ಕಾರವಾರ

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಧರ್ಮಸ್ಥಳದ ಮಂಜುನಾಥನಿಗೆ ಮುಡಿ ಹರಕೆ!

ಈ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಿಕ್ಕೆ ಬರಲಿದೆ ಎಂಬ ಸಂಪೂರ್ಣ ವಿಶ್ವಾಸ ಇದೆ. ಮುಖ್ಯಮಂತ್ರಿಯಾಗಿ ಅವರು ಮತ್ತೊಮ್ಮೆ ಆಡಳಿತ ನಡೆಸಲಿದ್ದಾರೆ.

ಕಾರವಾರ: ‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಈ ಬಾರಿಯ ಚುನಾವಣೆಯಲ್ಲಿ ಜಯಶಾಲಿಯಾಗಬೇಕು ಎಂದು ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಗೆ ಮುಡಿ ಹರಕೆ ಹೊತ್ತಿದ್ದು, ಅವರು ಮುಖ್ಯಮಂತ್ರಿ ಆಗುವವರೆಗೆ ತಲೆ ಕೂದಲು, ಮೀಸೆ, ಗಡ್ಡವನ್ನು ಮುಂಡನೆ ಮಾಡಿಸಿಕೊಳ್ಳುವುದಿಲ್ಲ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಅಜಿತ್ ಪೊಕಳೆ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಿಕ್ಕೆ ಬರಲಿದೆ ಎಂಬ ಸಂಪೂರ್ಣ ವಿಶ್ವಾಸ ಇದೆ. ಮುಖ್ಯಮಂತ್ರಿಯಾಗಿ ಅವರು ಮತ್ತೊಮ್ಮೆ ಆಡಳಿತ ನಡೆಸಲಿದ್ದಾರೆ. ಅವರಿಗಾಗಿ ಈ ಹರಕೆಯನ್ನು ಹೊರಲಾಗಿದೆ. ನನ್ನ ಬೇಡಿಕೆ ಈಡೇರಿದ ಬಳಿಕ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಸಾಗಿ, ಹರಕೆ ತೀರಿಸುತ್ತೇನೆ’ ಎಂದರು.

ಶೀಘ್ರವೇ ಅಭ್ಯರ್ಥಿಗಳ ಘೋಷಣೆ: ‘ಜೆಡಿಎಸ್ ರಾಷ್ಟ್ರ ಘಟಕದ ಅಧ್ಯಕ್ಷ ದೇವೆಗೌಡರು ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಜಿಲ್ಲಾ ಪ್ರವಾಸದ ನಿಮಿತ್ತ ಇಲ್ಲಿಗೆ ಶೀಘ್ರವೇ ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಸದ್ಯದಲ್ಲಿಯೇ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಈವರೆಗೂ ಬಗೆಹರಿಸಲಾಗದ ಇಲ್ಲಿನ ಕುಡಿಯುವ ನೀರು, ರಸ್ತೆ ಸೇರಿದಂತೆ ಇನ್ನಿತರ ಸಮ್ಯೆಗಳಿಗೆ ಪರಿಹಾರ ದೊರಕಿಸಿ ಕೊಡಲಾಗುವುದು’ ಎಂದು ಹೇಳಿದರು. ಜೆಡಿಎಸ್ ಮುಖಂಡರಾದ ಪ್ರದೀಪ ಶೇಜವಾಡಕರ್, ಖಲೀಲುಲ್ಲಾ ಶೇಖ್, ಶಂಕರ್ ಇದ್ದರು.

 

Comments
ಈ ವಿಭಾಗದಿಂದ ಇನ್ನಷ್ಟು
ಅಂತೂ ಆರಂಭವಾಯ್ತು ಬಂದರಿನಲ್ಲಿ ಹೂಳೆತ್ತುವ ಕಾರ್ಯ!

ಕಾರವಾರ
ಅಂತೂ ಆರಂಭವಾಯ್ತು ಬಂದರಿನಲ್ಲಿ ಹೂಳೆತ್ತುವ ಕಾರ್ಯ!

16 Jan, 2018

ಕಾರವಾರ
ಪಕ್ಷಿ ವೀಕ್ಷಣೆ ಕಾರ್ಯಾಗಾರ; 31 ಪ್ರಬೇಧಗಳ ಗುರುತು

ತಾಲ್ಲೂಕಿನ ಮಲ್ಲಾಪುರದ ಆದರ್ಶ ವಿದ್ಯಾಲಯ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಸುತ್ತಮುತ್ತಲಿನ ಜೀವಿ ಸಂಕುಲಗಳನ್ನು ಪರಿಚಯಿಸಲು ಇತ್ತೀಚಿಗೆ ನಡೆಸಿದ ಪಕ್ಷಿ ವೀಕ್ಷಣೆ ಕಾರ್ಯಾಗಾರದಲ್ಲಿ ಒಟ್ಟು 31 ಪ್ರಬೇಧಗಳನ್ನು ಗುರುತಿಸಲಾಗಿದೆ. ...

16 Jan, 2018

ಉತ್ತರ ಕನ್ನಡ
ತಾತ್ಕಾಲಿಕವಾಗಿ ಬಾಗಿಲುಮುಚ್ಚಿದ ಪ್ರಯೋಗಾಲಯ

‘ಬೇಸಿಗೆ ಕಾಲ ನಮ್ಮ ಕಣ್ಣೆದುರೇ ಇದೆ. ಬಾವಿ, ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನೀರಿನ ಗುಣಮಟ್ಟ ತಿಳಿದುಕೊಳ್ಳುವುದು ಅತ್ಯಗತ್ಯ. ಆದ್ದರಿಂದ ಅಗತ್ಯ...

16 Jan, 2018

ದಾಂಡೇಲಿ
ಫೆ. 2 ರಿಂದ ಹಾರ್ನ್‌ಬೆಲ್‌ ಹಕ್ಕಿ ಹಬ್ಬ

ಎಲ್ಲ ವರ್ಗದ ಜನರಿಗೂ ಅದರಲ್ಲಿಯೂ ಯುವ ಪೀಳಿಗೆಗೆ ಹಾರ್ನಬಿಲ್ ಹಕ್ಕಿಯ ಮಹತ್ವ ಕುರಿತು ಅರಿವು ಮೂಡಿಸುವುದು ಹಬ್ಬದ ಉದ್ದೇಶ.

15 Jan, 2018
ಪ್ರಯಾಣಿಕರ ಸ್ವಾಗತಿಸಲಿದೆ ಪುಷ್ಪಲೋಕ!

ಕಾರವಾರ
ಪ್ರಯಾಣಿಕರ ಸ್ವಾಗತಿಸಲಿದೆ ಪುಷ್ಪಲೋಕ!

15 Jan, 2018