19 ವರ್ಷದೊಳಗಿನವರ ವಿಶ್ವಕಪ್‌ಗೆ ಭಾರತ ತಂಡ ಪ್ರಕಟ

ವಿಶ್ವಕಪ್: ಪೃಥ್ವಿಗೆ ನಾಯಕತ್ವ

ಮುಂಬೈ ತಂಡದ ಬ್ಯಾಟ್ಸ್‌ಮನ್‌ ಪೃಥ್ವಿ ಷಾ 19 ವರ್ಷದೊಳಗಿನವರ ಐಸಿಸಿ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ತಂಡಧ ನಾಯಕತ್ವ ವಹಿಸಲಿದ್ದಾರೆ.

ಪೃಥ್ವಿ ಷಾ

ನವದೆಹಲಿ: ಮುಂಬೈ ತಂಡದ ಬ್ಯಾಟ್ಸ್‌ಮನ್‌ ಪೃಥ್ವಿ ಷಾ 19 ವರ್ಷದೊಳಗಿನವರ ಐಸಿಸಿ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ತಂಡಧ ನಾಯಕತ್ವ ವಹಿಸಲಿದ್ದಾರೆ.

‘ನ್ಯೂಜಿಲೆಂಡ್‌ನಲ್ಲಿ ಜನವರಿ 13ರಿಂದ ಫೆಬ್ರುವರಿ 3ರವರೆಗೆ ಪಂದ್ಯಗಳು ನಡೆಯಲಿವೆ’ ಎಂದು ಮಂಡಳಿಯ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಹೇಳಿದ್ದಾರೆ. ಹೋದ ವರ್ಷ ಭಾರತ ತಂಡವು ರನ್ನರ್ ಅಪ್ ಆಗಿತ್ತು. ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧ ಸೋಲು ಕಂಡಿತ್ತು. 2000, 2008, 2012ರಲ್ಲಿ ಭಾರತದ 19 ವರ್ಷದೊಳಗಿನವರ ತಂಡ ವಿಶ್ವಕಪ್‌ ಗೆದ್ದುಕೊಂಡಿತ್ತು.

ವಿಶ್ವಕಪ್ ಸಿದ್ಧತೆಗಾಗಿ ಭಾರತ ತಂಡ ಶುಕ್ರವಾರದಿಂದ ಬೆಂಗಳೂರಿನಲ್ಲಿ ಅಭ್ಯಾಸ ನಡೆಸಲಿದೆ. ಪೃಥ್ವಿ ಹಾಗೂ ಈಶಾನ್ ಪೊರೆಲ್‌ ಡಿ.12ರಿಂದ ಶಿಬಿರ ಸೇರಿಕೊಳ್ಳಲಿದ್ದಾರೆ.

ತಂಡ ಇಂತಿದೆ: ಪೃಥ್ವಿ ಷಾ, ಶುಭಂ ಗಿಲ್‌ (ಉಪ ನಾಯಕ), ಮನ್‌ಜ್ಯೋತ್‌ ಕಲ್ರಾ, ಹಿಮಾಂಶು ರಾಣಾ, ಅಭಿಷೇಕ್ ಶರ್ಮಾ, ರಿಯಾನ್‌ ಪರಾಗ್‌, ಆರ್ಯನ್‌ ಜುವಾಲ್‌ (ವಿಕೆಟ್‌ ಕೀಪರ್‌), ಹರ್ವಿಕ್ ದೇಸಾಯಿ (ವಿಕೆಟ್‌ ಕೀಪರ್‌), ಶಿವಂ ಮಾವಿ, ಕಮಲೇಶ್‌ ನಾಗರಕೋಟಿ, ಈಶಾನ್‌ ಪೊರೆಲ್‌, ಅರ್ಷದೀಪ್‌ ಸಿಂಗ್‌, ಅಂಕುಲ್‌ ರಾಯ್‌, ಶಿವ ಸಿಂಗ್‌, ಪಂಕಜ್‌ ಯಾದವ್‌.

ಕಾಯ್ದಿರಿಸಿದ ಆಟಗಾರರು: ಓಂ ಬೋಸ್ಲೆ, ರಾಹುಲ್ ಚಹಾರ್‌, ನಿನಾದ್ ರಾತ್ವ, ಉರ್ವಿಲ್‌ ಪಟೇಲ್‌, ಆದಿತ್ಯ ತಾರೆ.

Comments
ಈ ವಿಭಾಗದಿಂದ ಇನ್ನಷ್ಟು
ರೋಹಿತ್ ಶರ್ಮಾ ಭರ್ಜರಿ ದ್ವಿಶತಕ: ಶ್ರೀಲಂಕಾಗೆ 393 ರನ್‌ಗಳ ಗೆಲುವಿನ ಗುರಿ

ಮೊಹಾಲಿ
ರೋಹಿತ್ ಶರ್ಮಾ ಭರ್ಜರಿ ದ್ವಿಶತಕ: ಶ್ರೀಲಂಕಾಗೆ 393 ರನ್‌ಗಳ ಗೆಲುವಿನ ಗುರಿ

13 Dec, 2017
ಎರಡನೇ ಏಕದಿನ ಪಂದ್ಯ: ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಶ್ರೀಲಂಕಾ; ತಾಳ್ಮೆಯ ಆಟ ಪ್ರದರ್ಶಿಸುತ್ತಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳು

ಮೊಹಾಲಿ
ಎರಡನೇ ಏಕದಿನ ಪಂದ್ಯ: ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಶ್ರೀಲಂಕಾ; ತಾಳ್ಮೆಯ ಆಟ ಪ್ರದರ್ಶಿಸುತ್ತಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳು

13 Dec, 2017

ಚೆನ್ನೈ
ವಿಶ್ವ ಸ್ಕ್ವಾಷ್‌: ಮೂರನೇ ಸುತ್ತಿಗೆ ಸೌರವ್‌

ಅಮೋಘ ಆಟ ಆಡಿದ ಭಾರತದ ಸೌರವ್‌ ಘೋಷಾಲ್‌, ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ ನಲ್ಲಿ ನಡೆಯುತ್ತಿರುವ ವಿಶ್ವ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

13 Dec, 2017
ದೃಷ್ಟಿ ಕಸಿದ ಪವರ್‌ ಕಟ್‌; ಬಾಳು ಬೆಳಗಿದ ಕ್ರಿಕೆಟ್‌

ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ ಅಜಯ್‌ ಕುಮಾರ್‌ ರೆಡ್ಡಿ
ದೃಷ್ಟಿ ಕಸಿದ ಪವರ್‌ ಕಟ್‌; ಬಾಳು ಬೆಳಗಿದ ಕ್ರಿಕೆಟ್‌

13 Dec, 2017

ಭಾರತದಲ್ಲಿ ಆಯೋಜನೆ
ಅಫ್ಗಾನಿಸ್ತಾನ ಟೆಸ್ಟ್‌: ಸಿಒಎ ಸ್ವಾಗತ

ಅಫ್ಗಾನಿಸ್ತಾನದ ಚೊಚ್ಚಲ ಟೆಸ್ಟ್ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲು ಮುಂದಾಗಿರುವ ಬಿಸಿಸಿಐ ನಿರ್ಣಯವನ್ನು ಆಡಳಿತಾಧಿಕಾರಿಗಳ ಸಮಿತಿ ಅಧ್ಯಕ್ಷ ವಿನೋದ್ ರಾಯ್‌ ಸ್ವಾಗತಿಸಿದ್ದಾರೆ.

13 Dec, 2017