ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಯಿಂದ 72 ನಾಣ್ಯಗಳನ್ನು ಹೊರತೆಗೆದ ವೈದ್ಯರು

20 ವರ್ಷಗಳಿಂದ ಲೋಹದ ವಸ್ತು ನುಂಗುವ ಅಭ್ಯಾಸ!
Last Updated 2 ಡಿಸೆಂಬರ್ 2017, 13:08 IST
ಅಕ್ಷರ ಗಾತ್ರ

ನಾಸಿಕ್‌: ಮಹಾರಾಷ್ಟ್ರದ ಫಾಲ್ಗರ್‌ ಜಿಲ್ಲೆಯ ಬುಡುಕಟ್ಟು ಸಮುದಾಯದ ವ್ಯಕ್ತಿಯೊಬ್ಬರ ಹೊಟ್ಟೆಯಿಂದ 72 ನಾಣ್ಯಗಳನ್ನು ಹೊರತೆಗೆಯಲಾಗಿದೆ.

50 ವರ್ಷ ವಯಸ್ಸಿನ ಕೃಷ್ಣ ಸೋಮಲ್ಯ ಸಾಂಬಾರ್‌ ಸುಮಾರು 20 ವರ್ಷಗಳಿಂದ ನಾಣ್ಯಗಳನ್ನು ನುಂಗುವ ಅಭ್ಯಾಸ ಮಾಡಿಕೊಂಡಿದ್ದರು. ಮಾನಸಿಕ ಅಸ್ವಸ್ಥರಾದ ಇವರಿಗೆ ಗುರುವಾರ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೊಟ್ಟೆಯೊಳಗೆ ಸೇರಿದ್ದ 72 ನಾಣ್ಯಗಳನ್ನು ತೆಗೆಯಲಾಗಿದೆ.

ಲೋಹದ ವಸ್ತುಗಳನ್ನು ನುಂಗುವಂತೆ ಪ್ರೇರೇಪಿಸುವ ಅಪರೂಪದ ಮಾನಸಿಕ ಕಾಯಿಲೆ(ಪಿಕಾ)ಗೆ ಒಳಗಾಗಿರುವ ಕೃಷ್ಣ ಕರುಳಿಗೆ ಸಂಬಂಧಿಸಿದ ಬಿಜೋರ್‌ನಿಂದಲೂ ಬಳಲುತ್ತಿದ್ದರು. ಕಳೆದ 20 ವರ್ಷಗಳಿಂದ ಕಬ್ಬಿಣ ಮತ್ತು ಲೋಹದ ನಾಣ್ಯಗಳನ್ನು ನುಂಗುವ ಅಭ್ಯಾಸ ಬೆಳೆದಿದ್ದು, ವಿಸರ್ಜನೆಯ ಮೂಲಕ ಕೆಲವು ನಾಣ್ಯಗಳು ಹೊರ ಬಂದಿದ್ದು, ಹೊಟ್ಟೆಯಲ್ಲಿ ಮತ್ತಷ್ಟು ಸಂಗ್ರಹಗೊಂಡಿತ್ತು. ಇದು ವಾಂತಿ ಹಾಗೂ ಅಜೀರ್ಣ ಸಮಸ್ಯೆಗಳನ್ನು ಹೆಚ್ಚಿಸಿತ್ತು ಎಂದು ವೈದ್ಯರಾದ ಡಾ.ಅಮಿತ್‌ ಕೀಲೆ ಮಾಹಿತಿ ನೀಡಿದ್ದಾರೆ.

ಮೂರೂವರೆ ಗಂಟೆಗಳ ಎಂಡೋಸ್ಕೋಪಿಕ್‌ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಕೃಷ್ಣ ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT