ಗುಬ್ಬಿ

ಸ್ವಾರ್ಥಕ್ಕೆ ಜಾತಿ, ಧರ್ಮ ಬಳಸಿದರೆ ಅಶಾಂತಿ

‘ಪ್ರಾಚೀನತೆ ಹೊಂದಿರುವ ಧರ್ಮಗಳಲ್ಲಿ ವೀರಶೈವ ಧರ್ಮವೂ ಒಂದು. ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಂಡು ಸಮಾಜವನ್ನು ಹಾಳು ಮಾಡುತ್ತಿರುವುದು ಸರಿಯಲ್ಲ.

ಗುಬ್ಬಿ: ‘ಸ್ವಾರ್ಥಕ್ಕೆ ಜಾತಿ-ಧರ್ಮಗಳನ್ನು ಬಳಸಿಕೊಂಡರೆ ಸಮಾಜದಲ್ಲಿ ಅಶಾಂತಿ ಆವರಿಸಲಿದೆ’ ಎಂದು ನೊಣವಿನಕೆರೆಯ ಕರಿವೃಷಭ ದೇಶೀಕೇಂದ್ರ ಶೀವಯೋಗೀಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಸಂತೆ ಆವರಣದಲ್ಲಿ ಈಚೆಗೆ ಅಭಯ ಆಂಜನೇಯ ಸ್ವಾಮಿಯ ರಜತ ಕವಚ ಧಾರಣೆ ಹಾಗೂ ವಿಮಾನಗೋಪುರ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿ, ‘ಪ್ರಾಚೀನತೆ ಹೊಂದಿರುವ ಧರ್ಮಗಳಲ್ಲಿ ವೀರಶೈವ ಧರ್ಮವೂ ಒಂದು. ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಂಡು ಸಮಾಜವನ್ನು ಹಾಳು ಮಾಡುತ್ತಿರುವುದು ಸರಿಯಲ್ಲ. ವೈಯುಕ್ತಿಕ ಬೆಳವಣಿಗೆಗೆ ಸಮಾಜವನ್ನು ಬಳಸಿಕೊಂಡರೆ ಧರ್ಮದಲ್ಲಿನ ಶ್ರದ್ಧೆ, ಶಿಸ್ತು ನಾಶವಾಗಲಿದೆ’ ಎಂದು ಹೇಳಿದರು.

ಸಾಹಿತ್ಯ ಚಿಂತಕ ಎಚ್.ಕೆ.ನರಸಿಂಹಮೂರ್ತಿ ಮಾತನಾಡಿ, ‘ಶತಮಾನಗಳ ಇತಿಹಾಸ ವೀರಶೈವ ಧರ್ಮಕ್ಕೆ ಇದೆ. ಇತ್ತಿಚೇಗೆ ಕೆಲ ರಾಜಕೀಯ ಮುಖಂಡರು ಸಮಾಜದ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಕೆಲವರು ಸಭೆ ಸಮಾರಂಭಗಳಲ್ಲಿ ಹೇಗೆ ಬೇಕೋ ಹಾಗೆ ಮಾತನಾಡಿ, ಸಮಾಜದ ನೆಮ್ಮದಿ ಹಾಳುಮಾಡುತ್ತಿದ್ದಾರೆ’ ಎಂದರು.

ತೆವಡೇಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ತೊರೇಮಠದ ರಾಜಶೇಖರ ಸ್ವಾಮೀಜಿ, ಶಾಸಕ ಎಸ್.ಆರ್.ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಸದಸ್ಯರಾದ ಮೋಹನ್, ಕಮಲಮ್ಮ, ರೂಪಾ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ, ಎಸ್.ಡಿ.ದಿಲೀಪ್ ಕುಮಾರ್, ನಾರಾಯಣ್, ಸುರೇಶ್, ಗೋವಿಂದಪ್ಪ, ಪಟೇಲ್ ಕೆಂಪೇಗೌಡ, ಮಾರುತೇಶ್, ರಾಮಚಂದ್ರಪ್ಪ, ರಂಗನಾಥ್, ಶಿವಕುಮಾರ್, ರವೀಶ್, ಗಂಗಣ್ಣ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ರೈತರ ಸಾಲ ಮನ್ನಾಗೆ ಹಿಂದೇಟು ಏಕೆ?

ತುಮಕೂರು
ರೈತರ ಸಾಲ ಮನ್ನಾಗೆ ಹಿಂದೇಟು ಏಕೆ?

23 Apr, 2018
ಶಿರಾ, ಗುಬ್ಬಿ, ಪಾವಗಡದಲ್ಲಿ ಮಳೆ ಆರ್ಭಟ: ಅಸ್ತವ್ಯಸ್ತ

ತುಮಕೂರು
ಶಿರಾ, ಗುಬ್ಬಿ, ಪಾವಗಡದಲ್ಲಿ ಮಳೆ ಆರ್ಭಟ: ಅಸ್ತವ್ಯಸ್ತ

23 Apr, 2018

ತುಮಕೂರು
ಭೂ ಫಲವತ್ತತೆಯ ಮಾದರಿ ತೋಟ

ಭೂಮಿಗೆ ವಿಷ ಉಣಿಸದಿದ್ದರೆ ನಮ್ಮ ಬದುಕು ಬಂಗಾರವಾಗುತ್ತದೆ. ಒಂದು ವೇಳೆ ವಸುಂಧರೆಗೆ ವಿಷ ಇಟ್ಟರೆ ಆಕೆಯೂ ನಮಗೆ ವಿಷ ಉಣಿಸುವಳು. ಈ ಮಾತನ್ನು ಸ್ಪಷ್ಟವಾಗಿ...

22 Apr, 2018

ಪಾವಗಡ
‘ಸೋಲಾರ್’ ತಾಪಕ್ಕೆ ಬೆವರಿದ ಜನರು

ವಿಶ್ವದ ಬೃಹತ್ ಸೋಲಾರ್ ಪಾರ್ಕ್ ತಾಲ್ಲೂಕಿನಲ್ಲಿ ನಿರ್ಮಾಣವಾಗುತ್ತಿದೆ. ಆದರೆ ಸೋಲಾರ್ ಪಾರ್ಕ್ ನಿರ್ಮಾಣದ ಹೊಣೆ ಹೊತ್ತಿರುವ ಸಂಸ್ಥೆಗಳು, ಕಂಪನಿಗಳು ಹಸಿರೀಕರಣದತ್ತ ಗಮನಹರಿಸದ ಕಾರಣ ಈ...

22 Apr, 2018
ಅಭಿವೃದ್ಧಿ ಪಥದಲ್ಲಿ ‘ನೆಲ’ಕಚ್ಚಿದ ಹಸಿರು

ತುಮಕೂರು
ಅಭಿವೃದ್ಧಿ ಪಥದಲ್ಲಿ ‘ನೆಲ’ಕಚ್ಚಿದ ಹಸಿರು

22 Apr, 2018