ರಬಕವಿ ಬನಹಟ್ಟಿ

‘ಹಿಂದೂಗಳನ್ನು ಹತ್ತಿಕ್ಕುವ ಕಾರ್ಯ’

‘ನಾಲ್ಕೂವರೆ ವರ್ಷಗಳಲ್ಲಿ ಹತ್ತೊಂಬತ್ತಕ್ಕೂ ಹೆಚ್ಚು ಹಿಂದೂ ಮುಖಂಡರ ಹತ್ಯೆ ನಡೆದಿದೆ. ಅವುಗಳ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ’

ತೇರದಾಳದಲ್ಲಿ ಸಂಸದ ಪ್ರತಾಪ ಸಿಂಹ ಅವರ ಬಂಧವನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಸದಸ್ಯರು ಪ್ರತಿಭಟನಾ ರ‍್ಯಾಲಿ ನಡೆಸಿದರು

ರಬಕವಿ ಬನಹಟ್ಟಿ: ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ಹಿಂದೂಗಳನ್ನು ಹತ್ತಿಕ್ಕುವ ಕಾರ್ಯವನ್ನು ಮಾಡುತ್ತಿದೆ’ ಎಂದು ನಂದು ಗಾಯಕವಾಡ ತಿಳಿಸಿದರು. ಅವರು ಸೋಮವಾರ ಪಟ್ಟಣದಲ್ಲಿ ಸಂಸದ ಪ್ರತಾಪ ಸಿಂಹ ಅವರ ಬಂಧನವನ್ನು ಖಂಡಿಸಿ ಕೈಗೊಂಡ ಪ್ರತಿಭಟನಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

‘ನಾಲ್ಕೂವರೆ ವರ್ಷಗಳಲ್ಲಿ ಹತ್ತೊಂಬತ್ತಕ್ಕೂ ಹೆಚ್ಚು ಹಿಂದೂ ಮುಖಂಡರ ಹತ್ಯೆ ನಡೆದಿದೆ. ಅವುಗಳ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿದೆ’ ಎಂದು ಆರೋಪಿಸಿದರು.

ರವಿ ಜವಳಗಿ ಹಾಗೂ ರಘು ಹತ್ತೆನ್ನವರ ಮಾತನಾಡಿ, ‘ಭಾರತದ ನೆಲದಲ್ಲಿ ಅದೂ ಹುಬ್ಬಳ್ಳಿಯಲ್ಲಿ ಮೌಲ್ವಿಯೊಬ್ಬರು ದೇಶ ವಿರೋಧಿ ಮಾತುಗಳನ್ನು ಹೇಳಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಪೇಟೆ ಭಾಗದ ಮಾರುತಿ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ರ್‍ಯಾಲಿ ಪ್ರಮುಖ ಬೀದಿಗಳಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತೇರದಾಳ ಯುವ ಮೋರ್ಚಾ ಘಟಕದ ಅಧ್ಯಕ್ಷ ಸದಾಶಿವ ಹೊಸಮನಿ, ರಾಜು ಟೆಂಗಿನಕಾಯಿ, ಈಶ್ವರ ಕಾಡದೇವರ, ಸಿದ್ದು ಅಮ್ಮಣಗಿ, ಕೃಷ್ಣಾ ಲಾಳಕಿ, ಕರೆಪ್ಪ ಮುಗಳಖೋಡ, ಬಸವರಾಜ ಬಾಳಿಕಾಯಿ, ಸುರೇಶ ಅಕಿವಾಟ, ಮಹಾವೀರ ಭಿಲವಡಿ, ಪ್ರಕಾಶ ಮಾನಶೆಟ್ಟಿ ಸೇರಿದಂತೆ ಅನೇಕರು ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
33 ಸಾವಿರ ಅಭ್ಯರ್ಥಿಗಳಿಂದ ನೋಂದಣಿ!

ಬಾಗಲಕೋಟೆ
33 ಸಾವಿರ ಅಭ್ಯರ್ಥಿಗಳಿಂದ ನೋಂದಣಿ!

20 Jan, 2018

ಅಮೀನಗಡ
ಸಂದಿಗ್ಧ ಪರಿಸ್ಥಿತಿಯಲ್ಲಿ ಕರಕುಶಲಕರ್ಮಿಗಳು

‘ದೇಶದಲ್ಲಿ ವಿವಿಧ ಕರಕುಶಲ ಉತ್ಪನ್ನಗಳನ್ನು ತಮ್ಮ ಕರಗಳಿಂದಲೇ ಉತ್ಪಾದನೆಯನ್ನು ಮಾಡಿ ಜೀವನವನ್ನು ಸಾಗಿಸುವ ಶ್ರಮ ಜೀವಿಗಳ ಸಂಖ್ಯೆ ಶೇ 70 ರಷ್ಟಿದ್ದು, ಯಾಂತ್ರಿಕತೆಯಿಂದ ಬದುಕುವ...

20 Jan, 2018

ಅಮೀನಗಡ
ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ: ವಿಷಾದ

ದೇಶದಲ್ಲಿ ಸಂವಿಧಾನಾತ್ಮಕ ಕಾನೂನುಗಳಲ್ಲಿ ಶಿಕ್ಷಣ ಕಲಿಕೆಗೆ ಮತ್ತು ಬದುಕಿಗೆ ಅನ್ವಯವಾಗುವಷ್ಟು ಕಾನೂನು ಜ್ಞಾನ ಪಡೆಯಬೇಕು.

20 Jan, 2018
‘ಬಸವಣ್ಣನನ್ನು ಧರ್ಮ ಗುರು ಎಂದು ಒಪ್ಪಿಕೊಳ್ಳುತ್ತಿಲ್ಲ'

ಕೂಡಲಸಂಗಮ
‘ಬಸವಣ್ಣನನ್ನು ಧರ್ಮ ಗುರು ಎಂದು ಒಪ್ಪಿಕೊಳ್ಳುತ್ತಿಲ್ಲ'

19 Jan, 2018

ಬಾಗಲಕೋಟೆ
ಫುಟ್‌ಫಾತ್ ಮೇಲೆ ಮಲಗಿದ ನೂರಾರು ಅಭ್ಯರ್ಥಿಗಳು!

ಜಿಲ್ಲಾಡಳಿತ ಅಭ್ಯರ್ಥಿಗಳಿಗಾಗಿ ನಗರದ ಬಾಬು ಜಗಜೀವನರಾಂ ಭವನ, ನಗರಸಭೆ ಸಮುದಾಯ ಭವನ, ಶಾದಿಮಹಲ್, ಡಾ. ಬಿ.ಆರ್.ಅಂಬೇಡ್ಕರ್ ಭವನ ಸೇರದಂತೆ ಹಲವೆಡೆ ವ್ಯವಸ್ಥೆ ಕಲ್ಪಿಸಿದೆ.

19 Jan, 2018