ಬಿಜೆಪಿ ಲೇವಡಿ

ಬೆಲೆ ಏರಿಕೆ ಟೀಕೆಯಲ್ಲಿ ರಾಹುಲ್‌ ಎಡವಟ್ಟು

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತೊಮ್ಮೆ ಬಿಜೆಪಿ ವಿರುದ್ಧದ ದಾಳಿಗೆ ಹಿಂದಿ ಕಾವ್ಯವನ್ನು ಅಸ್ತ್ರವನ್ನಾಗಿ ಬಳಿಸಿಕೊಂಡಿದ್ದಾರೆ.

ಬೆಲೆ ಏರಿಕೆ ಟೀಕೆಯಲ್ಲಿ ರಾಹುಲ್‌ ಎಡವಟ್ಟು

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ ಗಾಂಧಿ ಮತ್ತೊಮ್ಮೆ ಬಿಜೆಪಿ ವಿರುದ್ಧದ ದಾಳಿಗೆ ಹಿಂದಿ ಕಾವ್ಯವನ್ನು ಅಸ್ತ್ರವನ್ನಾಗಿ ಬಳಿಸಿಕೊಂಡಿದ್ದಾರೆ.

ಈ ಬಾರಿ ಅವರು ಜೀವನಾವಶ್ಯಕ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಪಡುತ್ತಿರುವ ಕಷ್ಟಗಳನ್ನು ಕಾವ್ಯದ ರೂಪದಲ್ಲಿ ಹಿಡಿದಿಟ್ಟಿದ್ದಾರೆ. ಆ ಭರದಲ್ಲಿ ಮತ್ತೊಂದು ಯಡವಟ್ಟು ಮಾಡಿಕೊಂಡು ತಕ್ಷಣ ಸರಿಪಡಿಸಿಕೊಂಡಿದ್ದಾರೆ.

ಬೇಳೆ, ಟೊಮೆಟೊ, ಈರುಳ್ಳಿ, ಹಾಲು, ಡೀಸೆಲ್‌, ಪೆಟ್ರೋಲ್‌ ಅಡುಗೆ ಅನಿಲ ಮುಂತಾದ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಶೇಕಡಾವಾರು ಪ್ರಮಾಣದ ಪಟ್ಟಿಯನ್ನು ಅವರು ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದರು.

ಈ ಪಟ್ಟಿಯಲ್ಲಿ ಶೇಕಡಾವಾರು ಬೆಲೆ ಏರಿಕೆ ಪ್ರಮಾಣ ತೋರಿಸುವ ಅಂಕಿ, ಅಂಶ ತಪ್ಪಾಗಿದ್ದವು. ಇದನ್ನು ಗಮನಿಸಿದ ಅವರು ತಕ್ಷಣ ಎಚ್ಚೆತ್ತುಕೊಂಡು ಪರಿಷ್ಕೃತ ಪಟ್ಟಿ ಪ್ರಕಟಿಸಿದ್ದಾರೆ. ಇದನ್ನೇ ಬಿಜೆಪಿ, ರಾಹುಲ್‌ ಲೇವಡಿಗೆ ಬಳಸಿಕೊಂಡಿದೆ.

‘ಜುಲ್ಮೊ ಕೀ ಬೇವಫಾಯಿ ಮಾರ್‌ ಗಯಿ. ನೋಟ್‌ ಬಂದಿ ಕೀ ಲೂಟಾಯಿ ಮಾರ್‌ ಗಯಿ. ಜಿಎಸ್‌ಟಿ ಸಾರಿ ಕಮಾಯಿ ಮಾರ್ ಗಯಿ. ಬಾಕಿ ಕುಚ್‌ ಬಚಾ ತೊ ಮೆಹಂಗಾಯಿ ಮಾರ್‌ ಗಯಿ’ ಎಂಬ ಕಾವ್ಯಾತ್ಮಕ ಟೀಕೆಯನ್ನು ಅವರು ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ. (ಸುಳ್ಳು ಭರವಸೆಗಳನ್ನು ನಂಬಿ ಮೋಸ ಹೋದೆವು. ನೋಟು ರದ್ದತಿಯಲ್ಲೂ ಕೊಳ್ಳೆ ಹೊಡೆಯಲಾಯಿತು. ಜಿಎಸ್‌ಟಿ ನಮ್ಮ ಎಲ್ಲ ಗಳಿಕೆಯನ್ನು ತಿಂದು ಹಾಕಿದೆ. ಉಳಿದ ಅಲ್ಪಸ್ವಲ್ಪವನ್ನು ಈ ಬೆಲೆ ಏರಿಕೆ ಕಬಳಿಸಿದೆ.)

ಗುಜರಾತ್‌ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವಿಟರ್‌ನಲ್ಲಿ ರಾಹುಲ್‌ ದಿನಕ್ಕೊಂದು ಪ್ರಶ್ನೆ ಕೇಳುತ್ತಿದ್ದಾರೆ.  2014 ಮತ್ತು 2017ರ ಅವಧಿಯಲ್ಲಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಲ್ಲಾದ ವ್ಯತ್ಯಾಸಗಳನ್ನು ಮಂಗಳವಾರ ಅವರು ಅಂಕಿ, ಅಂಶಗಳ ಸಮೇತ ಪ್ರಕಟಿಸಿದ್ದಾರೆ.

2014ರಲ್ಲಿ ₹414ರಷ್ಟಿದ್ದ ಅಡುಗೆ ಅನಿಲದ ಸಿಲಿಂಡರ್‌ ಬೆಲೆ ಮೂರು ವರ್ಷಗಳಲ್ಲಿ(2017) ₹742 ತಲುಪಿದೆ. ₹45ಕ್ಕೆ ಸಿಗುತ್ತಿದ್ದ  ಬೇಳೆ ₹80 ಆಗಿದೆ. ಟೊಮೆಟೊ ಬೆಲೆ ಮೂರು ಪಟ್ಟು, ಈರುಳ್ಳಿ ಬೆಲೆ ದುಪ್ಪಟ್ಟು ಆಗಿದೆ. ₹38 ಇದ್ದ ಹಾಲು ₹50 ಆಗಿದೆ.  ಪೆಟ್ರೋಲ್‌, ಡೀಸೆಲ್‌ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿವೆ ಎಂದು ಅವರು ಮೋದಿ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ನವದೆಹಲಿ
ಅನಿಶ್ಚಿತ ಸ್ಥಿತಿಯಲ್ಲಿ ಸೇವಾ ಭವಿಷ್ಯ ಕೆ.ಎ.ಎಸ್‌ ಅಧಿಕಾರಿಗಳ ವಾದ

ನಾನಾ ಹುದ್ದೆಗಳಲ್ಲಿ ಈಗಾಗಲೇ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ತಮ್ಮ ನೌಕರಿಯ ಭವಿಷ್ಯವನ್ನು ರಾಜ್ಯ ಹೈಕೋರ್ಟ್ ಪಣಕ್ಕೆ ಒಡ್ಡಿದೆ ಎಂದು 1998,...

18 Jan, 2018

ಸಿಬಿಎಸ್‌ಇ
ಸಿಬಿಎಸ್‌ಇ ಶಾಲೆಗಳಿಗೆ ಇನ್ನು ಮುಂದೆ ಶಾಶ್ವತ ಮಾನ್ಯತೆ ಇಲ್ಲ

ಸಿಬಿಎಸ್ಇ ಪಠ್ಯಕ್ರಮ ಬೋಧಿಸುವ ಶಾಲೆಗಳಿಗೆ ಇನ್ನು ಮುಂದೆ ಶಾಶ್ವತ ಮಾನ್ಯತೆ ನೀಡದಿರಲು ಕೇಂದ್ರ ಪ್ರೌಢ ಶಿಕ್ಷಣ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ನಿರ್ಧರಿಸಿದೆ.

18 Jan, 2018
ಕಾವೇರಿ: ಕೇಂದ್ರದ ವಿರುದ್ಧ ಪಳನಿ ಗರಂ

ಕಾವೇರಿ ನದಿ ನೀರು ವಿವಾದ
ಕಾವೇರಿ: ಕೇಂದ್ರದ ವಿರುದ್ಧ ಪಳನಿ ಗರಂ

18 Jan, 2018
‘ಓದು, ಲೆಕ್ಕಾಚಾರ; ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಡಕು’

ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿ–2017 (ಗ್ರಾಮೀಣ ಭಾರತ)
‘ಓದು, ಲೆಕ್ಕಾಚಾರ; ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಡಕು’

18 Jan, 2018

ವೇತನ ಏರಿಕೆ
ಚುನಾವಣಾ ಆಯುಕ್ತರ ಸಂಬಳ ದುಪ್ಪಟ್ಟು?

ಕೇಂದ್ರ ಚುನಾವಣಾ ಆಯುಕ್ತರ ಸಂಬಳ ಎರಡು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಆಯುಕ್ತರ ಪರಿಷ್ಕೃತ ಸಂಬಳ ಸುಪ್ರೀಂ...

18 Jan, 2018