ಕೂಡ್ಲಿಗಿ

ಮದ್ಯಂಗಡಿ ತೆರವುಗೊಳಿಸಲು ಆಗ್ರಹ

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಇನ್‌ಸ್ಪೆಕ್ಟರ್‌ ಸಿದ್ದಪ್ಪ, ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಧರಣಿ ಹಿಂಪಡೆಯರಿ ಎಂದು ಮನವಿ ಮಾಡಿದರು.

ಕೂಡ್ಲಿಗಿ: ಉಜ್ಜನಿ ಗ್ರಾಮದ ಮಧ್ಯಭಾಗದಲ್ಲಿರುವ ಮದ್ಯದಂಗಡಿ ತೆರವುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಮುಖಂಡರು ಹಾಗೂ ಗ್ರಾಮಸ್ಥರು ಈಚೆಗೆ ಗ್ರಾಮ ಪಂಚಾಯ್ತಿ ಆವರಣದಲ್ಲಿ ಉಪವಾಸ ಸತ್ಯಗ್ರಹ ನಡೆಸಿದರು.

‘ಪ್ರತಿದಿನ ಭಕ್ತರು ಮರುಳ ಸಿದ್ದೇಶ್ವರ ದೇವಸ್ಥಾನಕ್ಕೆ ಬರುತ್ತಾರೆ. ದೇವಸ್ಥಾನದ ಮಾರ್ಗ ಹಾಗೂ ರಥ ನಿಲ್ಲಿಸುವ ಸ್ಥಳದ ಪಕ್ಕದಲ್ಲಿ ಮದ್ಯದಂಗಡಿ ತೆರೆಯಲಾಗಿದೆ. ಮದ್ಯಸೇವನೆ ಮಾಡಿದವರು ದೇವಸ್ಥಾನದ ವಾತಾವರಣವನ್ನು ಗಲೀಜು ಮಾಡುತ್ತಿದ್ದಾರೆ. ಕೂಡಲೇ ಮದ್ಯದಂಗಡಿ ತೆರವುಗೊಳಿಸಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಮಹೇಶ್ ಆಗ್ರಹಿಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಇನ್‌ಸ್ಪೆಕ್ಟರ್‌ ಸಿದ್ದಪ್ಪ, ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಧರಣಿ ಹಿಂಪಡೆಯರಿ ಎಂದು ಮನವಿ ಮಾಡಿದರು. ಆದರೆ, ಧರಣಿನಿರತರು ಬೇಡಿಕೆ ಈಡೇರುವವರಿಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಮುಖಂಡರಾದ ಬಂಗಿ ಭೀಮಪ್ಪ, ಮಂಜುನಾಥ ಗೌಡ, ಬಸವರಾಜಪ್ಪ, ಪಾಲಪ್ಪ, ಪ್ರಕಾಶ, ಷಣ್ಮುಖಪ್ಪ, ಕೆಂಚಪ್ಪ, ಚೌಡಪ್ಪ, ಹರಿಜನ ಬಸವರಾಜ, ಭೀಮಣ್ಣ, ಪರುಸಪ್ಪ, ಶಫಿ ಭಾಗವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಎಲ್ಲೆಡೆ ಎಳ್ಳು ಬೆಲ್ಲದ ಸವಿ...

ಬಳ್ಳಾರಿ
ಎಲ್ಲೆಡೆ ಎಳ್ಳು ಬೆಲ್ಲದ ಸವಿ...

16 Jan, 2018

ಕಂಪ್ಲಿ
‘ಸದಾಶಿವ ಆಯೋಗದ ವರದಿ ಅವಾಸ್ತವಿಕ’

‘ಸಮಾನತೆ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಿದ ಸಿದ್ಧರಾಮೇಶ್ವರರ ಆದರ್ಶ, ಮೌಲ್ಯಗಳು ಸಾರ್ವಕಾಲಿಕ’

16 Jan, 2018
ತುಂಗೆಯಲ್ಲಿ ಮಿಂದೆದ್ದ ಭಕ್ತರು

ಹೊಸಪೇಟೆ
ತುಂಗೆಯಲ್ಲಿ ಮಿಂದೆದ್ದ ಭಕ್ತರು

15 Jan, 2018

ಹೊಸಪೇಟೆ
ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಸೂಚನೆ

ಈ ವಿಷಯದ ಕುರಿತು ಮಾಹಿತಿ ನೀಡುವಂತೆ ಆಯುಕ್ತರು ನಗರಸಭೆಗೆ ಸೂಚನೆ ಕೊಟ್ಟಿದ್ದರು. ಸುಳ್ಳು ಮಾಹಿತಿ ನೀಡಿ ಖಾತೆ ಬದಲಾಯಿಸಿಕೊಳ್ಳಲಾಗಿದೆ ಎಂದು ನಗರಸಭೆ ವರದಿ ನೀಡಿತ್ತು....

15 Jan, 2018
ಆಗ ಆಟೊ, ಈಗ ಕ್ಯಾಲೆಂಡರ್‌ ತಂತ್ರ

ಹೊಸಪೇಟೆ
ಆಗ ಆಟೊ, ಈಗ ಕ್ಯಾಲೆಂಡರ್‌ ತಂತ್ರ

15 Jan, 2018