ಶಿರಹಟ್ಟಿ

ಅರ್ಹರಿಗೆ ಲಭಿಸುವುದೇ ವಸತಿ ಭಾಗ್ಯ?

‘ಈಗಾಗಲೇ ಮನೆ ಇದ್ದವರಿಗೆ ನಿವೇಶನ ನೀಡಬಾರದು. ಈ ಹಿಂದೆ ಸರ್ಕಾರದ ಫಲಾನುಭವಿ ಆಗಿರಬಾರದು ಎಂಬಿತ್ಯಾದಿ ಮಾನದಂಡಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಅನುಸರಿಸಿಲ್ಲ. ವಿಧವೆ, ಅಂಗವಿಕಲರನ್ನು ಪರಿಗಣಿಸಿಲ್ಲ

ಶಿರಹಟ್ಟಿ ಹೊರವಲಯದಲ್ಲಿ ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಖರೀದಿಸಿರುವ ಜಮೀನು

ಶಿರಹಟ್ಟಿ: ಪಟ್ಟಣ ಪಂಚಾಯ್ತಿ ವತಿಯಿಂದ ನಿವೇಶನ ರಹಿತ ಫಲಾನುಭವಿಗಳಿಗೆ ವಿತರಣೆ ಮಾಡಲು ರಾಜೀವಗಾಂಧಿ ವಸತಿ ಯೋಜನೆಯಡಿ ಪಟ್ಟಣದ ವರವಿ ರಸ್ತೆಗೆ ಹೊಂದಿಕೊಂಡಂತೆ 5 ಎಕರೆ ಜಮೀನು ಖರೀದಿಸಲಾಗಿದೆ. ಈಗಾಗಲೇ ಫಲಾನುಭವಿಗಳ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಆದರೆ, ಹಂಚಿಕೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ.

ಶಾಸಕರ ಅಧ್ಯಕ್ಷತೆಯಲ್ಲಿ 220 ನಿವೇಶನಗಳ ಆಯ್ಕೆ ಪಟ್ಟಿ ಸಿದ್ಧಗೊಂಡರೂ, ಹಕ್ಕು ಪತ್ರ ಇನ್ನೂ ವಿತರಣೆ ಆಗಿಲ್ಲ. ಕೆಲವು ಫಲಾನುಭವಿಗಳನ್ನು ಹೊರತುಪಡಿಸಿದರೆ ಬಹುತೇಕ ನಿವೇಶನಗಳು ಈಗಾಗಲೇ ಸ್ವಂತ ಮನೆ ಹಾಗೂ ಜಮೀನು ಇದ್ದವರಿಗೆ ಲಭಿಸಿವೆ ಎಂಬ ಆರೋಪ ಕೇಳಿಬರುತ್ತಿದೆ. ಸ್ಥಳೀಯ ನಾಯಕರ ನಡುವಿನ ತಿಕ್ಕಾಟ, ಆಯ್ಕೆ ಪಟ್ಟಿಯಲ್ಲಿ ಅವಕಾಶ ಲಭಿಸದ ಅರ್ಜಿದಾರರ ಆಕ್ರೋಶ, ಜಿಲ್ಲಾಡಳಿತದ ಜಾಣ ಮೌನ ಇವೆಲ್ಲದರ ನಡುವೆ ಅರ್ಹರಿಗೂ ಇದುವರೆಗೆ ವಸತಿ ಭಾಗ್ಯ ಲಭಿಸಿಲ್ಲ.

‘ಈಗಾಗಲೇ ಮನೆ ಇದ್ದವರಿಗೆ ನಿವೇಶನ ನೀಡಬಾರದು. ಈ ಹಿಂದೆ ಸರ್ಕಾರದ ಫಲಾನುಭವಿ ಆಗಿರಬಾರದು ಎಂಬಿತ್ಯಾದಿ ಮಾನದಂಡಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಅನುಸರಿಸಿಲ್ಲ. ವಿಧವೆ, ಅಂಗವಿಕಲರನ್ನು ಪರಿಗಣಿಸಿಲ್ಲ. ಪಟ್ಟಣದಲ್ಲಿ ಈ ಹಿಂದೆ ಬಿದ್ದ ಅಕಾಲಿಕ ಮಳೆಯಿಂದಾಗಿ ಕೃಷಿಕರೇ ಹೆಚ್ಚಾಗಿರುವ ಮ್ಯಾಗೇರಿ, ಕೆಳಗೇರಿ ಸೇರಿ ಹಲವೆಡೆ ಮನೆಗಳು ಬಿದ್ದಿದ್ದು, ಅಂತಹ ಮನೆಗಳ ಫಲಾನುಭವಿಗಳಿಗೆ ಈವರೆಗೆ ಪರಿಹಾರ ನೀಡಿಲ್ಲ. ಅಂತಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಡಿದ್ದರೆ ಮನೆಗಳನ್ನಾದರೂ ನಿರ್ಮಿಸಿಕೊಳ್ಳಲು ಅವಕಾಶವಿತ್ತು’ ಎಂದು ಈ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆಯದ, ಹೆಸರು ಬಹಿರಂಗಪಡಿಸಲು ಇಚ್ಚಿಸದ ವ್ಯಕ್ತಿಯೊಬ್ಬರು ಹೇಳಿದರು.

‘ರಾಜೀವಗಾಂಧಿ ನಿವೇಶನ ನೀಡುವ ಪಟ್ಟಿಯಲ್ಲಿ ಅಕ್ರಮ ಹಾಗೂ ಅನ್ಯಾಯ ಆಗಿದೆ. ಆಯ್ಕೆಯಲ್ಲಿ ರಾಜಕೀಯ ಹಾಗೂ ಹಣ ಪ್ರವೇಶವಾಗಿದೆ. ನಿಜವಾದ ಫಲಾನುಭವಿಗಳನ್ನು ಗುರುತಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಈ ಕುರಿತು ಸಮಗ್ರ ತನಿಖೆ ಆಗಬೇಕು. ಜಿಲ್ಲಾಡಳಿತ ಕಣ್ತೆರೆದು ನೋಡಬೇಕು’ ಎಂದು ಪಟ್ಟಣದ ಪಕ್ಕಣ್ಣ ಕಬಾಡ್ರ ಹಾಗೂ ನಾಗರಾಜ ತಳವಾರ ಆಗ್ರಹಿಸಿದರು.

* * 

ರಾಜೀವ ಗಾಂಧಿ ವಸತಿ ಯೋಜನೆಯಡಿ ಭೂಮಿ ಖರೀದಿಸಲಾಗಿದ್ದು, ಶೀಘ್ರವೇ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು
ರಾಮಕೃಷ್ಣ ದೊಡ್ಡಮನಿ
ಶಾಸಕ

220 ನಿವೇಶನಗಳ ಫಲಾನುಭವಿಗಳಿಗೆ ಡಿ. 25 ರಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಹಕ್ಕುಪತ್ರ ವಿತರಣೆ ಮಾಡುವ ಎಲ್ಲ ತಾಂತ್ರಿಕ ಪ್ರಯತ್ನಗಳು ಪ್ರಗತಿಯಲ್ಲಿವೆ.
ಶೋಭಾ ಬೆಳ್ಳಿಕೊಪ್ಪ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ

Comments
ಈ ವಿಭಾಗದಿಂದ ಇನ್ನಷ್ಟು

ನರಗುಂದ
‘ರಾಜಕೀಯ ಕೆಸರೆರಚಾಟ ನಿಲ್ಲಿಸಿ’

‘ಮಹದಾಯಿ ಹೆಸರಲ್ಲಿ ರಾಜಕೀಯ ಕೆಸರೆರಚಾಟ ನಿಲ್ಲಿಸಬೇಕು. ಚುನಾವಣೆ ನೆಪ ಹೇಳದೇ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲು ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಮಹದಾಯಿ ಹೋರಾಟ...

24 Mar, 2018

ರೋಣ
ಸರಿಯಾಗಿ ಹಂಚಿಕೆ ಆಗದ ಪಡಿತರ ಸಾಮಗ್ರಿ: ಆಕ್ರೋಶ

‘ತಾಲ್ಲೂಕಿನ ಕುರಹಟ್ಟಿ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರಾದ ಹಿರೇಮಠ ಅವರು ಸರಿಯಾಗಿ ಪಡಿತರ ವಿತರಿಸುತ್ತಿಲ್ಲ’ ಆರೋಪ ಕೇಳಿಬಂದಿದೆ.

24 Mar, 2018

ಲಕ್ಷ್ಮೇಶ್ವರ
ತುಂಡು ಗುತ್ತಿಗೆ ನೀಡದಿರಲು ಆಗ್ರಹ

‘ನಗರೋತ್ಥಾನ ಯೋಜನೆಯಡಿ ₹ 5.45 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಈಚೆಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಆದರೆ, ಈ ಕಾಮಗಾರಿಗಳನ್ನು ತುಂಡು ಗುತ್ತಿಗೆ...

24 Mar, 2018

ಗದಗ
ಗುಡಿಸಲಿಗೆ ಬೆಂಕಿ: ಬಾಲಕಿ ಸಾವು

ಸಮೀಪದ ನೀಲಗುಂದ ಗ್ರಾಮದ ಹೊಲದಲ್ಲಿ ಗುರುವಾರ ಗುಡಿಸಲಿಗೆ ಬೆಂಕಿ ತಗುಲಿ, ಏಳು ವರ್ಷದ ರೇಣುಕಾ ಶರಣಪ್ಪ ಚಿಂಚಲಿ ಸುಟ್ಟು ಕರಕಲಾಗಿದ್ದಾಳೆ.

23 Mar, 2018

ಹೊಳೆಆಲೂರ
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ವಿಶೇಷವಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಸಿಂಹಪಾಲು ನೀಡಲಾಗಿದೆ ಎಂದು...

23 Mar, 2018