ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಲಾಟರಿ ಬಂತೆಂದು ನಂಬಿದವರಿಗೆ ಮೋಸ!

Last Updated 29 ನವೆಂಬರ್ 2017, 7:22 IST
ಅಕ್ಷರ ಗಾತ್ರ

ಮೊಳಕಾಲ್ಮುರು: ‘ಆನ್‌ಲೈನ್‌’ ಮೂಲಕ ವಸ್ತುಗಳ ಮಾರಾಟ ನೆಪದಲ್ಲಿ ನಕಲಿ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಾ ಗ್ರಾಹಕರನ್ನು ಮೋಸ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ತಾಲ್ಲೂಕಿನ ಬಿ.ಜಿ.ಕೆರೆ ಸರ್ಕಾರಿ ಶಾಲೆ ಎಸ್‌ಡಿಎಂಸಿ ಸದಸ್ಯರೊಬ್ಬರಿಗೆ ಸೋಮವಾರ ಆದ ವಂಚನೆ ಇದಕ್ಕೆ ಮತ್ತೊಂದು ಸೇರ್ಪಡೆ.

ಕೆಲವು ದಿನಗಳ ಹಿಂದೆ ಅವರ ಮೊಬೈಲ್‌ಗೆ ಕರೆ ಮಾಡಿದ್ದ ವ್ಯಕ್ತಿಯು, ‘ನಿಮ್ಮ ನಂಬರ್‌ಗೆ ಲಾಟರಿ ಹೊಡೆದಿದೆ. ಹಣ ಪಾವತಿಸಿ, ಮೊಬೈಲ್‌ ಹಾಗೂ ಉಡುಗೊರೆ ಪಡೆದುಕೊಳ್ಳಿ ಎಂದು ಹೇಳಿದ್ದ. ಅದನ್ನು ನಂಬಿದ ನಾನು ವಿಳಾಸ ನೀಡಿದ್ದೆ’ ಎಂದು ಹೇಳಿದರು.

‘ಕರೆ ಮಾಡಿದ್ದ ವ್ಯಕ್ತಿ ಹೇಳಿದಂತೆ ಸೋಮವಾರ ಅಂಚೆ ಮೂಲಕ ಅವರ ವಿಳಾಸಕ್ಕೆ ಪಾರ್ಸಲ್ ಬಂತು. ಅಂಚೆ ಕಚೇರಿಗೆ ₹  1,850 ಪಾವತಿಸಿ ಪಾರ್ಸಲ್ ಪಡೆದುಕೊಂಡು ಅದನ್ನು ತೆರೆದೆ. ಆದರೆ, ಅದರಲ್ಲಿ ಬಂಗಾರದ ಲೇಪನ ಮಾಡಿದ್ದ ಲೋಹದ ಕೆಲವು ದೇವರ ವಿಗ್ರಹಗಳು ಹಾಗೂ ಪೂಜಾ ಸಾಮಗ್ರಿಯಿತ್ತು. ಮೊಬೈಲ್ ಇರಲಿಲ್ಲ. ಆತನಿಗೆ ಪುನಃ ಕರೆ ಮಾಡಿದರೆ ಸಂಪರ್ಕ ಸಾಧ್ಯವಾಗಲೇ ಇಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಿಂಗಳಿಗೆ ಅಂದಾಜು 150 ಆನ್‌ಲೈನ್‌ ಪಾರ್ಸ್‌ಲ್‌ಗಳು ಬರುತ್ತವೆ. ಅವುಗಳಲ್ಲಿ ಶೇ 30–40ನ್ನು ಬಿಡಿಸಿಕೊಳ್ಳುವುದಿಲ್ಲ. ಕಂಪೆನಿಗಳ ಬಗ್ಗೆ ದೂರು ಬಂದಿಲ್ಲ. ಆದರೆ, ಕೆಲ ಕಂಪೆನಿಗಳ ಹೆಸರು ಹೇಳಿಕೊಂಡು ಮೋಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಗ್ರಾಹಕರೇ ಎಚ್ಚರವಹಿಸಬೇಕು’ ಎಂದು ಅಂಚೆ ಇಲಾಖೆ ತಾಲ್ಲೂಕು
ಪ್ರಭಾರ ವ್ಯವಸ್ಥಾಪಕ ಸುರೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT