ಕೊಡಿಗೇನಹಳ್ಳಿ

ಕಾಲು ಇಲ್ಲದಿದ್ದರೂ ನೆರವಿನ ಹಸ್ತಕ್ಕೆ ಬರವಿಲ್ಲ

‘ನಾನು ವಿದ್ಯಾಭ್ಯಾಸಕ್ಕೆ ನೆರವು ನೀಡುವುದನ್ನು ಕಂಡು ಕೆಲವರು ಕೊಂಕು ನುಡಿಯುತ್ತಾರೆ. ಮತ್ತೇ ಕೆಲವರು ಮರೆಯಲ್ಲೇ ನಗುತ್ತಾರೆ. ನನಗೆ ಬಡತನದ ಕಷ್ಟ ಗೊತ್ತಿದೆ.

ಪ್ರತಿಭಾವಂತ ವಿದ್ಯಾರ್ಥಿಯನ್ನು ಸನ್ಮಾನಿಸುತ್ತಿರುವ ಮಂಜುನಾಥ್‌

ಕೊಡಿಗೇನಹಳ್ಳಿ: ಆರು ತಿಂಗಳ ಮಗುವಾಗಿದ್ದಾಗಲೇ ಪೋಲಿಯೋ. ಎರಡು ಕಾಲುಗಳು ಸ್ವಾಧೀನ ಇಲ್ಲ. ಕಿತ್ತು ತಿನ್ನುವ ಕಡು ಬಡತನ. ಆದರೂ ಓದಬೇಕೆಂಬ ಛಲ. ತೆವಳುತ್ತಲೇ ಶಾಲೆ, ಕಾಲೇಜಿಗೆ ಹೋಗಿ ಪಿಯುಸಿಯವರೆಗೂ ವಿದ್ಯಾಭ್ಯಾಸ ಮುಗಿಸಿದ್ದಾಯಿತು. ಆದರೆ ಕೆಲಸಕ್ಕಾಗಿ ಅಲೆದಾಟ. ಆದರೆ ಎಲ್ಲೂ ಸಿಗದ ಕೆಲಸ. ಕೊನೆಗೆ ಅಂಗಡಿ ತೆರದು ಜೀವನ ಕಟ್ಟಿಕೊಂಡರು. ಅಷ್ಟಕ್ಕೆ ಸಿಗದ ತೃಪ್ತಿ. ಬಡ ಹುಡುಗರ ಶಿಕ್ಷಣಕ್ಕಾಗಿ ನೆರವಾಗಬೇಕೆಂಬ ಆಸೆ. ಇದಕ್ಕಾಗಿ ಅಂಗಡಿಯಲ್ಲಿ ದುಡಿದ ಹಣದಲ್ಲಿ ಸ್ವಲ್ಪ ಭಾಗ ಉಳಿಕೆ.

ಇವಿಷ್ಟು, ಕೊಡಿಗೇನಹಳ್ಳಿ ಹೋಬಳಿ ಗುಂಡಗಲ್ಲು ಗ್ರಾಮದ ಅಂಜಮ್ಮ ಮತ್ತು ಗಂಗಪ್ಪ ದಂಪತಿಯ ಮೂರನೆಯ ಮಗ 38 ವರ್ಷದ ಜಿ.ಹನುಮಂತರಾಜು ಅವರ ಕಥೆ. ಕೊಡಿಗೇನಹಳ್ಳಿ ಗ್ರಾಮದಲ್ಲಿ 1999 ರಿಂದ ಸ್ವಂತ ಅಂಗಡಿ ಆರಂಭಿಸಿ ಹನುಮಂತರಾಜು, ಪತ್ರ ಬರಹಗಾರರಾಗಿಯೂ ಗಮನ ಸೆಳೆದಿದ್ದಾರೆ.

ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ತಂದೆ. ತಾನು ಅನುಭವಿಸಿದ ಕಷ್ಟಗಳನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ’ಸ್ವಂತ ಉದ್ಯೋಗದ ಕನಸನ್ನು ವಿಧಾನಸೌಧ ಮುಂದೆ ಕಂಡೆನು. ಇನ್ನೆಲ್ಲೂ ಕೆಲಸ ಹುಡುಕಬಾರದೆಂದು ನಿರ್ಧರಿಸಿ ಊರಿಗೆ ಬಂದು ಅಂಗಡಿ ತೆರೆದೆ’ ಎಂದು ಹೇಳಿದರು.

ಈವರೆಗೂ  600ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ನೆರವು ನೀಡಿದ್ದಾರೆ. ‘ನಾನು ವಿದ್ಯಾಭ್ಯಾಸಕ್ಕೆ ನೆರವು ನೀಡುವುದನ್ನು ಕಂಡು ಕೆಲವರು ಕೊಂಕು ನುಡಿಯುತ್ತಾರೆ. ಮತ್ತೇ ಕೆಲವರು ಮರೆಯಲ್ಲೇ ನಗುತ್ತಾರೆ. ನನಗೆ ಬಡತನದ ಕಷ್ಟ ಗೊತ್ತಿದೆ. ಯಾರು ಏನೇ ನಿಂದಿಸಿದರೂ ನನ್ನ ನೆರವಿನ ಹಸ್ತ ನಿಲ್ಲದು’ ಎನ್ನುವಾಗ ಮಂಜುನಾಥ್ ಕಣ್ಣಾಲಿಗಳು ತುಂಬಿ ಬಂದವು.

 

Comments
ಈ ವಿಭಾಗದಿಂದ ಇನ್ನಷ್ಟು
ಮತ ದೃಢೀಕರಣಕ್ಕೆ ’ವಿವಿ ಪ್ಯಾಟ್ ’

ತುಮಕೂರು
ಮತ ದೃಢೀಕರಣಕ್ಕೆ ’ವಿವಿ ಪ್ಯಾಟ್ ’

19 Jan, 2018

ತುರುವೇಕೆರೆ
ಶಂಭುಲಿಂಗೇಶ್ವರ ಜಾತ್ರಾ ಮಹೋತ್ಸವ

ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾದ ರಥೋತ್ಸವ ಬನ್ನಿಮರದ ಬಳಿಗೆ ತೆರಳಿ ಹಿಂತಿರುಗಿತು. ರಥಕ್ಕೆ ಭಕ್ತರು ಹಣ್ಣು, ಧವನವನ್ನು ತೂರುವ ಮೂಲಕ ಭಕ್ತರು ತಮ್ಮ ಹರಕೆ ತೀರಿಸಿದರು. ...

19 Jan, 2018
 ಇಂದಿರಾ ಕ್ಯಾಂಟೀನ್ ತೆರೆಯಲು ಹರಸಾಹಸ

ತುಮಕೂರು
ಇಂದಿರಾ ಕ್ಯಾಂಟೀನ್ ತೆರೆಯಲು ಹರಸಾಹಸ

18 Jan, 2018
ದುಶ್ಚಟ ಬಿಟ್ಟು ಬದುಕು ನಡೆಸಿ

ಮಧುಗಿರಿ
ದುಶ್ಚಟ ಬಿಟ್ಟು ಬದುಕು ನಡೆಸಿ

18 Jan, 2018

ತುಮಕೂರು
ಹೊರಗುತ್ತಿಗೆ ನೌಕರರ ಸಮಾನ ವೇತನ; ಮುಖ್ಯಮಂತ್ರಿಗೆ ಮನವಿ

ಕಾಯಂ ನೌಕರರು ಮಾಡುವಷ್ಟೇ ಕೆಲಸವನ್ನು ಹಾಗೂ ಅದಕ್ಕಿಂತ ಹೆಚ್ಚಿನ ಕೆಲಸವನ್ನು ಹೊರಗುತ್ತಿಗೆ ಸಿಬ್ಬಂದಿ ಮಾಡುತ್ತಿದ್ದಾರೆ. ಇವರಿಲ್ಲದಿದ್ದರೆ ಪಾಲಿಕೆಯ ಕಾರ್ಯವೇ ಸ್ಥಗಿತಗೊಳ್ಳುವಷ್ಟರ ಮಟ್ಟಿಗೆ ಇವರ ಸೇವೆ...

18 Jan, 2018