ಸಿಂಧನೂರು

‘ಸಂವಿಧಾನ ಒಪ್ಪದ ಮಠಾಧೀಶರ ತಿರಸ್ಕರಿಸಿ’

‘ದೇಶದ ಸಂವಿಧಾನವನ್ನು ಒಪ್ಪದ ಮಠಾಧೀಶ ಪೇಜಾವರಶ್ರೀ ದೇಶವನ್ನು ಪ್ರೀತಿಸಲಾರರು. ಅಂಥವರ ಹೇಳಿಕೆಯನ್ನು ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಬೇಕು’

ಸಿಂಧನೂರು: ‘ದೇಶದ ಸಂವಿಧಾನವನ್ನು ಒಪ್ಪದ ಮಠಾಧೀಶ ಪೇಜಾವರಶ್ರೀ ದೇಶವನ್ನು ಪ್ರೀತಿಸಲಾರರು. ಅಂಥವರ ಹೇಳಿಕೆಯನ್ನು ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಬೇಕು’ ಎಂದು ಅಂಬೇಡ್ಕರ್ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಪಟ್ಟಿ ಕರೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿಸೋಮವಾರ ಏರ್ಪಡಿಸಿದ್ದ ಅಂಬೇಡ್ಕರ್ ಸೇನೆಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಸಹಸ್ರಾರು ವರ್ಷಗಳಿಂದ ದಲಿತರನ್ನು ಊರ ಹೊರಗಿಟ್ಟು, ಪ್ರಾಣಿಗಳಿಗಿಂತಲೂ ಕನಿಷ್ಠ ರೀತಿಯಿಂದ ಕಂಡಿರುವ ಸರ್ವಣೀಯರು ದಲಿತರ ಏಳ್ಗೆಯನ್ನು ಸಹಿಸದೆ ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾರೆ’ ಎಂದು ಆರೋಪಸಿದರು.

ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಹುಸೇನಪ ಅಮರಾಪೂರ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಭೀಮಣ್ಣ, ಮಹೇಶಕುಮಾರ, ವೆಂಕಟೇಶ ದಿನ್ನಿ, ತಾಲ್ಲೂಕು ಘಟಕದ ಅಧ್ಯಕ್ಷ ನಿರುಪಾದಿ ಸಾಸಲಮರಿ, ಪ್ರಧಾನ ಕಾರ್ಯದರ್ಶಿ ಬಸವರಾಜ, ಉಪಾಧ್ಯಕ್ಷ ವೀರೇಶ ಬೂದಿವಾಳಕ್ಯಾಂಪ್, ಬಾಲರಾಜ, ಸಂಘಟನಾ ಕಾರ್ಯದರ್ಶಿ ನಾಗರಾಜ ಗವಿಮನಿ, ಖಜಾಂಚಿ ಶರಣಬಸವ ಮಲ್ಕಾಪುರ, ನಾಗಲಿಂಗ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಕಡದರಗಡ್ಡಿ: ಮತದಾನ ಬಹಿಷ್ಕಾರ ಎಚ್ಚರಿಕೆ

ಲಿಂಗಸುಗೂರು
ಕಡದರಗಡ್ಡಿ: ಮತದಾನ ಬಹಿಷ್ಕಾರ ಎಚ್ಚರಿಕೆ

26 Apr, 2018

ಲಿಂಗಸುಗೂರು
ಕೋರ್ಟ್ ಮೊರೆ ಹೋಗಲು ತೀರ್ಮಾನ

‘ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಕೇಂದ್ರದ ಅಧಿಸೂಚನೆ ಇಲ್ಲದೆ ವಡ್ಡರ್‌ ಜಾತಿ ಪ್ರಮಾಣ ಪತ್ರ ಪಡೆದು ಅಕ್ರಮ ಆಸ್ತಿ ರಕ್ಷಣೆಗೆ ತಪ್ಪು ಮಾಹಿತಿ ನೀಡಿ...

26 Apr, 2018

ಮಸ್ಕಿ
ಹಣಕ್ಕಾಗಿ ಬಿಜೆಪಿ ಟಿಕೆಟ್‌ ಮಾರಾಟ

‘ಬಿಜೆಪಿಯಲ್ಲಿ ನಿಷ್ಠೆಯಿಂದ ದುಡಿದ ಹಿರಿಯ ಮುಖಂಡರ ಬೆನ್ನಿಗೆ ಚೂರಿ ಹಾಕಿ ಹಣವಂತರಿಗೆ ಬಿ.ಎಸ್‌.ಯಡಿಯೂರಪ್ಪ ಟಿಕೆಟ್ ಮಾರಾಟ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಮಹಾದೇವಪ್ಪಗೌಡ ಪೊಲೀಸ್...

26 Apr, 2018
ಜನ ಬದಲಾವಣೆ ಬಯಸಿದ್ದಾರೆ

ರಾಯಚೂರು
ಜನ ಬದಲಾವಣೆ ಬಯಸಿದ್ದಾರೆ

25 Apr, 2018

ಮಾನ್ವಿ
‘ಕ್ಷೇತ್ರದ ಅಭಿವೃದ್ಧಿಗಾಗಿ ಬದಲಾವಣೆ ಮಾಡಿ’

ಮಾನ್ವಿ ‘ಕ್ಷೇತ್ರವನ್ನು 20ವರ್ಷಗಳ ದುರಾಡಳಿತದಿಂದ ಮುಕ್ತವಾಗಿಸಲು ಮತ್ತು ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಮತದಾರರು ನಾಯಕತ್ವ ಬದಲಾವಣೆ ಮಾಡಬೇಕು’ ಎಂದು ಕಾಂಗ್ರೆಸ್‌ ಪಕ್ಷದ ಮುಖಂಡ...

25 Apr, 2018