ಹೊನ್ನಾಳಿ

ಶಾಲಾ ಕಟ್ಟಡ ಶಿಥಿಲ: ಲೆಕ್ಕ ಕೊಡಿ

ಜಿಲ್ಲಾ ಪಂಚಾಯ್ತಿ ಕುಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಆಯುಶ್ ಆಸ್ಪತ್ರೆಗೆ ಜಿಲ್ಲಾ ಪಂಚಾಯ್ತಿಯಿಂದ ಅನುದಾನ ನೀಡಲಾಗಿದೆ

ಹೊನ್ನಾಳಿ ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು

ಹೊನ್ನಾಳಿ: ತಾಲ್ಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲಾ ಕಟ್ಟಡಗಳ ಮಾಹಿತಿಯನ್ನು ಕೊಡುವಂತೆ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯರಿಗೆ ಶಾಸಕ ಡಿ.ಜಿ.ಶಾಂತನಗೌಡ ತಿಳಿಸಿದರು.

ಮಂಗಳವಾರ ಏರ್ಪಡಿಸಿದ್ದ ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ಜಿ.ವಿಶ್ವನಾಥ್ ಅವರು ಪ್ರಸ್ತಾಪಿಸಿದ ಶಾಲಾ ಕಟ್ಟಡಗಳ ದುರಸ್ತಿ ವಿಷಯದ ಕುರಿತು ಪ್ರತಿಕ್ರಿಯಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಪ್ರಾರಂಭಿಸುತ್ತಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗುತ್ತಿದೆ. ಆದ್ದರಿಂದ ಇನ್ನೂ ಹೆಚ್ಚು ಹೆಚ್ಚು ತರಗತಿಗಳನ್ನು ಪ್ರಾರಂಭಿಸುವಂತೆ ವಿಶ್ವನಾಥ್ ಶಾಸಕರ ಗಮನಕ್ಕೆ ತಂದರು.

ಸಾಸ್ವೆಹಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯ ವೀರಶೇಖರಪ್ಪ ಮಾತನಾಡಿ, ‘ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಗೆ ಮೊರಾರ್ಜಿ ವಸತಿ ಶಾಲೆ ಅವಶ್ಯಕತೆ ಇದೆ. ಶಾಲೆಗೆ ಅಗತ್ಯವಾದ ಭೂಮಿ ಕೂಡಾ ಬೈರನಹಳ್ಳಿಯಲ್ಲಿ ಲಭ್ಯವಿದೆ. ಶಾಸಕರು ಈ ಬಗ್ಗೆ ಆಸಕ್ತಿ ತೋರಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ದೀಪಾ ಜಗದೀಶ್ ಮಾತನಾಡಿ, ‘ಜಿಲ್ಲಾ ಪಂಚಾಯ್ತಿ ಕುಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಆಯುಶ್ ಆಸ್ಪತ್ರೆಗೆ ಜಿಲ್ಲಾ ಪಂಚಾಯ್ತಿಯಿಂದ ಅನುದಾನ ನೀಡಲಾಗಿದೆ. ಆದರೆ, ಭೂಸೇನಾ ನಿಗಮದ ಅಧಿಕಾರಿಗಳು ಆಸ್ಪತ್ರೆಗೆ ಅಗತ್ಯವಾದ ರೀತಿಯಲ್ಲಿ ಕಾಮಗಾರಿ ಕೈಗೊಳ್ಳುತ್ತಿಲ್ಲ. ಸದಸ್ಯರು ನೀಡುವ ಸಲಹೆ, ಸೂಚನೆಗಳನ್ನು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ಶಾಂತನಗೌಡ ಜಿಲ್ಲಾ ಪಂಚಾಯ್ತಿ ಸದಸ್ಯರ ಸೂಚನೆಯಂತೆ ಕಾಮಗಾರಿ ಕೈಗೊಳ್ಳಿ ಎಂದು ಅಧಿಕಾರಿ ಕೆಂಚಪ್ಪ ಅವರಿಗೆ ಸೂಚಿಸಿದರು. ಸಭೆಯಲ್ಲಿ ಕುಡಿಯುವ ನೀರು, ಸಾಮಾಜಿಕ ಅರಣ್ಯ, ಬೆಸ್ಕಾಂ, ಸಮಾಜ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ, ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ ಒಳಗೊಂಡಂತೆ ಇತರ ಇಲಾಖೆಗಳ ಪ್ರಗತಿ ಬಗ್ಗೆ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸುರೇಂದ್ರ ನಾಯ್ಕ, ಎಂ.ಆರ್.ಮಹೇಶ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಲೋಚನಮ್ಮ, ಉಪಾಧ್ಯಕ್ಷ ಶಿವಾನಂದ್, ಸದಸ್ಯ ಕೆ.ಎಲ್.ರಂಗಪ್ಪ, ಕೆಡಿಪಿ ಸದಸ್ಯ ದಾನಪ್ಪ, ಹಾಲೇಶಪ್ಪ, ಇಒ ಡಾ.ಶಿವಪ್ಪ ಹುಲಿಕೆರೆ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮಾರ್ಚ್ 2ರಿಂದ ‘ಶರಣ ಸಂಸ್ಕೃತಿ ಉತ್ಸವ’

ದಾವಣಗೆರೆ
ಮಾರ್ಚ್ 2ರಿಂದ ‘ಶರಣ ಸಂಸ್ಕೃತಿ ಉತ್ಸವ’

22 Feb, 2018
ಮರಾಠರಿಗೆ 2 ‘ಎ’ ಸ್ಥಾನಮಾನ ನೀಡಿ

ದಾವಣಗೆರೆ
ಮರಾಠರಿಗೆ 2 ‘ಎ’ ಸ್ಥಾನಮಾನ ನೀಡಿ

20 Feb, 2018

ಚನ್ನಗಿರಿ
ಶಿವಾಜಿ ಅಪ್ರತಿಮ ಹೋರಾಟಗಾರ: ವಡ್ನಾಳ್

‘ಭಾರತ ಇಂದು ಹಿಂದೂಗಳ ದೇಶ ಎಂದು ಹೆಸರು ಪಡೆದುಕೊಂಡಿರುವುದಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ. ಹಿಂದೂ ಧರ್ಮ ಸ್ಥಾಪನೆ ಮಾಡದೇ ಇದ್ದರೆ ಈ...

20 Feb, 2018

ಹರಪನಹಳ್ಳಿ
ಯುವ ಮತದಾರರ ಹೆಸರು ನಾಪತ್ತೆ

ಹಾರಕನಾಳು ಗ್ರಾಮದಲ್ಲಿ 100ಕ್ಕೂ ಅಧಿಕ ಹೊಸ ಹಾಗೂ ಹಳೆಯ ಮತದಾರರ ಹೆಸರು ಪಟ್ಟಿಯಲ್ಲಿ ಪ್ರಕಟಗೊಂಡಿರಲಿಲ್ಲ. ಇದರಿಂದಾಗಿ ಅವರೆಲ್ಲ ಮತದಾನ ಮಾಡಲಾಗದೇ ನಿರಾಸೆಯಿಂದ ಮನೆಗೆ ತೆರಳುವಂತಾಯಿತು. ...

20 Feb, 2018
ಚಿಣ್ಣರಿಗೊಂದು ಚೆಂದದ ಉದ್ಯಾನ

ದಾವಣಗೆರೆ
ಚಿಣ್ಣರಿಗೊಂದು ಚೆಂದದ ಉದ್ಯಾನ

19 Feb, 2018