಾರವಾಡ ತಲುಪಿದ ಹುತಾತ್ಮ ಯೋಧ ಮಂಜುನಾಥ ಜಕ್ಕಣ್ಣವರ ಪಾರ್ಥಿವ ಶರೀರ

ಹುತಾತ್ಮ ಯೋಧ ಮಂಜುನಾಥ ಜಕ್ಕಣ್ಣವರ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಧಾರವಾಡಕ್ಕೆ ತರಲಾಗಿದ್ದು, ಇಲ್ಲಿನ ಆರ್‌‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಧಾರವಾಡ: ಹುತಾತ್ಮ ಯೋಧ ಮಂಜುನಾಥ ಜಕ್ಕಣ್ಣವರ ಅವರ ಪಾರ್ಥಿವ ಶರೀರವನ್ನು ಧಾರವಾಡಕ್ಕೆ ತರಲಾಗಿದೆ.

ಛತ್ತಿಸಗಡ-ಮಹಾರಾಷ್ಟ್ರ ಗಡಿಯ ಗಡಚಿರೊಳ್ಳಿಯಲ್ಲಿ ಮೊನ್ನೆ ನಡೆದಿದ್ದ ನಕ್ಸಲ್ ಕೂಬಿಂಗ್‌ ವೇಳೆ ಗುಂಡಿನ ಚಕಮಕಿಯಲ್ಲಿ ಯೋಧ ಹುತಾತ್ಮರಾಗಿದ್ದರು.

ಹುತಾತ್ಮ ಮಂಜುನಾಥ ಅವರು ಧಾರವಾಡ ತಾಲ್ಲೂಕಿನ ಮನಗುಂಡಿ ಗ್ರಾಮದವರು.

ಧಾರವಾಡದ ಆರ್‌‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಸಾರ್ವಜನಿಕರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ, ಎಸ್ಪಿ‌ ಜಿ. ಸಂಗೀತಾ, ಶ್ರೀ ಬಸವಾನಂದ ಸ್ವಾಮೀಜಿ ಹಾಗೂ ಇತರ ಗಣ್ಯರು ಗೌರವ ಸಮರ್ಪಣೆ ಮಾಡಿದರು.

ಮಧ್ಯಾಹ್ನ ಮನಗುಂಡಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.

ಆಯುಕ್ತ ಮೇಜರ್ ಸಿದ್ದಲಿಂಗಯ್ಯ, ಶಿವು ಹಿರೇಮಠ, ಪಾಲಿಕೆ ಮೇಯರ್ ಡಿ.ಕೆ. ಚವ್ಹಾಣ, ಶಂಕರ ಶಿಳಕೆ, ಬಸವರಾಜ ದೇವರು, ಬಸವಾನಂದ ಸ್ವಾಮೀಜಿ, ಹು-ಧಾ ಪೊಲೀಸ್ ಅಯುಕ್ತ ನಾಗರಾಜ, ಉಪ ಆಯುಕ್ತೆ ರೇಣುಕಾ ಸುಕುಮಾರ, ಡಿವೈಎಸ್ಪಿ ಚಂದ್ರಶೇಖರ, ತಾ.ಪಂ ಸದಸ್ಯ ಫಕ್ಕೀರಪ್ಪ ಬುಡ್ಡಿಕಾಯಿ ಸೇರಿದಂತೆ ಇತರರು ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ನೀತಿ ಸಂಹಿತೆ ಉಲ್ಲಂಘನೆ ಅರವಿಂದ ಮಾಲಗತ್ತಿ, ಬಿ.ಪಿ.ಮಹೇಶಚಂದ್ರ ಗುರು ಅಮಾನತು

ಮೈಸೂರು
ನೀತಿ ಸಂಹಿತೆ ಉಲ್ಲಂಘನೆ ಅರವಿಂದ ಮಾಲಗತ್ತಿ, ಬಿ.ಪಿ.ಮಹೇಶಚಂದ್ರ ಗುರು ಅಮಾನತು

25 Apr, 2018
ಭೂಕಬಳಿಕೆಯ ಮೊದಲ ಆದೇಶ: ಆರೋಪಿಗೆ 1 ವರ್ಷ ಜೈಲು, ₹10 ಸಾವಿರ ದಂಡ

ಬೆಂಗಳೂರು
ಭೂಕಬಳಿಕೆಯ ಮೊದಲ ಆದೇಶ: ಆರೋಪಿಗೆ 1 ವರ್ಷ ಜೈಲು, ₹10 ಸಾವಿರ ದಂಡ

25 Apr, 2018
‘ಮೇ 7ರೊಳಗೆ ಆದೇಶ ಪ್ರಕಟಿಸಿ’

ವಿಧಾನಸಭಾಧ್ಯಕ್ಷರಿಗೆ ಹೈಕೋರ್ಟ್‌ ನಿರ್ದೇಶನ
‘ಮೇ 7ರೊಳಗೆ ಆದೇಶ ಪ್ರಕಟಿಸಿ’

25 Apr, 2018

ಬೆಂಗಳೂರು
ನಾಲ್ವರು ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ಸರ್ಕಾರ ನಾಲ್ವರು ಐಎಎಸ್‌ ಅಧಿಕಾರಿಗಳನ್ನು ಮಂಗಳವಾರ ವರ್ಗಾವಣೆ ಮಾಡಿದೆ.

25 Apr, 2018

ಕುಶಾಲನಗರ
ಕುಶಾಲನಗರ; ಗುಡುಗು ಸಹಿತ ಧಾರಾಕಾರ ಮಳೆ

ಸತತ ಎರಡು ತಾಸಿಗೂ ಹೆಚ್ಚು ಕಾಲ ಸುರಿಯಿತು. ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯ ಗೊಂದಿಬಸವನಹಳ್ಳಿ, ಕೂಡ್ಲೂರು ಮಂಟಿ, ಚಿಕ್ಕಹೊಸೂರು ವ್ಯಾಪ್ತಿಯಲ್ಲಿ ಮರಗಳು ಧರೆಗೆ ಉರುಳಿವೆ. ಕೆಲವು...

25 Apr, 2018