ಚನ್ನಪಟ್ಟಣ

ಸಮ್ಮೇಳನ, ಧರ್ಮ ಸಂಸತ್ ರಾಜಕೀಯ ಪ್ರೇರಿತ

ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಧರ್ಮ ಸಂಸತ್ ಸಭೆಗಳು ರಾಜಕೀಯ ಪ್ರೇರಿತ ಸಭೆಗಳಾಗಿವೆ

ಹುಲುವಾಡಿ ಗ್ರಾಮದಲ್ಲಿ ಎಚ್.ಡಿ.ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು

ಚನ್ನಪಟ್ಟಣ: ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಧರ್ಮ ಸಂಸತ್ ಸಭೆಗಳು ರಾಜಕೀಯ ಪ್ರೇರಿತ ಸಭೆಗಳಾಗಿವೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.‌

ತಾಲ್ಲೂಕಿನ ಹುಲುವಾಡಿ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಸಾಹಿತ್ಯದ ಹೆಸರಿನಲ್ಲಿ ಮೈಸೂರಿನಲ್ಲಿ ಸಭೆ ನಡೆಸಿದರು. ಬಿಜೆಪಿಯವರು ಉಡುಪಿಯಲ್ಲಿ ಧರ್ಮದ ಹೆಸರಿನಲ್ಲಿ ಸಭೆ ನಡೆಸಿ ಚುನಾವಣಾ ಪ್ರಚಾರ ಮಾಡಿದರು ಎಂದು ಟೀಕಿಸಿದರು. ‌

ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದಾರಮಯ್ಯ ಅವರು ಜಿಲ್ಲೆಯ ರಾಜಕಾರಣಕ್ಕೆ ಅನುಕೂಲ ಮಾಡಿಕೊಳ್ಳಲು ₹8 ಕೋಟಿ ಹಣ ವ್ಯಯ ಮಾಡಿದ್ದಾರೆ. ಈ ಹಿಂದೆ ನಡೆದ ಯಾವುದೇ ಸಾಹಿತ್ಯ ಸಮ್ಮೇಳನಕ್ಕೆ ಇಷ್ಟು ಹಣ ಕೊಟ್ಟ ನಿದರ್ಶನ ಗಮನಕ್ಕೆ ಬಂದಿಲ್ಲ. ಸರ್ಕಾರದ ಹಣ ಬಳಸಿಕೊಂಡು ಸಾಹಿತ್ಯದ ಹೆಸರಿನಲ್ಲಿ ರಾಜಕೀಯ ಸಮ್ಮೇಳನ ಮಾಡಿದ್ದಾರೆ ಎಂದು ಆರೋಪಿಸಿದರು.

ಉತ್ತರ ಪ್ರದೇಶದಲ್ಲಿ ರಾಮಮಂದಿರ ಕಟ್ಟಬೇಕು ಎಂದರೆ ಅಯೋಧ್ಯೆಯಲ್ಲಿ ಈ ಧರ್ಮ ಸಭೆ ಮಾಡಬೇಕು. ಅದನ್ನು ಬಿಟ್ಟು ಕರ್ನಾಟಕದಲ್ಲಿ ಸಭೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಮನ ಹೆಸರು ಹೇಳಿಕೊಂಡು ಬಿಜೆಪಿಯವರು ಇಂತಹ ಸಭೆ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಂವಿಧಾನದ ಹೇಳಿಕೆ ನೀಡಿ ಬಾಯಿ ಚಪಲ ತೀರಿಸಿಕೊಳ್ಳುವುದು ಸರಿಯಲ್ಲ. ಸಂವಿಧಾನ ಬದಲಿಸಬೇಕು ಎಂಬ ಹೇಳಿಕೆಯಿಂದ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಪೇಜಾವರ ಶ್ರೀಗಳ ಸಂವಿಧಾನ ತಿದ್ದುಪಡಿ ಹೇಳಿಕೆ ತಿರುಗೇಟು ನೀಡಿದರು.

ಮುಂಬರುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ಸಮಾವೇಶ ಆಯೋಜಿಸುವುದಾಗಿ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ವೀರಭದ್ರಸ್ವಾಮಿ ಅದ್ದೂರಿ ಮಹಾರಥೋತ್ಸವ

ಕನಕಪುರ
ವೀರಭದ್ರಸ್ವಾಮಿ ಅದ್ದೂರಿ ಮಹಾರಥೋತ್ಸವ

24 Jan, 2018
‘ಸ್ವಂತ ಬಲದಿಂದ ಜೆಡಿಎಸ್‌ ಸರ್ಕಾರ ರಚನೆ’

ಬಿಡದಿ
‘ಸ್ವಂತ ಬಲದಿಂದ ಜೆಡಿಎಸ್‌ ಸರ್ಕಾರ ರಚನೆ’

23 Jan, 2018

ಕಸಬಾ
ಬೋನಿಗೆ ಬಿದ್ದ ಚಿರತೆ

ಗ್ರಾಮಸ್ಥರ ಆಗ್ರಹಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ಕಾರ್ಯಪ್ರವೃತ್ತರಾಗಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಬೋನು ಇಟ್ಟಿದ್ದರು

23 Jan, 2018
ಹೆದ್ದಾರಿಯಲ್ಲೇ ವಾಹನಗಳ ನಿಲುಗಡೆ!

ರಾಮನಗರ
ಹೆದ್ದಾರಿಯಲ್ಲೇ ವಾಹನಗಳ ನಿಲುಗಡೆ!

22 Jan, 2018
ವಿದ್ಯುತ್ ಸ್ವಾವಲಂಬನೆಗೆ ‘ಸೂರ್ಯ ರೈತ’

ರಾಮನಗರ
ವಿದ್ಯುತ್ ಸ್ವಾವಲಂಬನೆಗೆ ‘ಸೂರ್ಯ ರೈತ’

20 Jan, 2018