ಸರಗೂರು

‘ದೇಶದ ಘನತೆ ಹೆಚ್ಚಿಸಿದ ಜೈನ ಸಾಹಿತ್ಯ’

ಜೈನ ಸಾಹಿತ್ಯ ಪುರಾತನ ಕಾಲದಿಂದಲೂ ದೇಶದ ಘನತೆ ಹೆಚ್ಚಿಸಿದೆ. ಮಹಾವೀರ, ಬುದ್ಧ, ಅಶೋಕ, ಚಕ್ರಬಾಹು ಕೊಡುಗೆ ಅಪಾರ ಇದೆ. ಧರ್ಮಾದೇಶ ಮಾಡಿದ ಬಾಷೆ, ಪ್ರಾಕೃತ ಭಾಷೆ, ಹಳೆ ಗನ್ನಡ ಲಿಪಿ ಹೇರಳವಾಗಿ ದೊರೆತಿವೆ ಎಂದು ತಿಳಿಸಿದರು.

ಸರಗೂರು ಸಮೀಪದ ನಿಲುವಾಗಿಲು ಗ್ರಾಮದಲ್ಲಿ ಪಂಚ ಕಲ್ಯಾಣ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಜೈನ ಮುನಿಗಳು ಭಾಗವಹಿಸಿದ್ದರು.

ಸರಗೂರು: ಮಹಾವೀರ ತೀರ್ಥಂಕರರ ಸಮವ ಶರಣ ಸಭೆಯು 2680 ವರ್ಷದ ಹಿಂದೆಯೇ ಎಚ್.ಡಿ.ಕೋಟೆ ತಾಲ್ಲೂಕಿನ ಕಿತ್ತೂರಿನಲ್ಲಿ ನಡೆದಿತ್ತು. ಈಗ ನಿಲುವಾಗಿಲು ಗ್ರಾಮದಲ್ಲಿ 1008 ಭಗವಾನ್ ಮಹಾವೀರ ತೀರ್ಥಂಕರ ಜಿನ ಚೈತ್ಯಾಲಯ ಪ್ರಾರಂಭವಾಗುತ್ತಿದೆ ಎಂದು ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಸಮೀಪದ ನಿಲುವಾಗಿಲು 1008 ಭಗವಾನ್ ಮಹಾವೀರ ತೀರ್ಥಂಕರರ ಪಂಚ ಕಲ್ಯಾಣ ಪೂಜಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜೈನ ಸಾಹಿತ್ಯ ಪುರಾತನ ಕಾಲದಿಂದಲೂ ದೇಶದ ಘನತೆ ಹೆಚ್ಚಿಸಿದೆ. ಮಹಾವೀರ, ಬುದ್ಧ, ಅಶೋಕ, ಚಕ್ರಬಾಹು ಕೊಡುಗೆ ಅಪಾರ ಇದೆ. ಧರ್ಮಾದೇಶ ಮಾಡಿದ ಬಾಷೆ, ಪ್ರಾಕೃತ ಭಾಷೆ, ಹಳೆ ಗನ್ನಡ ಲಿಪಿ ಹೇರಳವಾಗಿ ದೊರೆತಿವೆ ಎಂದು ತಿಳಿಸಿದರು.

ದಿವಾಕರ ಆಚಾರ್ಯ 108 ಪುಷ್ಪದಂತ ಸಾಗರ್ ಜೀ, ಮುನಿ ಶ್ರೀ108 ಪ್ರಮುಖ ಸಾಗರ್ ಜೀ, ಮುನಿ ಶ್ರೀ 108 ಪೂಜ್ಯ ಸಾಗರ್ ಜೀ, ಕ್ಷುಲ್ಲಕ 105 ಪುಕಾರ್ ಸಾಗರ್ ಜೀ, ಕ್ಷುಲ್ಲಕ 105 ಪ್ರಶಸ್ತಮತಿ ಮಾತಾಜಿ ಪಾವನ, ವಾತ್ಸಲ್ಯ ದಿವಾಕರ ಆಚಾರ್ಯ 108 ಪುಷ್ಪದಂತ ಸಾಗರ್ ಜೀ ಮತ್ತು ಸಂಘಸ್ಥ ಮುನಿ ಇದ್ದರು.

ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. ಜೈನ ಮಿಲನ್ ವಲಯ ನಿರ್ದೇಶಕ ಎಸ್.ಎಸ್.ಸೋಮಪ್ರಭ, ನಿಲುವಾಗಿಲು ದಿಗಂಬರ ಜೈನ ಸಮಾಜದ ಅಧ್ಯಕ್ಷ ಎನ್.ಎಸ್.ಸ್ವಾಮಿ, ಮೈಸೂರು ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್ ಕುಮಾರ್, ಸರಗೂರು ಜೈನ ಸಮಾಜದ ಅಧ್ಯಕ್ಷ ಬ್ರಹ್ಮದೇವಯ್ಯ, ಬಿ.ಮಟಕೆರೆ ಜೈನ ಸಮಾಜದ ಅಧ್ಯಕ್ಷ ಜಿ.ಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಿಕ್ಕವೀರನಾಯಕ, ಬಿಜೆಪಿ ಮುಖಂಡ ಡಾ.ಎಚ್.ವಿ.ಕೃಷ್ಣಸ್ವಾಮಿ ಭಾಗವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮೊದಲ ಮಳೆಗೆ ಜನಜೀವನ ಅಸ್ತವ್ಯಸ್ತ, ಹಾನಿ

ಮೂಡಿಗೆರೆ
ಮೊದಲ ಮಳೆಗೆ ಜನಜೀವನ ಅಸ್ತವ್ಯಸ್ತ, ಹಾನಿ

20 Mar, 2018

ಚಿಕ್ಕಮಗಳೂರು
ಸಿ.ಎಂ ಸಿದ್ದರಾಮಯ್ಯ ವ್ಯರ್ಥ ಕಸರತ್ತು

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ರಹಸ್ಯ ಕಾರ್ಯಸೂಚಿ (ಹಿಡನ್‌ ಅಜೆಂಡಾ) ಮೂಲಕ ಸಮಸ್ಯೆಗಳನ್ನು ಹುಟ್ಟು ಹಾಕಿದ್ದಾರೆ’ –ಕುಮಾರಸ್ವಾಮಿ ...

20 Mar, 2018
16 ಗ್ರಾಮಗಳ ಕೆರೆಗಳಿಗೆ ನೀರು

ಅಜ್ಜಂಪುರ
16 ಗ್ರಾಮಗಳ ಕೆರೆಗಳಿಗೆ ನೀರು

20 Mar, 2018

ಚಿಕ್ಕಮಗಳೂರು
ವೈದ್ಯಕೀಯ ಕಾಲೇಜಿಗೆ ದೇಹದಾನ

ಭಾಗ್ಯಲಕ್ಷ್ಮಮ್ಮ ಅವರ ಇಚ್ಛೆಯಂತೆ ನೇತ್ರಗಳು ಮತ್ತು ದೇಹವನ್ನು ಕುಟುಂಬದವರು ದಾನ ಮಾಡಿದ್ದಾರೆ.

17 Mar, 2018
ಮಹಿಳೆಯರ ಬದ್ಧತೆ ಅನುಕರಣೀಯ

ನರಸಿಂಹರಾಜಪುರ
ಮಹಿಳೆಯರ ಬದ್ಧತೆ ಅನುಕರಣೀಯ

17 Mar, 2018