ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆಗಳಿವೆಯೇ? ನಮಗೆ ಕಳುಹಿಸಿ...

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳೇ, ವಿದ್ಯಾಭ್ಯಾಸದ ಬಗ್ಗೆ ನಿಮ್ಮಲ್ಲಿ ಸಾಕಷ್ಟು ಸಂದೇಹಗಳು–ಪ್ರಶ್ನೆಗಳು ಇರಬಹುದು. ಕೋರ್ಸ್‌ಗಳ ವಿವರಗಳು, ಬೇಕಾದ ಅರ್ಹತೆ, ಆಯ್ಕೆಗೆ ಬೇಕಾಗಿರುವ ಸಿದ್ಧತೆ, ವೃತ್ತಿಶಿಕ್ಷಣದ ವಿವರಗಳು, ಲಭ್ಯವಿರುವ ವಿದ್ಯಾರ್ಥಿವೇತನಗಳು – ಹೀಗೆ ನಿಮ್ಮ ಶಿಕ್ಷಣವನ್ನು ಕುರಿತಾದ ಎಲ್ಲ ಪ್ರಶ್ನೆಗಳಿಗೂ ನೀವು ‘ಶಿಕ್ಷಣ’ ಪುರವಣಿಯಲ್ಲಿ ಉತ್ತರವನ್ನು ಪಡೆಯಬಹುದು.

ನೀವು ಮಾಡಬೇಕಾಗಿರುವುದಷ್ಟೆ: ನಿಮ್ಮ ಪ್ರಶ್ನೆಯನ್ನು ಸ್ಪಷ್ಟವಾಗಿ ನಮಗೆ ಕಳುಹಿಸಿ. ನಿಮ್ಮ ಕಾಲೇಜು, ತರಗತಿ, ವಿಳಾಸವನ್ನು ಬರೆಯುವುದನ್ನು ಮರೆಯಬೇಡಿ. ವೃತ್ತಿಶಿಕ್ಷಣ ಸಲಹೆಗಾರರಾದ ಅನ್ನಪೂರ್ಣ ಮೂರ್ತಿ ನಿಮ್ಮ ಸಂಶಯಗಳನ್ನು ನಿವಾರಿಸುತ್ತಾರೆ. ನಮ್ಮ ವಿಳಾಸ: ಸಂಪಾದಕರು, ‘ಶಿಕ್ಷಣ ಪುರವಣಿ’, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು– 560001

ಇಮೇಲ್‌: shikshana@prajavani.co.in

*
ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಕರ್ನಾಟಕ ಲೋಕಸೇವಾ ಆಯೋಗವು ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸದ್ಯದಲ್ಲಿ ನಡೆಸಲಿರುವ ಲಿಖಿತ ಪರೀಕ್ಷೆಗೆ ಆರ್.ಎಲ್.ಜಾಲಪ್ಪ ಅಕಾಡೆಮಿಯು ಉಚಿತವಾಗಿ ತರಬೇತಿ ನೀಡಲಿದೆ. ಹಿಂದುಳಿದ ಪ್ರವರ್ಗ1 ಮತ್ತು ಪ್ರವರ್ಗ 2ಎ ಸಮುದಾಯಕ್ಕೆ ಸೇರಿದ ಯುವಕ–ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಆಸಕ್ತ ಅಭ್ಯರ್ಥಿಗಳು ಸ್ವಂತ ವಿವರಗಳ ಅರ್ಜಿಯನ್ನು ಆದಾಯ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿಯಲ್ಲಿ ಗಳಿಸಿದ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳ ಜೊತೆ ಲಗತ್ತಿಸಿ ಡಿ.10ರ ಒಳಗೆ ಕಳುಹಿಸಬೇಕು. ವಿಳಾಸ: ‘ಕಾರ‍್ಯದರ್ಶಿ, ಆರ್.ಎಲ್. ಜಾಲಪ್ಪ ಅಕಾಡೆಮಿ (ರಿ), ಸೋಲೂರು, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ – 562127  ಹೆಚ್ಚಿನ ಮಾಹಿತಿಗೆ: 9448484726, 9900606042. 9845351299

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT