ಸಂಕ್ಷಿಪ್ತ ಸುದ್ದಿ

7 ನಕ್ಸಲರ ಹತ್ಯೆ

ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಮಹಿಳೆಯರು ಸೇರಿದಂತೆ 7 ನಕ್ಸಲರನ್ನು ಹತ್ಯೆ ಮಾಡಲಾಗಿದೆ.

ಗಡ್‌ಚಿರೋಲಿ (ಮಹಾರಾಷ್ಟ್ರ) (ಪಿಟಿಐ): ಜಿಲ್ಲೆಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಮಹಿಳೆಯರು ಸೇರಿದಂತೆ 7 ನಕ್ಸಲರನ್ನು ಹತ್ಯೆ ಮಾಡಲಾಗಿದೆ.

‘ಮಕ್ಕಳ ಸ್ನೇಹಿ’ ಕೋರ್ಟ್‌

ಹೈದರಾಬಾದ್ (ಪಿಟಿಐ): ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ನಗರ ಪೊಲೀಸ್ ವಿಭಾಗದ ‘ಭರೋಸಾ’ ಕೇಂದ್ರವು ಶೀಘ್ರವೇ ವಿಶೇಷ ನ್ಯಾಯಾಲಯವನ್ನು ಆರಂಭಿಸಲಿದೆ.

ಈ ನ್ಯಾಯಾಲಯ ಮಕ್ಕಳ ಸ್ನೇಹಿ ಯಾಗಿ ವರ್ತಿಸಲಿದೆ. ತ್ವರಿತ ವಿಚಾರಣೆ ಮಾತ್ರ ವಲ್ಲದೆ, ಸಂತ್ರಸ್ತರು ಮತ್ತೆ ಶೋಷಣೆಗೆ ಒಳಗಾಗುವ ಪ್ರಮಾಣ ಕಡಿಮೆಗೊಳಿಸುತ್ತದೆ. ನ್ಯಾಯಾಧೀಶರು, ವಕೀಲರ ಬಳಿ ಮಕ್ಕಳು ನಿರಾತಂಕವಾಗಿ ಮಾತನಾಡುವಂತೆನೋಡಿಕೊಳ್ಳಲಿದೆ.

ಗುರು– ಶಿಷ್ಯ ಸಂವಾದ

ಜೈಪುರ (ಪಿಟಿಐ): ಕಾಲೇಜುಗಳಿಗೆ ಸಂಬಂಧಿಸಿದ ತೊಂದರೆಗಳು ಮತ್ತು ಸಮಸ್ಯೆಗಳ ಬಗ್ಗೆ ಉಪನ್ಯಾಸಕರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಲು ಅನುವಾಗುವಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ‘ಗುರು–ಶಿಷ್ಯ’ ಕಾರ್ಯಕ್ರಮ ಜಾರಿಗೆ ತರಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ.

ಶಾಲೆಯಲ್ಲಿ ಸಿ.ಸಿ.ಟಿ.ವಿ

ಕೋಲ್ಕತ್ತಾ (ಪಿಟಿಐ): ವಿದ್ಯಾರ್ಥಿಗಳ ಸುರಕ್ಷೆ ದೃಷ್ಟಿಯಿಂದ 15 ದಿನಗಳೊಳಗೆ ಶಾಲಾ ಕ್ಯಾಂಪಸ್‌ಗಳಲ್ಲಿ, ಶೌಚಾಲಯವನ್ನು ಬಿಟ್ಟು ಉಳಿದೆಲ್ಲ ಸ್ಥಳಗಳನ್ನೂ ಒಳಗೊಳ್ಳುವಂತೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ಸಿಐಎಸ್‌ಸಿಇ (ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಶನ್ಸ್‌) ತನ್ನ ಅಧೀನಕ್ಕೆ ಒಳಪಟ್ಟ ನಗರದ ಎಲ್ಲ ಶಾಲೆಗಳಿಗೆ ನಿರ್ದೇಶನ ನೀಡಿದೆ.

ನಗರದ ಪ್ರತಿಷ್ಠಿತ ಶಾಲೆಯಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ ಪೋಷಕರು ತೀವ್ರ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಮಂಡಳಿ ಈ ಸೂಚನೆ ನೀಡಿದೆ.

ಮಹಿಳಾ ಮುಖ್ಯಸ್ಥೆ

ನವದೆಹಲಿ (ಪಿಟಿಐ): ದೆಹಲಿ ಸರ್ಕಾರವು ಸಂಸ್ಕೃತ ಅಕಾಡೆಮಿಗೆ, ಇದೇ ಮೊದಲ ಬಾರಿಗೆ ಮಹಿಳೆಯನ್ನು ಮುಖ್ಯಸ್ಥೆಯನ್ನಾಗಿ ನೇಮಿಸಿದೆ. ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಕಾಂತಾ ರಾಣಿ ಭಾಟಿಯಾ ಅವರು ಅಕಾಡೆಮಿಯ ಚುಕ್ಕಾಣಿ ಹಿಡಿದಿದ್ದಾರೆ. ಹಲವು ಮಹಿಳೆ ಯರಿಗೂ ಅಕಾಡೆಮಿಯಲ್ಲಿ ಪ್ರಾತಿನಿಧ್ಯ ನೀಡಲಾಗಿದೆ.

ಕೆಲಸ ಸ್ಥಗಿತ

ಐಜವಾಲ್‌ (ಪಿಟಿಐ): ಏಳನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಕಚೇರಿ ಕೆಲಸದಿಂದ ದೂರ ಉಳಿದರು. ಇದರಿಂದ ಮಿಜೊರಾಂ ಸರ್ಕಾರದ ಕಾರ್ಯನಿರ್ವಹಣೆ ಮಂಗಳವಾರ ಸಂಪೂರ್ಣ ಸ್ಥಗಿತಗೊಂಡಿತ್ತು.

Comments
ಈ ವಿಭಾಗದಿಂದ ಇನ್ನಷ್ಟು
ನಡೆಯದ ಸಂಸತ್‌ ಕಲಾಪ ಚರ್ಚೆಯಾಗದ ‘ಅವಿಶ್ವಾಸ’

ನವದೆಹಲಿ
ನಡೆಯದ ಸಂಸತ್‌ ಕಲಾಪ ಚರ್ಚೆಯಾಗದ ‘ಅವಿಶ್ವಾಸ’

20 Mar, 2018
ಮನೆಗೊಬ್ಬರು ಯೋಗಪಟು ಯೋಜನೆ

ಜೂನ್‌ 21ರ ಯೋಗ ದಿನಕ್ಕೂ ಮೊದಲು ಜನಜಾಗೃತಿ ಅಭಿಯಾನ
ಮನೆಗೊಬ್ಬರು ಯೋಗಪಟು ಯೋಜನೆ

20 Mar, 2018

ನವದೆಹಲಿ
ಪಠ್ಯಕ್ರಮ ಕಡಿತ ಅಳವಡಿಕೆ ರಾಜ್ಯದ ವಿವೇಚನೆಗೆ: ಕೇಂದ್ರ

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಮುಂದಿಟ್ಟಿರುವ ಶಾಲಾ ಪಠ್ಯಕ್ರಮವನ್ನು ಕಡಿತಗೊಳಿಸುವ ಪ್ರಸ್ತಾವವನ್ನು ‘ಅಳವಡಿಸಿಕೊಳ್ಳುವುದು ಅಥವಾ ಮಾರ್ಪಾಡು ಮಾಡಿಕೊಳ್ಳುವುದು’...

20 Mar, 2018
ಯಥಾಸ್ಥಿತಿ ಮನವಿ ತಳ್ಳಿ ಹಾಕಿದ ‘ಸುಪ್ರೀಂ’

ಗೆಜೆಟೆಡ್‌ ಪ್ರೊಬೆಷನರಿ ಹುದ್ದೆ ನೇಮಕ
ಯಥಾಸ್ಥಿತಿ ಮನವಿ ತಳ್ಳಿ ಹಾಕಿದ ‘ಸುಪ್ರೀಂ’

20 Mar, 2018
ಕ್ಷಮೆ ಕೇಳಿದ ಕೇಜ್ರಿವಾಲ್, ಸಿಸೋಡಿಯಾ

ನವದೆಹಲಿ
ಕ್ಷಮೆ ಕೇಳಿದ ಕೇಜ್ರಿವಾಲ್, ಸಿಸೋಡಿಯಾ

20 Mar, 2018