ಕಾರಟಗಿ

‘ಸರ್ಕಾರಿ ಸೌಲಭ್ಯ ಅರ್ಹರಿಗೆ ಸಿಗಲಿ’

‘ಸಾರ್ವಜನಿಕ ಅಭಿವೃದ್ದಿಗೆ ಎಲ್ಲರೂ ಜೊತೆಗೂಡಬೇಕು. ಕೀಳುಮಟ್ಟ ಹಾಗೂ ಸ್ವಾರ್ಥದ ಯೋಚನೆಗಳನ್ನು ದೂರ ಮಾಡಿ ಜನರಿಗೆ ಸಾಧ್ಯವಾದಷ್ಟು ನೆರವಾಗಬೇಕು’

ಕಾರಟಗಿ: ‘ಸಾರ್ವಜನಿಕ ಅಭಿವೃದ್ದಿಗೆ ಎಲ್ಲರೂ ಜೊತೆಗೂಡಬೇಕು. ಕೀಳುಮಟ್ಟ ಹಾಗೂ ಸ್ವಾರ್ಥದ ಯೋಚನೆಗಳನ್ನು ದೂರ ಮಾಡಿ ಜನರಿಗೆ ಸಾಧ್ಯವಾದಷ್ಟು ನೆರವಾಗಬೇಕು’ ಎಂದು ಅಂಚೆ ಕಚೇರಿ ನಿವೃತ್ತ ಅಧಿಕಾರಿ ಕೆ. ಈರಣ್ಣ ಗಂಗಾವತಿ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ‘ಪ್ರಗತಿ ಅಬಿವೃದ್ಧಿ ಸಂಸ್ಥೆ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸ್ವಜಾತಿಯ ಅನೇಕ ಸಂಘಟನೆಗಳು ಅಲ್ಲಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಗತಿ ಅಭಿವೃದ್ದಿ ಸಂಸ್ಥೆ ಸ್ವಾರ್ಥ, ಆಮಿಷಕ್ಕೆ ಬಲಿಯಾಗದೆ ಸರ್ಕಾರದ ಸೌಲಭ್ಯಗಳನ್ನು ಅಗತ್ಯವಿರುವವರಿಗೆ ತಲುಪಿಸಬೇಕು’ ಎಂದರು.

ವೀರೇಶ ಸೀಗೆರಿ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಸಹಾಯಕ ಸಬ್ ಇನ್‌ಸ್ಪೆಕ್ಟರ್ ಮಾನಯ್ಯ ಬಡಿಗೇರ , ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶರಣಪ್ಪ ಕರಡಿ, ಸೋಮಶೇಖರ ಮೈಲಾಪುರ, ಸುಮಾ ಗುಂಡಪ್ಪ, ದೀಪಾ ಶಂಕರನಾಗ, ಸಂಸ್ಥೆಯ ಅಧ್ಯಕ್ಷ ಸಿ. ಸಣ್ಣ ಮಾರೆಪ್ಪ, ಉಪಾದ್ಯಕ್ಷ ಹನುಮೇಶ ನಾಯಕ, ಪ್ರಧಾನ ಕಾರ್ಯದರ್ಶಿ ಎ. ಎಚ್. ನಾಗರಾಜ, ಸದಸ್ಯರಾದ ಹನುಮೇಶ ದೇವಿಕ್ಯಾಂಪ, ಬಸವರಾಜ, ಪರಶುರಾಮ, ಕೆ. ರಮೇಶ, ಶಿವರಾಜ, ದೊಡ್ಡಪ್ಪ, ರಾಜಣ್ಣ, ಜಯಸಿಂಗ ಯರಡೋಣ, ಲಕ್ಷ್ಮಣ, ವೆಂಕಟೇಶ, ಶ್ಯಾಮಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ನನಸಾಯಿತು ಕುಕನೂರು ತಾಲ್ಲೂಕು

ಕುಕನೂರು
ನನಸಾಯಿತು ಕುಕನೂರು ತಾಲ್ಲೂಕು

17 Jan, 2018

ಕೊಪ್ಪಳ
ಮಗು ಮಾರಾಟ ಯತ್ನ: ತಾಯಿ ಗೋಳಾಟ

ಪತಿಯು ತನ್ನ 7 ತಿಂಗಳ ಗಂಡು ಮಗುವನ್ನು ₹ 1.50 ಲಕ್ಷಕ್ಕೆ ಮಾರಲು ಯತ್ನಿಸುತ್ತಿರುವ ಬಗ್ಗೆ ರುಕ್ಸಾನಾ ಎಂಬುವರು ಸೋಮವಾರ ನಗರದ ರೈಲ್ವೆ ನಿಲ್ದಾಣದಲ್ಲಿ...

17 Jan, 2018

ಕುಷ್ಟಗಿ
ಏತ ನೀರಾವರಿಗಾಗಿ ಬಿಜೆಪಿ ಪಾದಯಾತ್ರೆ

ಕೊಪ್ಪಳ ಏತ ನೀರಾವರಿಗೆ ಸಂಬಂಧಿಸಿದಂತೆ ತಾಲ್ಲೂಕಿನ ಕಲಾಲಬಂಡಿ ಗ್ರಾಮದ ಹೊರ ವಲಯದಲ್ಲಿರುವ ಮುಖ್ಯ ಸ್ಥಾವರ (ಡೆಲೆವರಿ ಚೇಂಬರ್‌) ಸ್ಥಳದಿಂದ ಬುಧವಾರ (ಜ 17) ಬಿಜೆಪಿ...

17 Jan, 2018
ಕಲ್ಯಾಣ ಕಾರಟಗಿಗೆ ತಾಲ್ಲೂಕು ಮುಕುಟ

ಕಾರಟಗಿ
ಕಲ್ಯಾಣ ಕಾರಟಗಿಗೆ ತಾಲ್ಲೂಕು ಮುಕುಟ

16 Jan, 2018
ಸಮಸ್ಯೆಗಳ ಆಗ್ರಹ ನಂದಾಪುರ ಗ್ರಾಮ

ತಾವರಗೇರಾ
ಸಮಸ್ಯೆಗಳ ಆಗ್ರಹ ನಂದಾಪುರ ಗ್ರಾಮ

16 Jan, 2018