ಹಿರಿಯ ನಟ

ಸರ್ಕಾರಿ ಗೌರವಗಳೊಂದಿಗೆ ಶಶಿ ಕಪೂರ್‌ ಅಂತ್ಯಕ್ರಿಯೆ

ಹಿಂದಿ ಚಲನಚಿತ್ರರಂಗದ ದಂತಕಥೆ ಶಶಿ ಕಪೂರ್‌ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಮಧ್ಯಾಹ್ನ ನೆರವೇರಿತು.

ಸರ್ಕಾರಿ ಗೌರವಗಳೊಂದಿಗೆ ಶಶಿ ಕಪೂರ್‌ ಅಂತ್ಯಕ್ರಿಯೆ

ಮುಂಬೈ: ಹಿಂದಿ ಚಲನಚಿತ್ರರಂಗದ ದಂತಕಥೆ ಶಶಿ ಕಪೂರ್‌ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ಮಧ್ಯಾಹ್ನ ನೆರವೇರಿತು.

ಇಲ್ಲಿನ ಸಾಂತಾಕ್ರೂಜ್ ಹಿಂದೂ ವಿದ್ಯುತ್‌ ಚಿತಾಗಾರದಲ್ಲಿ ನಡೆದ ಅಂತ್ಯಕ್ರಿಯೆಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಸುರಿಯುತ್ತಿದ್ದ ಮಳೆಯ ನಡುವೆಯೂ ನೂರಾರು ಜನ ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆದರು. ಶಶಿ ಕಪೂರ್‌ ಅವರ ಮಕ್ಕಳಾದ ಕುನಾಲ್‌, ಕರಣ್‌, ಸಂಜನಾ ಮತ್ತು ಕುಟುಂಬದ ಇತರ ಸದಸ್ಯರು ಸ್ಥಳದಲ್ಲಿದ್ದರು.

‘ಅವರನ್ನು ಪ್ರೀತಿಯಿಂದ ಅಂಕಲ್‌ ಎಂದು ಕರೆಯುತ್ತಿದ್ದೆ. ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದೆ. ಅವರ ನಿಧನ ಕೇವಲ ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಬಾಲಿವುಡ್‌ಗೇ ದೊಡ್ಡ ನಷ್ಟ’ ಎಂದು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಸೈಫ್‌ ಅಲಿ ಖಾನ್‌ ಪ್ರತಿಕ್ರಿಯಿಸಿದ್ದಾರೆ. ಸೈಫ್‌ ಪತ್ನಿ ಕರೀನಾ ಕಪೂರ್‌ ಅವರು ಶಶಿ ಕಪೂರ್‌ ಅವರ ಅಣ್ಣನ ಮಗಳು.

**

ಅಂತಿಮ ನಮನ ಸಲ್ಲಿಸಿದವರು

ಅಮಿತಾಭ್‌ ಬಚ್ಚನ್‌, ಅಭಿಷೇಕ್‌ ಬಚ್ಚನ್‌, ಶ್ಯಾಮ್‌ ಬೆನಗಲ್‌, ಅಮೀರ್‌ ಖಾನ್‌, ಶಾರುಖ್‌ ಖಾನ್‌, ನಾಸಿರುದ್ದೀನ್‌ ಷಾ, ಅನಿಲ್‌ ಕಪೂರ್‌, ದೀವಾರ್‌ ಚಿತ್ರದ ‘ಮೇರೆ ಪಾಸ್‌ ಮಾ ಹೈ’ ಎಂಬ ಶಶಿಕಪೂರ್‌ ಅವರ ಜನಪ್ರಿಯ ಡೈಲಾಗ್‌ನ ಬರಹಗಾರ ಸಲೀಮ್‌ ಖಾನ್‌, ಹನ್ಸಲ್‌ ಮೆಹ್ತಾ, ನಂದಿತಾ ದಾಸ್‌, ಲಾರಾ ದತ್ತಾ, ಅವರ ಪತಿ ಮಹೇಶ್‌ ಭೂಪತಿ, ಮಹಾರಾಷ್ಟ್ರದ ರಾಜಕೀಯ ಮುಖಂಡ ರಾಮದಾಸ್‌ ಆಠವಳೆ, ಜಾವೇದ್‌ ಅಖ್ತರ್‌, ಸಂಜಯ್‌ ದತ್‌, ಪೂನಮ್‌ ಧಿಲ್ಲಾನ್‌, ಶಕ್ತಿ ಕಪೂರ್‌, ಸುಪ್ರಿಯಾ ಪಾಠಕ್‌, ಸರೋಜ್‌ ಖಾನ್‌...

Comments
ಈ ವಿಭಾಗದಿಂದ ಇನ್ನಷ್ಟು

ಪ್ರತಾಪಗಢ
ಉತ್ತರ ಪ್ರದೇಶ: ದಲಿತ ಬಾಲಕಿ ಸಜೀವ ದಹನ

ದೀಪ್ ಹಾಗೂ ಆತನ ತಂದೆ, ಮಿಥಾಯಿಲಾಲ್ ಎನ್ನುವವರ ಮನೆಗೆ ನುಗ್ಗಿ ಅವರ ಮಗಳು ಅಂಜು ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಪ್ರಕರಣ ನಡೆದ...

24 Jan, 2018
ನಾಳೆ ‘ಪದ್ಮಾವತ್‌’ ಚಿತ್ರ ಬಿಡುಗಡೆ ಖಚಿತ

ಆದೇಶ ಮಾರ್ಪಾಡಿಗೆ ಸುಪ್ರೀಂ ಕೋರ್ಟ್‌ ನಿರಾಕರಣೆ
ನಾಳೆ ‘ಪದ್ಮಾವತ್‌’ ಚಿತ್ರ ಬಿಡುಗಡೆ ಖಚಿತ

24 Jan, 2018
ರಾಜಸ್ಥಾನ, ಬಿಹಾರದಲ್ಲಿ ಪ್ರದರ್ಶನ ಇಲ್ಲ

ಕರ್ಣಿ ಸೇನಾದ ಬೆದರಿಕೆಗೆ ಮಣಿದ ಚಿತ್ರಮಂದಿರಗಳ ಮಾಲೀಕರು
ರಾಜಸ್ಥಾನ, ಬಿಹಾರದಲ್ಲಿ ಪ್ರದರ್ಶನ ಇಲ್ಲ

24 Jan, 2018

ಜೈಪುರ
ಜೈಪುರ ಸಾಹಿತ್ಯ ಉತ್ಸವಕ್ಕೆ ಬಿಗಿ ಭದ್ರತೆ

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷ ಪ್ರಸೂನ್‌ ಜೋಷಿ ಅವರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕ ಸಂಜಯ್‌ ರಾಯ್‌ ಹೇಳಿದ್ದಾರೆ.

24 Jan, 2018

ನವದೆಹಲಿ
ಎಎಪಿ: ಹೈಕೋರ್ಟ್‌ ಮೊರೆ ಹೋದ ಅನರ್ಹ ಶಾಸಕರು

ಲಾಭದಾಯಕ ಹುದ್ದೆ ಹೊಂದಿದ ಪ್ರಕರಣದಲ್ಲಿ ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಆಮ್‌ ಆದ್ಮಿ ಪಕ್ಷದ 20 ಶಾಸಕರು ದೆಹಲಿ ಹೈಕೋರ್ಟ್‌ನಲ್ಲಿ ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ.

24 Jan, 2018