ಶುಕ್ರವಾರ, 1–12–1967

ಸಂಪುಟ ಸಚಿವರು ಮತ್ತು ಸ್ಟೇಟ್ ಸಚಿವರ ನಿವಾಸಗಳಿಗೆ ಬಾಡಿಗೆ ಇಲ್ಲದೆ ಒದಗಿಸಲಾಗುವ ಪೀಠೋಪಕರಣಗಳ ಹಾಗೂ ವಿದ್ಯುತ್ ಉಪಕರಣಗಳ ಬೆಲೆ 38,500 ರೂ.

‍ಮಂತ್ರಿ ವಿಲಾಸ
ನವದೆಹಲಿ, ನ. 30–
ಸಂಪುಟ ಸಚಿವರು ಮತ್ತು ಸ್ಟೇಟ್ ಸಚಿವರ ನಿವಾಸಗಳಿಗೆ ಬಾಡಿಗೆ ಇಲ್ಲದೆ ಒದಗಿಸಲಾಗುವ ಪೀಠೋಪಕರಣಗಳ ಹಾಗೂ ವಿದ್ಯುತ್ ಉಪಕರಣಗಳ ಬೆಲೆ 38,500 ರೂ.

22,500 ರೂ. ಬೆಲೆಯ ಪೀಠೋಪಕರಣಗಳನ್ನು ಬಾಡಿಗೆ ಇಲ್ಲದೆ ಉಪಸಚಿವರಿಗೆ ಒದಗಿಸಲಾಗುತ್ತಿದೆ. ವಸತಿಖಾತೆ ಉಪಸಚಿವ ಶ್ರೀ ಇಕ್ಬಲ್ ಸಿಂಗ್ ಈ ಸಂಗತಿಯನ್ನು ಇಂದು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತವೊಂದರಲ್ಲಿ ತಿಳಿಸಿದರು.

ದಕ್ಷಿಣ ಯಮೆನ್ ಗಣರಾಜ್ಯ ಘೋಷಣೆ
ಏಡನ್, ನ. 30–
ಏಡನ್ ಮತ್ತು ದಕ್ಷಿಣ ಅರೇಬಿಯನ್ ಬ್ರಿಟನ್ ವಸಾಹತುಗಳು ನಿನ್ನೆ ಮಧ್ಯರಾತ್ರಿ ಸ್ವಾತಂತ್ರ್ಯ ಪಡೆದವು. ಮಧ್ಯ ರಾತ್ರಿಯಾಗುತ್ತಿದ್ದಂತೆಯೇ ಬ್ರಿಟನ್ನಿನ ಈ ಮಾಜಿ ವಸಾಹತುಗಳನ್ನು ದಕ್ಷಿಣ ಯಮೆನ್ ಗಣರಾಜ್ಯವೆಂದು ಘೋಷಿಸಲಾಯಿತು.

ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ಸಭೆ ಇಂದು (ಪ್ರಜಾವಾಣಿ ಪ್ರತಿನಿಧಿಯಿಂದ)
ನವದೆಹಲಿ, ನ. 30–
ಕಳೆದ ಸಾರ್ವತ್ರಿಕ ಚುನಾವಣೆಯಾದಾಗಿನಿಂದೀಚೆಗೆ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು ನಾಳೆ ಇಲ್ಲಿ ಮೊದಲ ಬಾರಿಗೆ ಸಭೆ ಸೇರುವುದು. 1968-69ರ ವಾರ್ಷಿಕ ಯೋಜನೆಗೆ ಅನ್ವಯಿಸುವ ನೀತಿ ವಿಷಯಗಳನ್ನು ಸಭೆ ಪರಿಶೀಲಿಸುವುದು.

1969ರ ಏಪ್ರಿಲ್ ಒಂದರಿಂದ ಆರಂಭವಾಗುವ ಮುಂದಿನ ಪಂಚವಾರ್ಷಿಕ ಯೋಜನೆ ಬಗ್ಗೆ ವೇಳಾಪಟ್ಟಿಯನ್ನು ಪರಿಶೀಲಿಸುವುದು. ಎರಡು ದಿನಗಳು ನಡೆಯುವ ಈ ಸಭೆಯನ್ನು ಪ್ರಧಾನಿ ಇಂದಿರಾಗಾಂಧಿ ಅವರು ಉದ್ಘಾಟಿಸುವರು.

ಭಾರತಕ್ಕೆ ಜಪಾನಿನ ಅಮೋನಿಯಂ ಸಲ್ಫೇಟ್
ಟೋಕಿಯೋ, ನ. 30–
ಭಾರತಕ್ಕೆ 617,000 ಟನ್ ಅಮೋನಿಯಂ ಸಲ್ಫೇಟ್ ಗೊಬ್ಬರವನ್ನು ಜಪಾನ್ ದೇಶವು 1968ರ ಮೊದಲ ಎಂಟು ತಿಂಗಳಲ್ಲಿ ಕಳುಹಿಸಿಕೊಡಲಿದೆ. ಇದರ ಬೆಕೆ 8,580 ದಶಲಕ್ಷ ಯನ್‌ಗಳಾಗುತ್ತವೆ.

ಟೋಕಿಯೋದಲ್ಲಿ ಈ ಬಗ್ಗೆ ನಿನ್ನೆ ಒಪ್ಪಂದವೊಂದಕ್ಕೆ ಸಹಿ ಬಿತ್ತು.

ಮಹಾಜನ್ ವರದಿಗೆ ಮಹಾರಾಷ್ಟ್ರದ ಕೋಪ: ವಿಧಾನ ಸಭೆ ಮುಂದಕ್ಕೆ
ನಾಗಪುರ, ನ. 30–
ಮಹಾಜನ್ ವರದಿಗೆ ಅಸಮಾಧಾನ ವ್ಯಕ್ತಪಡಿಸಲು ಮಹಾರಾಷ್ಟ್ರ ವಿಧಾನಸಭೆಯನ್ನು ಇಂದು ಅನಿರ್ದಿಷ್ಟ ಕಾಲ ಮುಂದಕ್ಕೆ ಹಾಕಲಾಯಿತು.

ಮಂಚನಬೆಲೆ ಯೋಜನೆ ಶೀಘ್ರ ಕಾರ್ಯಗತ ಕುರಿತು ರಾವ್ ಆಶ್ವಾಸನೆ
ನವದೆಹಲಿ, ನ. 30–
ಮಂಚನಬೆಲೆ ಯೋಜನೆಯನ್ನು  ಮಂಜೂರು ಮಾಡಲಾಗುವುದೆಂದೂ, ಅದನ್ನು ಶೀಘ್ರವಾಗಿ ಕಾರ್ಯಗತ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುವುದೆಂದೂ ಕೇಂದ್ರ ನೀರಾವರಿ ಹಾಗೂ ವಿದ್ಯುತ್ ಸಚಿವ ಡಾ. ಕೆ.ಎಲ್. ರಾವ್ ಅವರು ಸಂಸತ್ ಸದಸ್ಯ ಶ್ರೀ ಎಂ.ವಿ. ರಾಜಶೇಖರನ್ (ಕನಕಪುರ) ಅವರಿಗೆ ಆಶ್ವಾಸನೆ ನೀಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ದಿನದ ನೆನಪು
ಶನಿವಾರ, 20–1–1968

ಭೂಮ್ಯಂತರ್ಗತ ಅಣುಸ್ಫೋಟ ಪ್ರಯೋಗವನ್ನು ಅಮೆರಿಕವು ನಡೆಸಿದೆ. ಇದರಿಂದ ವಾತಾವರಣದಲ್ಲಿ ಅಣು ವಿಕಿರಣ ಕ್ರಿಯೆ ತಲೆದೋರಿದೆಯೆಂದು ಅಣು ಶಕ್ತಿ ಆಯೋಗ ನಿನ್ನೆ ತಿಳಿಸಿತು.

20 Jan, 2018

50 ವರ್ಷಗಳ ಹಿಂದೆ
ಗುರುವಾರ, 18–1–1968

ಕಛ್‌ನ ರಣ್ ಪ್ರದೇಶ ಕುರಿತ ತ್ರಿಸದಸ್ಯ ನ್ಯಾಯಮಂಡಲಿ ತೀರ್ಪು ಭಾರತಕ್ಕೆ ವಿರುದ್ಧವಾಗಿರಬಹುದೆಂಬ ಕಳವಳಕಾರಕ ಸುದ್ದಿ ಜಿನೀವಾದಿಂದ ಬಂದಿದೆ.

18 Jan, 2018

50 ವರ್ಷಗಳ ಹಿಂದೆ
ಬುಧವಾರ, 17–1–1968

ಸಿಸಿಲಿಯಲ್ಲಿ ಭಾನುವಾರ ಮತ್ತು ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಕೊನೆಯಪಕ್ಷ 600 ಮಂದಿ ಸತ್ತಿದ್ದಾರೆಂದು ಇಟಲಿ ಸರ್ಕಾರದ ವೃತ್ತಗಳು ತಿಳಿಸಿವೆ.

17 Jan, 2018

ದಿನದ ನೆನಪು
ಸೋಮವಾರ, 15–1–1968

ಆರು ಮಂದಿ ಕಾಂಗ್ರೆಸ್ ಶಾಸಕರು ಸಚಿವರಾಗಿ ನಾಳೆ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಹಾಗೂ ‍ಪ್ರಗತಿಶೀಲ ಜನತಂತ್ರರಂಗದ ಸಮ್ಮಿಶ್ರ...

15 Jan, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಭಾನುವಾರ, 14–1–1968

ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆಗಳ ವ್ಯವಸ್ಥೆಯನ್ನು ಸರಳಗೊಳಿಸುವ ಉದ್ದೇಶವನ್ನು ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ವ್ಯಕ್ತಪಡಿಸಿದರು.

14 Jan, 2018