ಕಮಲಾಪುರ

ಕಮಲಾಪುರ: ಬಿಎಸ್‌ವೈಗೆ ಭರ್ಜರಿ ಸ್ವಾಗತ

ಪರಿವರ್ತನೆ ಯಾತ್ರೆ ನಿಮಿತ್ತ ಸೋಮವಾರ ಕಮಲಾಪುರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಇತರ ನಾಯಕರಿಗೆ ಮೆರವಣಿಗೆ ಮೂಲಕ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು.

ಕಮಲಾಪುರ: ಪರಿವರ್ತನೆ ಯಾತ್ರೆ ನಿಮಿತ್ತ ಸೋಮವಾರ ಕಮಲಾಪುರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಇತರ ನಾಯಕರಿಗೆ ಮೆರವಣಿಗೆ ಮೂಲಕ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು.

ವೇದಿಕೆಯ ಒಂದು ಕಿ.ಮೀ ಆಚೆಯಿಂದಲೆ ಮೆರವಣಿಗೆ ಆರಂಭವಾ ಗಿದ್ದು, ನಾಸಿಕ ಢೋಲ್‌, ಬಾಜಾ, ಭಜಂತ್ರಿ, ಲಂಬಾಣಿ ಕುಣಿತ ಗಮನ ಸೆಳೆಯಿತು. ಮಾಜಿ ಸಚಿವ ರೇವು ನಾಯಕರ ಪುತ್ರಿ ಸುನಿತಾ ರಾಠೋಡ ಲಂಬಾಣಿ ಮಹಿಳೆಯರೊಂದಿಗೆ ಹೆಜ್ಜೆ ಹಾಕಿ ದರು. ಸಾವಿರಾರು ಸಂಖ್ಯೆಯಲ್ಲಿದ ಕಾರ್ಯಕರ್ತರು ಬೈಕ್‌ ರ್‍ಯಾಲಿ ನಡೆಸಿದರು.

ಟಿಕೆಟ್‌ ಆಕಾಂಕ್ಷಿಗಳ ರಣಾಂಗಣ ವಾಗಿದ್ದ ಈ ಸಮಾರಂಭದಲ್ಲಿ, ಬಿಎಸ್‌ವೈ ಮಾತನಾಡಿ, ‘ಟಿಕೆಟ್ ಆಕಾಂಕ್ಷಿಗಳು ಐದಾರು ಜನ ಇರುವುದು ಸಹಜ. ನಾವು ಮೊದಲಿನ ಹಾಗೆ ಹೈಕಮಾಂಡ್‌ನಿಂದ ಟಿಕೆಟ್‌ ಕೊಡುವುದಿಲ್ಲ. ಕ್ಷೇತ್ರದ ಕಾರ್ಯಕರ್ತರು, ಜನರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಅತಿ ಹೆಚ್ಚು ಜನ ಮನ್ನಣೆ ಇರುವ ಅಭ್ಯರ್ಥಿಗೆ ಟಿಕೆಟ್‌ ನೀಡುತ್ತೇವೆ. ಅಭ್ಯರ್ಥಿ ಯಾರೇ ಆದರೂ ಚುನವಾಣೆಯಲ್ಲಿ ಭಿನ್ನಮತಕ್ಕೆ ಎಡೆಮಾಡಿ ಕೊಡದೆ ಎಲ್ಲರೂ ಒಗ್ಗೂಡಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದರು.

ಟಿಕೆಟ್‌ ನೀಡುವ ಯಾವುದೆ ಸುಳಿವು ಬಿಟ್ಟುಕೊಡದ ಈ ಹೇಳಿಕೆ ಟಿಕೆಟ್‌ ಆಕಾಂಕ್ಷಿಗಳಾದ ಮಾಜಿ ಸಚಿವ ಬಾಬುರಾವ ಚವ್ಹಾಣ್‌, ಬಸವರಾಜ ಮತ್ತಿಮೂಡ, ನಾಮದೇವ, ರೇವು ನಾಯಕ ಬೆಳಮಗಿ ಕ್ಷೇತ್ರದಲ್ಲಿ ಮತ್ತಷ್ಟು ಸಂಚರಿಸುವಂತೆ ಮಾಡಿದೆ.

ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಸಮಾರಂಭ ಆಯೋಜನೆ ಮಾಡಿ ದ್ದು, ಸಾವಿರಾರು ಸಂಖ್ಯೆಯಲ್ಲಿ ವಾಹನ ಹಾಗೂ ಕಾರ್ಯಕರ್ತರು ಜಮಾವಣೆ ಗೊಂಡಿದ್ದರಿಂದ ಸಂಚಾರಕ್ಕೆ ಅಡತಡೆ ಉಂಟಾಯಿತು.

ನಡೆಯದ ಕಳ್ಳನ ಕೈಚಳಕ: ಛಾಯಾಗ್ರಾಹಕರೊಬ್ಬರ ಜೇಬಿಗೆ ಕೈಹಾಕಿದ್ದ ಕಳ್ಳನೊಬ್ಬ ಸಿಕ್ಕಿಹಾಕಿಕೊಂಡು ಪೊಲೀಸರ ಅತಿಥಿಯಾದ ಘಟನೆ ನಡೆಯಿತು. ಸಮಾರಂಭ ಮುಗಿಸಿಕೊಂಡು ಸಾರ್ವಜನಿಕರು ಹೊರಬರುತ್ತಿರುವಾಗ ಜನದಟ್ಟಣೆ ಏರ್ಪಟ್ಟಿತು. ಇದೇ ಸಮಯದಲ್ಲಿ ಪಿಕ್‌ಪ್ಯಾಕೆಟ್‌ ಮಾಡಲು ಮುಂದಾದ ಆತನನ್ನು ಪೊಲೀಸರು ಬಂಧಿಸಿದರು.

ಹಣ ಹಂಚಿಕೆ ವಿಡಿಯೊ ವೈರಲ್‌
ಸಮಾರಂಭಕ್ಕೆ ಆಗಮಿಸುತ್ತಿರುವ ಕಾರ್ಯಕರ್ತರಿಗೆ ಪೆಟ್ರೋಲ್‌ ಬಂಕ್‌ ಒಂದರಲ್ಲಿ ಜೇಬಿನಲ್ಲಿ ಹಣ ತುರುಕುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಟಿಕೆಟ್‌ ಆಕಾಂಕ್ಷಿಯೊಬ್ಬರ ಬೆಂಬಲಿಗರಾಗಿರುವ ಇವರು, ಬೈಕ್‌ ರ್‍ಯಾಲಿಗೆ ಆಗಮಿಸಿದ್ದು, ಬೈಕ್‌ಗೆ ಪೆಟ್ರೋಲ್‌ ಹಾಕಿಸುವುದರ ಜೊತೆಗೆ ಹಣ ತುರುಕುತ್ತಿರುವುದು ದೃಶಾವಳಿಗಳಲ್ಲಿ ಕಂಡುಬರುತ್ತಿದ್ದು, ಕೆಲವು ಕಾಂಗ್ರೆಸ್‌ ನಾಯಕರು ಇದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಅಫಜಲಪುರ
ಸಕ್ರಮ ಮಾಡಿಕೊಳ್ಳದಿದ್ದರೆ ಆಸ್ತಿ ಮುಟ್ಟುಗೋಲು

‘ಪಟ್ಟಣದಲ್ಲಿ ರಸ್ತೆಯ ಬದಿ ಮತ್ತು ಇತರೆಡೆ ಅಕ್ರಮ ಶೆಡ್‌ಗಳು ನಿರ್ಮಾಣವಾಗಿದ್ದು, ಅವುಗಳ ಸಕ್ರಮಕ್ಕೆ 3 ನೋಟಿಸ್‌ ಕೊಡಿ. ಆದರೂ ಅವರು ಸಕ್ರಮ ಮಾಡಿಕೊಳ್ಳದಿದ್ದರೆ ಅವರ ಶೆಡ್‌ ಗಳನ್ನು...

20 Mar, 2018

ಆಳಂದ
‘ಜೆಡಿಯು’ನಿಂದ ಭ್ರಷ್ಟಾಚಾರರಹಿತ ರಾಜಕಾರಣ

‘ಇಂದಿನ ರಾಜಕಾರಣಿಗಳ ಬಗೆಗೆ ಜನಸಾಮಾನ್ಯರಲ್ಲಿ ಕೆಟ್ಟ ಅಭಿಪ್ರಾಯ ಬೆಳೆದಿದೆ. ಇದನ್ನು ಹೋಗಲಾಡಿಸಲು ಜೆಡಿಯು ರಾಜ್ಯದಲ್ಲಿ ಸ್ವಚ್ಛ, ಪಾರದರ್ಶಕ ವ್ಯಕ್ತಿತ್ವದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ...

20 Mar, 2018
ಜೈ ಬಸವೇಶ; ಮೊಳಗಿದ ಜಯಘೋಷ

ಕಲಬುರ್ಗಿ
ಜೈ ಬಸವೇಶ; ಮೊಳಗಿದ ಜಯಘೋಷ

20 Mar, 2018

ಕಲಬುರ್ಗಿ
ಕಲೆ, ಸಂಸ್ಕೃತಿ ಉಳಿಸಲು ಸಲಹೆ

’ಕನ್ನಡ ಭಾಷೆ, ಕಲೆ, ಸಂಸ್ಕೃತಿ ನಶಿಸಿ ಹೋಗದಂತೆ ಹಲವಾರು ಜನಪದ ಕಲಾವಿದರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ...

20 Mar, 2018

ಕಲಬುರ್ಗಿ
ಶೇ 30ರಷ್ಟು ‘ಜಿಇಆರ್’ ಹೆಚ್ಚಳ ಗುರಿ

‘ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ)ವು 2020ರ ವೇಳೆಗೆ ನಿವ್ವಳ ದಾಖಲಾತಿ ಅನುಪಾತ (ಜಿಇಆರ್)ವನ್ನು ಶೇ 30ರಷ್ಟು ಹೆಚ್ಚಿಸುವ ಗುರಿ ಹೊಂದಿದೆ’ ಎಂದು...

20 Mar, 2018