ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ ಆರಂಭ

Last Updated 1 ಡಿಸೆಂಬರ್ 2017, 6:51 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಭಾವಚಿತ್ರವಿರುವ ಮತದಾರರ ಪಟ್ಟಿಗಳ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಗುರು ವಾರದಿಂದ ಡಿ.29ರವರೆಗೆ ನಡೆ ಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ತಿಳಿಸಿದರು.

‘2018 ಜ.1ನ್ನು ಆಧರಿಸಿ ಪರಿಷ್ಕರಣೆ ನಡೆಯಲಿದೆ. 18 ವರ್ಷ ತುಂಬಿದವರು ಹೆಸರನ್ನು ಸೇರಿಸಬಹುದು. ಹೆಸರು ತೆಗೆಸುವುದು, ತಿದ್ದುಪಡಿ ಹಾಗೂ ವಿಳಾಸ ಬದಲಾವಣೆ ಇದ್ದಲ್ಲಿ ಈ ಅವಧಿಯಲ್ಲಿ ಮಾಡಿಸಿಕೊಳ್ಳಬಹುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.‌

‘ಚುನಾವಣಾ ಆಯೋಗದ ನಿರ್ದೇ ಶನದಂತೆ ವಿಶೇಷ ಅಭಿಯಾನ ನಡೆಸಿ ಎಲ್ಲ 18 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಗಳನ್ನು ಗುರುವಾರ ಪ್ರಕಟಿಸಲಾಗಿದೆ. ಡಿ. 6ರಿಂದ 21ರವರೆಗೆ ನಡೆಯುವ ಗ್ರಾಮಸಭೆ, ಸ್ಥಳೀಯ ಸಂಸ್ಥೆಗಳು ಹಾಗೂ ರಹವಾಸಿಗಳ ಸಂಘಗಳ ಸಭೆಗಳಲ್ಲಿ ಪಟ್ಟಿಯನ್ನು ಓದಿ ತಿಳಿಸಲಾಗುವುದು. ರಾಜಕೀಯ ಪಕ್ಷಗಳ ಮತಗಟ್ಟೆಗಳ ಪ್ರತಿನಿಧಿಗಳು ಆಕ್ಷೇಪಣೆ ಸಲ್ಲಿಸಲು ಡಿ.3ರಿಂದ 17ರವರೆಗೆ ಅವಕಾಶವಿದೆ. ಮತದಾರರು ಡಿ.29ರವರೆಗೆ ಆಕ್ಷೇಪಣೆ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು ಫೆ. 15ರಂದು ಪ್ರಕಟಿಸಲಾಗುವುದು’ ಎಂದು ಹೇಳಿದರು.

ನ್ಯೂನತೆಗಳನ್ನು ಸರಿಪಡಿಸಬಹುದು: ‘ಅರ್ಹರು ಪಟ್ಟಿಗೆ ಹೆಸರು ಸೇರಿಸಲು ನಮೂನೆ ಸಂಖ್ಯೆ 6ರಲ್ಲಿ ವಿವರಗಳನ್ನು ಭರ್ತಿ ಮಾಡಿ, ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ನೀಡಬಹುದು. ಅಂಚೆ ಮೂಲಕವೂ ಸಲ್ಲಿಸಬಹುದು. ಅಂತರ್ಜಾಲದಲ್ಲಿ ಎನ್‌ವಿಎಸ್‌ಪಿ (ನ್ಯಾಷನಲ್‌ ವೋಟರ್ಸ್‌ ಸರ್ವಿಸ್‌ ಪೋರ್ಟಲ್‌) ಮೂಲಕ, ಸಾಮಾನ್ಯ ಸೇವಾ ಕೇಂದ್ರಗಳಲ್ಲೂ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು’ ಎಂದರು.

‘ಕರಡು ಪಟ್ಟಿಯನ್ನು ಎಲ್ಲ ಮತ ದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿ ಕಚೇರಿ ಕಾರ್ಯಾ ಲಯದಲ್ಲಿ ಪ್ರಕಟಿಸಲಾಗಿದೆ. www.ceokarnataka.kar.nic.inನಲ್ಲೂ ಲಭ್ಯವಿದೆ. ಈಗಾಗಲೇ ನಮೂದಿಸಿರುವ ಅರ್ಹ ಮತದಾರರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ’ ಎಂದು ಸ್ಪಷ್ಟ ಪಡಿಸಿದರು.

ವಿ.ವಿ ಪ್ಯಾಟ್ಸ್‌ ಬಳಕೆ:‘ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ತಮ್ಮ ವ್ಯಾಪ್ತಿಯಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಹಾಯ ಮಾಡಲು ಮತಗಟ್ಟೆ ಏಜೆಂಟರನ್ನು ನೇಮಿಸಬೇಕು. ವಿವರವನ್ನು ನೋಂದಣಾಧಿಕಾರಿಗೆ ನೀಡಬೇಕು’ ಎಂದು ವಿವರಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ 1,200 ಹಾಗೂ ನಗರದಲ್ಲಿ 1,400ಕ್ಕಿಂತ ಹೆಚ್ಚಿನ ಮತದಾರರು ಇರುವ ಮತಗಟ್ಟೆಗಳನ್ನು ಬೇರ್ಪಡಿಸಿ, ಹೊಸ ಮತಗಟ್ಟೆಗಳನ್ನು ಮಾಡಲಾಗಿದೆ. ಹಿಂದೆ 4,040 ಮತಗಟ್ಟೆಗಳಿದ್ದವು. ಈಗ, 4,408 ಇವೆ. ಹೊಸದಾಗಿ 368 ಮತಗಟ್ಟೆ ರಚಿಸಲಾಗಿದೆ’ ಎಂದು ತಿಳಿಸಿದರು.

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಇವಿಎಂಗಳ ಜತೆ ವಿ.ವಿ ಪ್ಯಾಟ್‌ಗಳನ್ನು (ಮತದಾನ ಮಾಡಿರುವುದನ್ನು ಖಾತರಿಪಡಿಸಿಕೊಳ್ಳುವ ಯಂತ್ರ) ಬಳಸಲಾಗುವುದುಡಡ. ಇದರಿಂದ ಮತದಾರರಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಹೀಗಾಗಿ, ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಲಾಗುವುದು’ಎಂದು ಅವರು ಹೇಳಿದರು.

* * 

ಅರ್ಹ ಮತದಾರರು ಪಟ್ಟಿಯಲ್ಲಿ ಹೆಸರಿದೆಯೇ ಎನ್ನುವುದನ್ನು ಈಗಲೇ ಖಚಿತಪಡಿಸಿಕೊಳ್ಳಬೇಕು. ಮತದಾನದ ದಿನದಂದು ಕೊರಗಿದರೆ ಪ್ರಯೋಜನವಿಲ್ಲ.
ಎಸ್‌. ಜಿಯಾವುಲ್ಲಾ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT