ಆರ್‌.ಕೆ. ನಗರ ಉಪ ಚುನಾವಣೆ

ಕೊನೆಗೂ ವಿಶಾಲ್‌ ಕೃಷ್ಣ ನಾಮಪತ್ರ ತಿರಸ್ಕರಿಸಿದ ಚುನಾವಣಾ ಆಯೋಗ

‘ಸುಮತಿ ಮತ್ತು ದೀಪನ್‌ ಎಂಬುವರು ಸಹಿ ತಮ್ಮದಲ್ಲ ಎಂದು ಖುದ್ದಾಗಿ ಹೇಳಿಕೆ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಎಲ್ಲಾ ನಿಯಮಗಳನ್ನು ಪೂರ್ಣಗೊಳಿಸದ ಕಾರಣ ವಿಶಾಲ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ’ ಎಂದು ಚುನಾವಣಾಧಿಕಾರಿ ಕೆ. ವೇಲುಸಾಮಿ ತಿಳಿಸಿದ್ದಾರೆ...

ವಿಶಾಲ್‌ ಕೃಷ್ಣ

ಚೆನ್ನೈ: ಆರ್‌.ಕೆ. ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಟ ವಿಶಾಲ್‌ ಕೃಷ್ಣ ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಆಯೋಗ ಕೊನೆಗೂ ತಿರಸ್ಕರಿಸಿದೆ.

ವಿಶಾಲ್‌ ನಾಮಪತ್ರಕ್ಕೆ ಹತ್ತು ಮಂದಿ ಅನುಮೋದಕರ ಸಹಿ ಬೇಕಿತ್ತು. ಆದರೆ, ನಾಮಪತ್ರದಲ್ಲಿರುವ ಸಹಿ ತಮ್ಮದಲ್ಲ ಎಂದು ಸುಮತಿ ಮತ್ತು ದೀಪನ್‌ ಎಂಬುವವರು ತಿಳಿಸಿದ್ದರು.

ತಾಂತ್ರಿಕ ಕಾರಣ ಎಂದಷ್ಟೇ ಹೇಳಿ ಮಂಗಳವಾರ ನಟ ವಿಶಾಲ್‌ ಹಾಗೂ ಜಯಲಲಿತಾ ಅವರ ಸೋದರ ಸಂಬಂಧಿ ದೀಪಾ ಜಯಕುಮಾರ್‌ ಅವರ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು.

ಚುನಾವಣಾ ಆಯೋಗ ನಾಮಪತ್ರ ತಿರಸ್ಕರಿಸಿದನ್ನು ವಿರೋಧಿಸಿ ನಟ ವಿಶಾಲ್‌ ಹಾಗೂ ಅವರ ಬೆಂಬಲಿಗರು ಚುನಾವಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಚುನಾವಣಾ ಆಯೋಗದ ಪ್ರಾದೇಶಿಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ನಾಮಪತ್ರ ಅಂಗೀಕಾರಗೊಂಡಿದೆ ಎಂದು ಆಯೋಗ ತಿಳಿಸಿತ್ತು. ಆದರೆ, ಅಂತಿಮವಾಗಿ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಕೆ. ವೇಲುಸಾಮಿ ಮಂಗಳವಾರ ರಾತ್ರಿ ತಿಳಿಸಿದ್ದಾರೆ.

‘ಸುಮತಿ ಮತ್ತು ದೀಪನ್‌ ಎಂಬುವರು ಸಹಿ ತಮ್ಮದಲ್ಲ ಎಂದು ಖುದ್ದಾಗಿ ಹೇಳಿಕೆ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಎಲ್ಲಾ ನಿಯಮಗಳನ್ನು ಪೂರ್ಣಗೊಳಿಸದ ಕಾರಣ ವಿಶಾಲ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ’ ಎಂದು ವೇಲುಸಾಮಿ ತಿಳಿಸಿದ್ದಾರೆ.

‘ಮೊದಲು ನನ್ನ ನಾಮಪತ್ರ ಅಂಗೀಕರಿಸಿ ನಾನು ಚುನಾವಣಾಧಿಕಾರಿ ಕಚೇರಿಯಿಂದ ಹೊರಟ ಬಳಿಕ ಅದನ್ನು ತಿರಸ್ಕರಿಸಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ. 2016ರ ಡಿಸೆಂಬರ್‌ 5: ಅಮ್ಮನ ಸಾವು, 2017ರ ಡಿಸೆಂಬರ್‌ 5: ಪ್ರಜಾಪ್ರಭುತ್ವದ ಸಾವು’ ಎಂದು ವಿಶಾಲ್‌ ಟ್ವೀಟ್‌ ಮಾಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಯೋಗಿಗೆ ಸವಾಲು ಹಾಕುತ್ತಿದ್ದೀಯ? ಪೊಲೀಸ್ ಅಧಿಕಾರಿಗೆ ಬೆದರಿಕೆಯೊಡ್ಡಿದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ

ಆಡಿಯೊ ವೈರಲ್
ಯೋಗಿಗೆ ಸವಾಲು ಹಾಕುತ್ತಿದ್ದೀಯ? ಪೊಲೀಸ್ ಅಧಿಕಾರಿಗೆ ಬೆದರಿಕೆಯೊಡ್ಡಿದ ಬಿಜೆಪಿ ಸಂಸದ ರಾಮ್ ಶಂಕರ್ ಕಟೆರಿಯಾ

23 Jan, 2018

'ಸುಪ್ರೀಂ' ನ್ಯಾಯಮೂರ್ತಿಗಳ ಹುದ್ದೆ
ಮಲ್ಹೋತ್ರ, ಜೋಸೆಫ್‌ ಹೆಸರು ಶಿಫಾರಸು

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಕೊಲಿಜಿಯಂ ಇದೇ 11ರಂದು ಈ ಇಬ್ಬರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.

23 Jan, 2018

ನವದೆಹಲಿ
’ಮೋದಿ ಜೀ, ರೈತರು, ಕಾರ್ಮಿಕರನ್ನು ಅಪ್ಪಿಕೊಳ್ಳುವುದೂ ಮುಖ್ಯ’

ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಸಾಮಾನ್ಯ ಮನುಷ್ಯ ಎಂದು ಕರೆದುಕೊಳ್ಳುತ್ತಾರೆ. ಆದರೆ, ಗಣ್ಯ ವ್ಯಕ್ತಿಗಳನ್ನು ಮಾತ್ರ ಅಪ್ಪಿಕೊಳ್ಳುತ್ತಾರೆ ಹೊರತು ರೈತರು, ಕಾರ್ಮಿಕರು ಮತ್ತು ಸೈನಿಕರನ್ನಲ್ಲ...

23 Jan, 2018
ಶಂಕಿತ ಐಎಂ ಉಗ್ರ ಖುರೇಷಿ ಬಂಧನ

ಗುಜರಾತ್ ಸರಣಿ ಸ್ಫೋಟ ಪ್ರಕರಣ
ಶಂಕಿತ ಐಎಂ ಉಗ್ರ ಖುರೇಷಿ ಬಂಧನ

23 Jan, 2018
ಹೈಕೋರ್ಟ್‌ನಿಂದ ಎಎಪಿ ಅರ್ಜಿ ವಾಪಸ್‌

ಲಾಭದಾಯಕ ಹುದ್ದೆಯ ನಿಯಮ ಉಲ್ಲಂಘನೆ
ಹೈಕೋರ್ಟ್‌ನಿಂದ ಎಎಪಿ ಅರ್ಜಿ ವಾಪಸ್‌

23 Jan, 2018