ಹುಣಸೂರು

ಹುಣಸೂರಿನಲ್ಲಿ ಶಾಂತಿ ಸ್ಥಾಪನೆಗೆ ಬದ್ಧ; ಎಸ್ಪಿ

ಶಾಂತಿಯುತ ಹಬ್ಬ ಆಚರಣೆಯಿಂದ ಮನಸ್ಸಿಗೆ ಮುದ ಸಿಗುತ್ತದೆ. ಪೊಲೀಸ್‌ ಭದ್ರತೆ, ನಿರ್ಬಂಧನೆಯಲ್ಲಿ ಹಬ್ಬ ಆಚರಿಸುವುದರಿಂದ ಮನಶಾಂತಿ ಸಿಗುವುದಿಲ್ಲ

ರವಿ ಚನ್ನಣ್ಣನವರ

ಹುಣಸೂರು: ನಗರದಲ್ಲಿ ಶಾಂತಿ, ಸೌಹಾರ್ದ ಸ್ಥಾಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಡಿ.5ರಂದು ಸರ್ವ ಪಕ್ಷಗಳು ಹಾಗೂ ಎರಡೂ ಕೋಮಿನ ಮುಖಂಡರ ಸಭೆ ನಡೆಸಿ ಶಾಂತಿಯುತವಾಗಿ ಹಬ್ಬ ಆಚರಿಸುವ ಸೂತ್ರ ಕಂಡು ಹಿಡಿಯಲಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಹೇಳಿದರು. ಇಲ್ಲಿ ಹನುಮ ಜಯಂತಿ ಹಾಗೂ ಈದ್ ಮಿಲಾದ್‌ ಸಮಯದಲ್ಲಿ ಮಾತ್ರ ಕೋಮು ಸಂಘರ್ಷದ ಬೆಂಕಿ ಹೊತ್ತುತ್ತಿದೆ.

ಉಳಿದ ಸಮಯದಲ್ಲಿ ಆಶಾಂತಿ ಉಲ್ಬಣವಾಗುತ್ತಿಲ್ಲ. ಈ ಸಂಬಂಧ ಎರಡೂ ಕೋಮುಗಳ ಮುಖಂಡರೊಂದಿಗೆ ಸಮನ್ವಯ ಸಭೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಇಚ್ಚಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸಭೆಗೆ ಜನಪ್ರತಿನಿಧಿಗಳು ಹಾಗೂ ಎರಡೂ ಕೋಮಿನ ಮುಖಂಡರಿಗೆ ಆಹ್ವಾನಿಸಲಾಗಿದೆ. ಕೋಮು ಘರ್ಷಣೆಗೆ ಅಂತ್ಯ ಹಾಡುವ ತೀರ್ಮಾನ ತೆಗೆದುಕೊಂಡು ಹುಣಸೂರಿನಲ್ಲಿ ದಶಕದ ಹಿಂದೆ ಇದ್ದಂತಹ ಶಾಂತಿ ಸ್ಥಾಪಿಸಿ ಸೌಹಾರ್ದತೆಯಿಂದ ಹಬ್ಬ ಆಚರಿಸುವ ವಾತಾವರಣ ನಿರ್ಮಾಣ ಮಾಡಲು ಜಿಲ್ಲಾಡಳಿತ ಬದ್ಧವಾಗಿದೆ ಎಂದರು.

ಶಾಂತಿಯುತ ಹಬ್ಬ ಆಚರಣೆಯಿಂದ ಮನಸ್ಸಿಗೆ ಮುದ ಸಿಗುತ್ತದೆ. ಪೊಲೀಸ್‌ ಭದ್ರತೆ, ನಿರ್ಬಂಧನೆಯಲ್ಲಿ ಹಬ್ಬ ಆಚರಿಸುವುದರಿಂದ ಮನಶಾಂತಿ ಸಿಗುವುದಿಲ್ಲ ಎಂದರು. ಭದ್ರತೆ ದೃಷ್ಟಿಯಿಂದ ಕಳೆದ ಮೂರು ವರ್ಷದಿಂದ ಕೆಲ ರಸ್ತೆಗಳಲ್ಲಿ ಮೆರವಣಿಗೆ ನಿರ್ಬಂಧಿಸಲಾಗಿದೆ. ಈ ರಸ್ತೆಗಳಲ್ಲಿ ತೆರಳುವುದರಿಂದ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ.

ಈ ಬಗ್ಗೆ ಕೆಲವರು ಇಲಾಖೆಗೆ ಅಭಿಪ್ರಾಯ ತಿಳಿಸಿದ್ದಾರೆ. ಸಭೆಯಲ್ಲಿ ರಸ್ತೆ ನಿರ್ಬಂಧ ಕುರಿತು ಚರ್ಚಿಸಿ ತೆರವುಗೊಳಿಸುವ ಅಥವಾ ಮುಂದುವರೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

* * 

ಹುಣಸೂರು ಕೋಮು ಸಂಘರ್ಷಮುಕ್ತ ನಗರವಾಗಿ ಪರಿವರ್ತಿಸಿ ವರ್ಗಾವಣೆ ಆಗಬೇಕೆಂಬ ಆಸೆ ಇದೆ. ಇದಕ್ಕೆ ಜನರು ಸಹಕರಿಸುತ್ತಾರೆಂಬ ವಿಶ್ವಾಸ ಇದೆ
ರವಿ ಡಿ.ಚನ್ನಣ್ಣನವರ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Comments
ಈ ವಿಭಾಗದಿಂದ ಇನ್ನಷ್ಟು

ಮೈಸೂರು
ಅಭಿವೃದ್ಧಿ ನಡುವೆ ಕೊಳೆಗೇರಿ ಕಡೆಗಣನೆ

ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಐದು ವರ್ಷಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಅದರೆ, ಸಮಸ್ಯೆಗಳೂ ಉಳಿದುಕೊಂಡಿವೆ. ಕೊಳೆಗೇರಿಗಳಲ್ಲಿ ವಾಸವಿರುವ ಜನರನ್ನು ಕಡೆಗಣಿಸಿರುವುದು ಪ್ರಮುಖ ಲೋಪವಾಗಿದೆ.

21 Apr, 2018

ಮೈಸೂರು
ನಾಮಪತ್ರ ಸಲ್ಲಿಕೆಯಲ್ಲೂ ಬಲಪ್ರದರ್ಶನ

ಇಡೀ ರಾಜ್ಯದ ಗಮನ ಸೆಳೆದಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪರಸ್ಪರ ಪೈಪೋಟಿ ನಡೆಸಲು ತೊಡೆತಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಅವರು...

21 Apr, 2018
ಕ್ಯಾತಮಾರನಹಳ್ಳಿ ಉದ್ವಿಗ್ನ: ನಿಷೇಧಾಜ್ಞೆ ಜಾರಿ

ಮೈಸೂರು
ಕ್ಯಾತಮಾರನಹಳ್ಳಿ ಉದ್ವಿಗ್ನ: ನಿಷೇಧಾಜ್ಞೆ ಜಾರಿ

21 Apr, 2018
ಟಿಕೆಟ್‌ ಗಿಟ್ಟಿಸುವಲ್ಲಿ ರಾಮದಾಸ್‌ ಯಶಸ್ವಿ

ಮೈಸೂರು
ಟಿಕೆಟ್‌ ಗಿಟ್ಟಿಸುವಲ್ಲಿ ರಾಮದಾಸ್‌ ಯಶಸ್ವಿ

21 Apr, 2018

ವರುಣಾ
ನಾಮಪತ್ರ ಸಲ್ಲಿಕೆಗೆ ಮುನ್ನ ಸ್ವಗ್ರಾಮದಲ್ಲಿ ಸಿ.ಎಂ ದೇಗುಲ ಭೇಟಿ

ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆಗೂ ಮುನ್ನ ಶುಕ್ರವಾರ ಸ್ವಗ್ರಾಮ ಸಿದ್ದರಾಮನಹುಂಡಿಗೆ...

21 Apr, 2018