ಗೋಕಾಕ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಅಂಗನವಾಡಿ ಕಾರ್ಯಕರ್ತೆಯರ ಧರಣಿ

ಗುರುವಾರ ಸಂಜೆ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸೇರಿದ ಅಂಗನವಾಡಿ ಕಾರ್ಯಕರ್ತೆಯರು ಸಿಡಿಪಿಒ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಿಡಿಪಿಒ ಅರುಣ ನೀರಗಟ್ಟಿ ಅವರಿಗೆ ಮನವಿ ಅರ್ಪಿಸಿದರು.

ಗೋಕಾಕ: ಬಾಲವಿಕಾಸ ಸಮಿತಿ ಜಂಟಿ ಬ್ಯಾಂಕ್‌ ಖಾತೆ ತೆರೆಯುವ ಆದೇಶವನ್ನು ವಿರೋಧಿಸಿ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಪ್ರತಿಭಟನೆ ನಡೆಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಗುರುವಾರ ಸಂಜೆ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸೇರಿದ ಅಂಗನವಾಡಿ ಕಾರ್ಯಕರ್ತೆಯರು ಸಿಡಿಪಿಒ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಿಡಿಪಿಒ ಅರುಣ ನೀರಗಟ್ಟಿ ಅವರಿಗೆ ಮನವಿ ಅರ್ಪಿಸಿದರು.

ಬಾಲವಿಕಾಸ ಸಮಿತಿ ಅಧ್ಯಕ್ಷರ ಜೊತೆ ಜಂಟಿ ಖಾತೆ ತೆರೆಯಲು ಹೇಳಲಾಗುತ್ತಿದೆ. ಈ ಹಿಂದೆ ಇಂಥದೇ ಆದೇಶದ ಪ್ರಕಾರ ಜಂಟಿ ಖಾತೆ ತೆರೆದಾಗ ಹಲವಾರು ಸಮಸ್ಯೆಗಳು ಉದ್ಭವಿಸಿವೆ. ಪುನಃ ಅದೇ ರೀತಿ ಘಟನೆ ಮರುಕಳಿಸುವುದು ಬೇಡ. ಹಿಂದಿನ ಪದ್ಧತಿಯೇ ಮುಂದುವರಿಸಬೇಕು, ತರಕಾರಿ, ಅಡುಗೆ ಅನಿಲಕ್ಕೆ ಮುಂಚಿತವಾಗಿ ಕಾರ್ಯಕರ್ತೆಯರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಬೇಕು, ಅಡುಗೆ ಸಲಕರಣೆ ಹಾಗೂ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ದಾಖಲೆಗಳ ಹೊರೆ ಕಡಿಮೆ ಮಾಡಬೇಕು, ಪ್ರತಿ ತಿಂಗಳು 5ನೇ ತಾರೀಕಿನ ಒಳಗಾಗಿ ಗೌರವಧನ ಬಿಡುಗಡೆ ಮಾಡಬೇಕು, ನಿವೃತ್ತಿಯಾದ ಅಂಗನವಾಡಿ ಸಿಬ್ಬಂದಿಗೆ ನಿವೃತ್ತಿ ಹಣ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಮರಣ ಹೊಂದಿದವರಿಗೆ ಪರಿಹಾರ ಧನ ಬಿಡುಗಡೆ ಮಾಡಬೇಕು, ಗುಣಮಟ್ಟದ ಆಹಾರ ಸರಿಯಾಗಿ ಸರಬರಾಜು ಆಗಬೇಕು ಸೇರಿದಂತೆ ಒಟ್ಟು 17 ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ದೊಡ್ಡವ್ವ ಪೂಜೇರಿ, ಕಾರ್ಯದರ್ಶಿ ಮುನೀರಾ ಮುಲ್ಲಾ, ಖಜಾಂಚಿ ಕಲ್ಲಪ್ಪ ಮಾದರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಉದ್ಯೋಗ ಸಿಕ್ಕರೂ ಮಾಡುವ ತಾಕತ್ತಿಲ್ಲ

ಬೆಳಗಾವಿ
ಉದ್ಯೋಗ ಸಿಕ್ಕರೂ ಮಾಡುವ ತಾಕತ್ತಿಲ್ಲ

17 Jan, 2018
ಗಮನ ಸೆಳೆದ ಬಲಭೀಮರ ಮೇಲಾಟ

ಮೋಳೆ
ಗಮನ ಸೆಳೆದ ಬಲಭೀಮರ ಮೇಲಾಟ

17 Jan, 2018
‘ಪುಣ್ಯಸ್ನಾನ ಮಾಡಿ ಶಿವಪಾರ್ವತಿ ದರ್ಶನ

ಬೆಳಗಾವಿ
‘ಪುಣ್ಯಸ್ನಾನ ಮಾಡಿ ಶಿವಪಾರ್ವತಿ ದರ್ಶನ

16 Jan, 2018

ಬೈಲಹೊಂಗಲ
‘ಭೋವಿ ಸಮಾಜ ಶಿಕ್ಷಣಕ್ಕೆ ಒತ್ತು ನೀಡಲಿ’

‘ಸಮಾಜ ಬಾಂಧವರು ಸ್ವಉದ್ಯೋಗ ಮಾಡಿ ಜೀವನ ರೂಪಿಸಿಕೊಳ್ಳಬೇಕು. ಸರ್ಕಾರದ ಸವಲತ್ತುಗಳನ್ನು ಪಡೆದು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು.

16 Jan, 2018
ಗೋವಾ ಸಚಿವ ವಿನೋದ ಪಾಲ್ಯೇಕರ್‌ ಹೇಳಿಕೆ ಖಂಡಿಸಿ ಕಣಕುಂಬಿ ಬಳಿ ರಸ್ತೆತಡೆ ಪ್ರತಿಭಟನೆ

‘ಮಹದಾಯಿ ನೀರು ಬಿಟ್ಟರೆ ಶಾಂತಿ; ಇಲ್ಲವಾದರೆ ಕ್ರಾಂತಿ’ ಘೋಷಣೆ
ಗೋವಾ ಸಚಿವ ವಿನೋದ ಪಾಲ್ಯೇಕರ್‌ ಹೇಳಿಕೆ ಖಂಡಿಸಿ ಕಣಕುಂಬಿ ಬಳಿ ರಸ್ತೆತಡೆ ಪ್ರತಿಭಟನೆ

15 Jan, 2018