ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕದಾಸರು ಕಲಿ, ಕವಿ: ಮರೀಗೌಡ

Last Updated 1 ಡಿಸೆಂಬರ್ 2017, 4:33 IST
ಅಕ್ಷರ ಗಾತ್ರ

ಮೈಸೂರು: ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕನಕದಾಸರು ಕಲಿಗಳು, ಕವಿಗಳು ಆಗಿದ್ದರು ಎಂದು ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮರೀಗೌಡ ತಿಳಿಸಿದರು. ಮೈಸೂರು ತಾಲ್ಲೂಕಿನ ಮಾಕನಹುಂಡಿಯಲ್ಲಿ ನಡೆದ 6ನೇ ವರ್ಷದ ಕನಕ ಜಯಂತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರು 500 ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆಯ ವಿರುದ್ಧ ಸಿಡಿದೆದ್ದವರು. ಜನರಲ್ಲಿ ಜಾಗೃತಿ ಮೂಡಿಸಿದ ಮಹಾನ್ ಸಂತರು. ಉಡುಪಿಯ ಶ್ರೀಕೃಷ್ಣನನ್ನೇ ಒಲಿಸಿಕೊಂಡಂತಹ ದೇವತಾ ಮನುಷ್ಯ ಎಂಬುದಕ್ಕೆ ಕನಕನಕಿಂಡಿಯೇ ಸಾಕ್ಷಿಯಾಗಿದೆ ಎಂದು ಸ್ಮರಿಸಿದರು.

ನಗರಪಾಲಿಕೆ ಮಾಜಿ ಸದಸ್ಯ ಶಿವಣ್ಣ, ವಕೀಲ ರಾಮಕೃಷ್ಣ, ಎಪಿಎಂಸಿ ಉಪಾಧ್ಯಕ್ಷ ಬಸವರಾಜು, ಶನಿದೇವರ ಗುಡ್ಡಪ್ಪ ಪುಟ್ಟಸ್ವಾಮಿ, ಕರವೇ ಜಿಲ್ಲಾಧ್ಯಕ್ಷ ಪ್ರವೀಣಕುಮಾರ್, ಪಿಎಸ್‌ಐ ಗಣೇಶ್, ಗ್ರಾ.ಪಂ.ಅಧ್ಯಕ್ಷ ಬಸವರಾಜು, ಮಾಜಿ ಅಧ್ಯಕ್ಷ ಮಾಕಿ ಮಹದೇವು, ಮಾಕನಹುಂಡಿ ಮರೀಗೌಡ, ಕೆ. ಹೆಬ್ಬಾಳೇಗೌಡ, ಕುಂಬರಳ್ಳಿಮಠ ಮಹದೇವ, ರವೀಗೌಡ, ಸಂಘದ ಅಧ್ಯಕ್ಷ ಬಿ. ರವಿ, ಕಾರ್ಯದರ್ಶಿ ಶಿವಣ್ಣ, ಕೆ.ಪಿ. ಮಹದೇವ, ಚಂದ್ರ, ಕೃಷ್ಣ, ಶಿವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT