ಗೌರಿಬಿದನೂರು

ಎಮ್ಮೆ ಗುಟ್ಟೆ ಅರಣ್ಯದಲ್ಲಿ ಮರಗಳ ಮಾರಣ ಹೋಮ

ತಾಲ್ಲೂಕಿನ ಸೋನಗಾನಹಳ್ಳಿ ಗ್ರಾಮದ ಎಮ್ಮೆ ಗುಟ್ಟೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳ ಕಳ್ಳಸಾಗಾಣಿಕೆ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎನ್ನುವ ಆರೋಪದ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಸೋನಗಾನಹಳ್ಳಿ ಗ್ರಾಮದ ಎಮ್ಮೆ ಗುಟ್ಟೆ ಅರಣ್ಯ ಪ್ರದೇಶದಲ್ಲಿ ಕತ್ತರಿಸಿದ ಮರಗಳು

ಗೌರಿಬಿದನೂರು: ತಾಲ್ಲೂಕಿನ ಸೋನಗಾನಹಳ್ಳಿ ಗ್ರಾಮದ ಎಮ್ಮೆ ಗುಟ್ಟೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರಗಳ ಕಳ್ಳಸಾಗಾಣಿಕೆ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎನ್ನುವ ಆರೋಪದ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

‘ಎಮ್ಮೆಗುಟ್ಟೆ ಅರಣ್ಯ ಪ್ರದೇಶದ ಕಾವಲುಗಾರರನ್ನು ಕುರೂಡಿ ಬಳಿಯಿರುವ ನರ್ಸರಿಯಲ್ಲಿ ಕೆಲಸಕ್ಕೆ ನೇಮಕ ಮಾಡಿರುವುದರಿಂದ ಕಳೆದ ಎರಡು ತಿಂಗಳಿನಿಂದ ಮರಗಳ್ಳರು ಹಗಲಿನಲ್ಲಿ ಸಾವಿರಾರು ಮರಗಿಡಗಳನ್ನು ಕಡಿದು ರಾತ್ರಿ ಸಮಯದಲ್ಲಿ ಟ್ರ್ಯಾಕ್ಟರ್ ಮೂಲಕ ಸಾಗಿಸುತ್ತಿದ್ದಾರೆ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸೋನಗಾನಹಳ್ಳಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಗೋವಿಂದರಾಜು ತಿಳಿಸಿದರು.

‘ಎಮ್ಮೆ ಗುಟ್ಟೆ ಅರಣ್ಯ ಪ್ರದೇಶಕ್ಕೆ ತಕ್ಷಣವೇ ಕಾವಲುಗಾರರನ್ನು ನೇಮಕ ಮಾಡಬೇಕು. ಈ ಪರಿಸರ ನಾಶವನ್ನು ತಡೆಗಟ್ಟಬೇಕು. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕಡಿಯುತ್ತಿರುವ ಮರಗಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು
ಆಗ್ರಹಿಸಿದರು.

ಈ ಕುರಿತು ಅರಣ್ಯ ಇಲಾಖೆ ಅಧಿಕಾರಿ ಕೃಷ್ಣ ಅವರನ್ನು ಪ್ರಶ್ನಿಸಿದರೆ, ‘ಸೋನಗಾನಹಳ್ಳಿ ಎಮ್ಮೆಗುಟ್ಟೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡಿದಿರುವ ಮರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.ಮರ ಕಡಿದಿರುವ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳೀಯರೆ ಈ ಕೃತ್ಯ ನಡೆಸುತ್ತಿರುವುದು ತಿಳಿದು ಬಂದಿದೆ. ಶೀಘ್ರದಲ್ಲೇ ಅವರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು’ ಎಂದು ತಿಳಿಸಿದರು.

 

Comments
ಈ ವಿಭಾಗದಿಂದ ಇನ್ನಷ್ಟು
ಅಸಮಾಧಾನ ಹುಟ್ಟುಹಾಕಿದ ಮುಖ್ಯಮಂತ್ರಿ ಮಾತು

ಚಿಕ್ಕಬಳ್ಳಾಪುರ
ಅಸಮಾಧಾನ ಹುಟ್ಟುಹಾಕಿದ ಮುಖ್ಯಮಂತ್ರಿ ಮಾತು

22 Jan, 2018
ಸರಳ ಮದುವೆ ಹೆಚ್ಚು ನಡೆಯಲಿ

ಚಿಕ್ಕಬಳ್ಳಾಪುರ
ಸರಳ ಮದುವೆ ಹೆಚ್ಚು ನಡೆಯಲಿ

22 Jan, 2018
ಎರಡನೇ ಬಾರಿಯೂ ಮುಂದುವರಿದ ಗೊಂದಲ?

ಚಿಕ್ಕಬಳ್ಳಾಪುರ
ಎರಡನೇ ಬಾರಿಯೂ ಮುಂದುವರಿದ ಗೊಂದಲ?

21 Jan, 2018
ಬಾಗೇಪಲ್ಲಿ: ಇಂದು ಬಡವರ ಮದುವೆ ‘ಹಬ್ಬ’

ಚಿಕ್ಕಬಳ್ಳಾಪುರ
ಬಾಗೇಪಲ್ಲಿ: ಇಂದು ಬಡವರ ಮದುವೆ ‘ಹಬ್ಬ’

21 Jan, 2018
ಮಳೆಗಾಲದಲ್ಲಿ ನರಕ, ವರ್ಷವಿಡೀ ನಡುಕ!

ಚಿಕ್ಕಬಳ್ಳಾಪುರ
ಮಳೆಗಾಲದಲ್ಲಿ ನರಕ, ವರ್ಷವಿಡೀ ನಡುಕ!

20 Jan, 2018