ಮಹಾಲಿಂಗಪುರ

ಲಕ್ಷ್ಮಿ ದೇವಿ ಜಾತ್ರೆ: ಅಗ್ನಿಕುಂಡ ಹಾಯ್ದ ಅರ್ಚಕಿ

ಭಕ್ತರ ಭಾಗ್ಯದಾತೆ, ಮಹಿಮಾಶಾಲಿ ಲಕ್ಷ್ಮಿ ಜಾತ್ರೆಗೆ ಮಹಾಲಿಂಗಪುರ ಹಾಗೂ ಸುತ್ತ-ಮುತ್ತಲಿನ ಊರುಗಳ ನೂರಾರು ಭಕ್ತರು ಆಗಮಿಸಿ ಪೂಜೆಸಲ್ಲಿಸಿದರು.

ಮಹಾಲಿಂಗಪುರದ ಶಾಂತಿ ನಿಕೇತನ ಬಡಾವಣೆಯ ಲಕ್ಷ್ಮೀದೇವಿ ಜಾತ್ರಾ ನಿಮಿತ್ತ ಶಾಂತವ್ವ ನಂದಿ ಅಗ್ನಿಕುಂಡ ಹಾಯ್ದು ಭಕ್ತಿಯ ಪರಾಕಾಷ್ಠೆ ಮೆರೆದರು

ಮಹಾಲಿಂಗಪುರ: ಸ್ಥಳೀಯ ಶಾಂತಿನಿಕೇತನ ಬಡಾವಣೆಯ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಶುಕ್ರವಾರ ಜರುಗಿತು. ಜಾತ್ರೆಯ ನಿಮಿತ್ತ ಬೆಳಿಗ್ಗೆ 6 ಘಂಟೆಗೆ ಅಯ್ಯಪ್ಪ ಮಾಲಾಧಾರಿಗಳಿಂದ ರುದ್ರಾಭಿಷೇಕ, 10 ಗಂಟೆಗೆ ಮಹಾಪೂಜೆ, 11 ಗಂಟೆಗೆ 501 ಜನ ಮುತ್ತೈದೆಯರ ಉಡಿತುಂಬವ ಕಾರ್ಯಕ್ರಮಗಳು ಜರುಗಿದವು.

ಮಧ್ಯಾಹ್ನ 12 ಘಂಟೆಗೆ ಲಕ್ಷ್ಮಿ ದೇವಿಯ ಅರ್ಚಕಿ ಶಾಂತವ್ವ ನಂದಿ ಅಗ್ನಿಕುಂಡ ಹಾಯ್ದು ಭಕ್ತಿಯ ಪರಾಕಾಷ್ಠೆ ಮೆರೆದರು. ನಂತರ ಮಹಾ ಮಂಗಳಾರತಿ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು. ಭಕ್ತರ ಭಾಗ್ಯದಾತೆ, ಮಹಿಮಾಶಾಲಿ ಲಕ್ಷ್ಮಿ ಜಾತ್ರೆಗೆ ಮಹಾಲಿಂಗಪುರ ಹಾಗೂ ಸುತ್ತ-ಮುತ್ತಲಿನ ಊರುಗಳ ನೂರಾರು ಭಕ್ತರು ಆಗಮಿಸಿ ಪೂಜೆಸಲ್ಲಿಸಿದರು.

ಸುರೇಶ ನಂದಿ, ರವಿ ಸುಂಬಾಳೆ, ರಮೇಶ ಮಡಿವಾಳರ, ವಿನೋದ ಕಡಪಟ್ಟಿ, ಜಟೆಪ್ಪ ವಾಲಿಕಾರ, ಮುಕುಂದ ಬಡಿಗೇರ, ಗುರುರಾಜ ಅಂಬಿ, ರಾಯಪ್ಪ ನಾಯ್ಕರ್, ಸರೋಜನಿ ಬಡೀಗೇರ, ಗೀತಾ ಅಂಬಿ, ಶೀತಲ್ ನಾಶಿ, ಸುಶೀಲಾ ಘಟ್ನಟ್ಟಿ, ದಾನಮ್ಮ ಬಂಡಿ, ಮಹಾದೇವಿ ರಾಚನ್ನವರ, ಸಂಗೀತಾ ವಿಜಾಪೂರ, ಸೋನಾಲಿ ಸಾಲಾಪೂರ, ಮಂಜುಳಾ ಹಿಡಕಲ್ ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಪ್ರಯಾಣಿಕರಿಗೆ 8 ಕಿ.ಮೀ ನರಕ ದರ್ಶನ

ಬಾದಾಮಿ
ಪ್ರಯಾಣಿಕರಿಗೆ 8 ಕಿ.ಮೀ ನರಕ ದರ್ಶನ

23 Jan, 2018
ನಿವೇಶನ ಇನ್ನೂ ಗಗನ ಕುಸುಮ!

ಹುನಗುಂದ
ನಿವೇಶನ ಇನ್ನೂ ಗಗನ ಕುಸುಮ!

23 Jan, 2018

ಜಮಖಂಡಿ
ಮಿನಿವಿಧಾನಸೌಧ ಉದ್ಘಾಟನೆ ನಾಳೆ

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ವಸತಿ ಸಚಿವ ಕೃಷ್ಣಪ್ಪ ಉದ್ಘಾಟನಾ ಸಮಾರಂಭಕ್ಕೆ ಬರಲಿದ್ದಾರೆ..

23 Jan, 2018
ಅಂಬಿಗರು ನಂಬಿಗಸ್ಥ ಜನ: ಶಾಸಕ ಮೇಟಿ

ಬಾಗಲಕೋಟೆ
ಅಂಬಿಗರು ನಂಬಿಗಸ್ಥ ಜನ: ಶಾಸಕ ಮೇಟಿ

22 Jan, 2018
‘ಕಾಂಗ್ರೆಸ್ ಎಲ್ಲರೊಂದಿಗೆ ಮುನ್ನಡೆಯಲಿದೆ’

ಬಾಗಲಕೋಟೆ
‘ಕಾಂಗ್ರೆಸ್ ಎಲ್ಲರೊಂದಿಗೆ ಮುನ್ನಡೆಯಲಿದೆ’

22 Jan, 2018