ಕನಕಪುರ

ಮಳೆಗೆ ಹಾಳಾದ ರಾಗಿ ಫಸಲು

ಬಿಸಿಲು ಚೆನ್ನಾಗಿ ಬೀಳುತ್ತಿದ್ದರಿಂದ ಮಳೆ ಬರುವುದಿಲ್ಲ ಎಂಬ ನಂಬಿಕೆಯಿಂದ ಸಾಕಷ್ಟುರೈತರು ತಮ್ಮ ರಾಗಿ ಫಸಲು ಕಟಾವು ಮಾಡಿದ್ದರು.

ಕನಕಪುರ ತಾಲ್ಲೂಕಿನಲ್ಲಿ ಬೀಳುತ್ತಿರುವ ಮಳೆಯಿಂದ ಕಟಾವು ಮಾಡಿದ್ದ ರಾಗಿ ಮಳೆಯಲ್ಲಿ ನೆನೆದು ಹಾಳಾಗುತ್ತಿರುವುದು

ಕನಕಪುರ: ಕಳೆದ ಮೂರು ದಿನಗಳಿಂದ ಬೀಳುತ್ತಿರುವ ಚಂಡಮಾರುತ ಮಳೆಗೆ ತಾಲ್ಲೂಕಿನ ನೂರಾರು ಎಕರೆಯಷ್ಟು ಭೂಮಿ ಯಲ್ಲಿ ಕಟಾವು ಮಾಡಿದ್ದ ರಾಗಿ ಫಸಲು ನಾಶವಾಗಿದೆ.

ಬಿಸಿಲು ಚೆನ್ನಾಗಿ ಬೀಳುತ್ತಿದ್ದರಿಂದ ಮಳೆ ಬರುವುದಿಲ್ಲ ಎಂಬ ನಂಬಿಕೆಯಿಂದ ಸಾಕಷ್ಟುರೈತರು ತಮ್ಮ ರಾಗಿ ಫಸಲು ಕಟಾವು ಮಾಡಿದ್ದರು. ಇನ್ನು ಕೆಲವು ರೈತರು ಮಳೆ ಬರುಬಹುದೆಂಬ ಭಯದಿಂದ ಕಟಾವು ಮಾಡದೆ ಹಾಗೆಯೇ ಬಿಟ್ಟಿದ್ದರು.

ದುರಂತವೆಂದು ಕಟಾವು ಮಾಡಿದ್ದ ರಾಗಿ ಮೆಳೆಯಲ್ಲಿ ನೆನೆದು ಹಾಳಾಗುತ್ತಿದ್ದರೆ, ಕಟಾವು ಮಾಡಿದೆ ಬಿಟ್ಟಿದ್ದ ರಾಗಿಯೂ ಅವಧಿ ಮುಗಿದು ಪೈರುಗಳಲ್ಲೇ ಹಾಳಾಗುತ್ತಿದೆ ಎಂದು ರೈತರು ತಮ್ಮ ಕಷ್ಟವನ್ನು ಹೇಳುತ್ತಿದ್ದಾರೆ.

ಈ ಭಾರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಮೂರು ವರ್ಷದ ಫಸಲು ಒಂದೇ ವರ್ಷಕ್ಕೆ ಬಂದಿದೆ ಎಂಬ ಖುಷಿ ರೈತರ ಮನಸ್ಸಿನಲ್ಲಿ ಮೂಡಿತ್ತು. ಆದರೆ ಮಧ್ಯಂತರದಲ್ಲಿಬಂದ ಮಳೆಯಿಂದ ಎಲ್ಲಾ ಫಸಲು ನಾಶವಾಗಿ ಸಾಕಷ್ಟು ನಷ್ಟವಾಗಿದೆ ಎಂಬುದು ರೈತರ ನೋವಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಅಕ್ರಮ ಜಾಹೀರಾತು ಫಲಕಗಳಿಗೆ ಕಡಿವಾಣ

ರಾಮನಗರ
ಅಕ್ರಮ ಜಾಹೀರಾತು ಫಲಕಗಳಿಗೆ ಕಡಿವಾಣ

15 Jan, 2018
ಬಗೆ ಬಗೆಯ ಸವಿರುಚಿ ಅಡುಗೆ

ಕನಕಪುರ
ಬಗೆ ಬಗೆಯ ಸವಿರುಚಿ ಅಡುಗೆ

15 Jan, 2018
ಸುಗ್ಗಿ ಸಂಕ್ರಾಂತಿ ಖರೀದಿ ಸಂಭ್ರಮ

ರಾಮನಗರ
ಸುಗ್ಗಿ ಸಂಕ್ರಾಂತಿ ಖರೀದಿ ಸಂಭ್ರಮ

14 Jan, 2018

ರಾಮನಗರ
‘ಜನಪದ ಕಲೆ ಉಳಿವಿಗೆ ಪರಿಶ್ರಮ ಅಗತ್ಯ’

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಸ್ಕೃತಿ ಉಳಿಸುವ ವಾತಾವರಣ ನಿರ್ಮಿಸಲು ಮುಂದಾಗಿದೆ. ದೇಸಿ ಸಂಸ್ಕೃತಿಯ ಪ್ರತೀಕವಾಗಿರುವ ಜನಪದ ವಾದ್ಯ,...

14 Jan, 2018

ಆನೇಕಲ್‌
ಆನೇಕಲ್‌ ಅಭಿವೃದ್ಧಿಗೆ ₹652 ಕೋಟಿ

ಬಳ್ಳೂರು ಗ್ರಾಮ ರಾಜ್ಯದ ಗಡಿ ಗ್ರಾಮವಾಗಿದೆ. ನೆರೆಯ ತಮಿಳುನಾಡಿನ ಕೊತ್ತಗಂಡನಹಳ್ಳಿ, ಬೊಮ್ಮಂಡಹಳ್ಳಿ ಗ್ರಾಮಗಳಲ್ಲಿ ತಮಿಳುನಾಡು ಸರ್ಕಾರ ಕಾವೇರಿ ನೀರು ಪೂರೈಕೆ ಮಾಡುತ್ತಿದೆ.

13 Jan, 2018