20 ನಾಡ ಪಿಸ್ತೂಲ್‌ ವಶಕ್ಕೆ

ಕಲಬುರ್ಗಿ: ಭೀಮಾ ತೀರದ ಹಂತಕ ಚಂದಪ್ಪ ಹರಿಜನನ ಸಹಚರರಾದ ಮಲ್ಲಿಕಾರ್ಜುನ, ಅರ್ಜುನ ಸೇರಿ 9 ಜನರ ಬಂಧನ

‘ಬಂಧಿತರಲ್ಲಿ ಮಲ್ಲಿಕಾರ್ಜುನ ಮತ್ತು ಅರ್ಜುನ ಎಂಬಿಬ್ಬರು ಭೀಮಾ ತೀರದ ಹಂತಕ ಚಂದಪ್ಪ ಹರಿಜನನ ಸಹಚರರು. ಇವರು ಭೀಮಾ ತೀರದ ಅಫಜಲಪುರ ಭಾಗದಲ್ಲಿ ಇನ್ನೂ ಅಪರಾಧಿಕ ಚಟುವಟಿಕೆಯಲ್ಲಿ ತೊಡಗಿದ್ದರು’ ಎಂದು ಐಜಿಪಿ ಅಲೋಕಕುಮಾರ್‌ ಸೋಮವಾರ ಕಲಬುರ್ಗಿಯಲ್ಲಿ ತಿಳಿಸಿದರು.

ಕಲಬುರ್ಗಿ: ಭೀಮಾ ತೀರದ ಹಂತಕ ಚಂದಪ್ಪ ಹರಿಜನನ ಸಹಚರರಾದ ಮಲ್ಲಿಕಾರ್ಜುನ, ಅರ್ಜುನ ಸೇರಿ 9 ಜನರ ಬಂಧನ

ಕಲಬುರ್ಗಿ: ಭೀಮಾ ತೀರದ ಹಂತಕ ಚಂದಪ್ಪ ಹರಿಜನನ ಇಬ್ಬರು ಸಹಚರರು ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿರುವ ಕಲಬುರ್ಗಿ ಪೊಲೀಸರು ಅವರಿಂದ 20 ನಾಡ ಪಿಸ್ತೂಲ್‌ ಹಾಗೂ 54 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

‘ಬಂಧಿತರಲ್ಲಿ ಮಲ್ಲಿಕಾರ್ಜುನ ಮತ್ತು ಅರ್ಜುನ ಎಂಬಿಬ್ಬರು ಭೀಮಾ ತೀರದ ಹಂತಕ ಚಂದಪ್ಪ ಹರಿಜನನ ಸಹಚರರು. ಇವರು ಭೀಮಾ ತೀರದ ಅಫಜಲಪುರ ಭಾಗದಲ್ಲಿ ಇನ್ನೂ ಅಪರಾಧಿಕ ಚಟುವಟಿಕೆಯಲ್ಲಿ ತೊಡಗಿದ್ದರು’ ಎಂದು ಐಜಿಪಿ ಅಲೋಕಕುಮಾರ್‌ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಕ್ರಮ ನಾಡ ಪಿಸ್ತೂಲ್‌ಗಳು ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶಗಳಿಂದ ಪೂರೈಕೆಯಾಗುತ್ತಿವೆ. ಮಧ್ಯಪ್ರದೇಶದಲ್ಲಿ ಅಕ್ರಮ ನಾಡ ಪಿಸ್ತೂಲ್‌ ತಯಾರಿಕೆ ಗುಡಿ ಕೈಗಾರಿಕೆಯ ಮಾದರಿಯಲ್ಲಿ ನಡೆಯುತ್ತಿದೆ. ಅಲ್ಲಿಂದ ನಮ್ಮ ರಾಜ್ಯಕ್ಕೆ ಇವು ಪೂರೈಕೆಯಾಗುವುದನ್ನು ತಡೆಯಲು ಕಲಬುರ್ಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ್‌ ನೇತೃತ್ವದ ತಂಡವನ್ನು ಅಲ್ಲಿಗೆ ಕಳಿಸಲಾಗುವುದು ಎಂದರು.

₹1 ಲಕ್ಷ ನಗದು ಬಹುಮಾನ

ಈ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಂಡಕ್ಕೆ ₹1 ಲಕ್ಷ ನಗದು ಬಹುಮಾನ ನೀಡಿದ ಅವರು, ಮುಖ್ಯಮಂತ್ರಿಗಳ ಪದಕಕ್ಕೆ ಕಲಬುರ್ಗಿಯ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ್‌ ಅವರ ಹೆಸರು ಶಿಫಾರಸು ಮಾಡುವುದಾಗಿ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ: ಕುಮಾರಸ್ವಾಮಿ ವಿಶ್ವಾಸ

ಚಿಂಚೋಳಿ
ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ: ಕುಮಾರಸ್ವಾಮಿ ವಿಶ್ವಾಸ

19 Jan, 2018

ಅಫಜಲಪುರ
5 ಸಾವಿರ ಶೌಚಾಲಯ ಯೋಗ್ಯವಲ್ಲ: ಕರವೇ ಆರೋಪ

ಸರ್ಕಾರ ಸ್ವಚ್ಛ ಭಾರತ ಮಿಷನ್‌ ಯೋಜನೆ ಅಡಿಯಲ್ಲಿ ಕೂಸು ಮತ್ತು ಸಿರಿ ಎರಡು ಶೀರ್ಷಿಕೆ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ 2016 –...

19 Jan, 2018

ಸೇಡಂ
ಸೇಡಂ: ಬೇಡಿಕೆ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಪಟ್ಟಣದ ಪ್ರವಾಸಿ ಮಂದಿರದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ನ್ಯಾಯಕ್ಕಾಗಿ ಘೋಷಣೆ ಕೂಗಿದರು

19 Jan, 2018
ಮಾರ್ಚ್‌ ಅಂತ್ಯದೊಳಗೆ ಅನುದಾನ ಬಳಕೆ

ಕಲಬುರ್ಗಿ
ಮಾರ್ಚ್‌ ಅಂತ್ಯದೊಳಗೆ ಅನುದಾನ ಬಳಕೆ

18 Jan, 2018
ದೌರ್ಜನ್ಯ ಖಂಡಿಸಿ ಚಿಂಚೋಳಿ ಬಂದ್‌ ಯಶಸ್ವಿ

ಚಿಂಚೋಳಿ
ದೌರ್ಜನ್ಯ ಖಂಡಿಸಿ ಚಿಂಚೋಳಿ ಬಂದ್‌ ಯಶಸ್ವಿ

18 Jan, 2018