ನವದೆಹಲಿ

ಮ್ಯಾಕ್ಸ್‌ ಆಸ್ಪತ್ರೆ ಪ್ರಕರಣ: ಮಗು ಸಾವು

ಮ್ಯಾಕ್ಸ್‌ ಆಸ್ಪತ್ರೆಯ ವೈದ್ಯರು ‘ಮೃತಪಟ್ಟಿದೆ’ ಎಂದು ಕೆಲ ದಿನಗಳ ಹಿಂದೆ ಘೋಷಿಸಿದ್ದ ಜೀವಂತ ನವಜಾತ ಶಿಶು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ಕೊನೆಯುಸಿರೆಳೆದಿದೆ.

ನವದೆಹಲಿ: ಇಲ್ಲಿನ ಮ್ಯಾಕ್ಸ್‌ ಆಸ್ಪತ್ರೆಯ ವೈದ್ಯರು ‘ಮೃತಪಟ್ಟಿದೆ’ ಎಂದು ಕೆಲ ದಿನಗಳ ಹಿಂದೆ ಘೋಷಿಸಿದ್ದ ಜೀವಂತ ನವಜಾತ ಶಿಶು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ಕೊನೆಯುಸಿರೆಳೆದಿದೆ.

ಈ ಆಸ್ಪತ್ರೆಯಲ್ಲಿ ನವೆಂಬರ್‌ 30ರಂದು ವರ್ಷಾ ಎಂಬುವವರಿಗೆ ಅವಧಿಪೂರ್ವ ಅವಳಿ ಮಕ್ಕಳು ಜನಿಸಿದ್ದರು. ಎರಡೂ ಮೃತಪಟ್ಟಿವೆ ಎಂದು ಹೇಳಿದ್ದ ಆಸ್ಪತ್ರೆ ಸಿಬ್ಬಂದಿ, ಆ ದೇಹಗಳನ್ನು ಪಾಲಿಥೀನ್‌ ಚೀಲದಲ್ಲಿ ಹಾಕಿ ಕುಟುಂಬದವರಿಗೆ ಹಸ್ತಾಂತರಿಸಿದ್ದರು. ಅವರು ಶಿಶುಗಳ ಅಂತ್ಯಸಂಸ್ಕಾರಕ್ಕೆ ಅಣಿಯಾಗುತ್ತಿದ್ದಂತೆಯೇ,  ಒಂದು ಮಗು ಉಸಿರಾಡುತ್ತಿದ್ದುದು ಗಮನಕ್ಕೆ ಬಂದಿತ್ತು. ನಂತರ, ಮತ್ತೊಂದು ನರ್ಸಿಂಗ್‌ ಹೋಮ್‌ಗೆ ಮಗುವನ್ನು ದಾಖಲಿಸಿದ್ದ ಪೋಷಕರು, ಆಸ್ಪತ್ರೆಯ ನಿರ್ಲಕ್ಷ್ಯ ಖಂಡಿಸಿ ಸಂಬಂಧಿಕರ ಜೊತೆಗೂಡಿ ಪ್ರತಿಭಟನೆ ನಡೆಸಿದ್ದರು.

ಪ್ರಕರಣದ ತನಿಖೆಗಾಗಿ ದೆಹಲಿ ಸರ್ಕಾರ ರಚಿಸಿದ್ದ ಸಮಿತಿಯು, ನವಜಾತ ಶಿಶುಗಳ ಆರೈಕೆ ವಿಷಯದಲ್ಲಿ ಮ್ಯಾಕ್ಸ್‌ ಆಸ್ಪತ್ರೆ ನಿಗದಿತ ಮಾನದಂಡಗಳನ್ನು ಪಾಲಿಸುತ್ತಿಲ್ಲ ಎಂದು ಹೇಳಿದೆ.

ವೈದ್ಯಕೀಯ ನಿರ್ಲಕ್ಷ್ಯ ಸಾಬೀತಾದರೆ ಆಸ್ಪತ್ರೆಯ ಪರವಾನಗಿ ರದ್ದುಗೊಳಿಸುವುದಾಗಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಈ ಮೊದಲು ಹೇಳಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ನಡೆಯದ ಸಂಸತ್‌ ಕಲಾಪ ಚರ್ಚೆಯಾಗದ ‘ಅವಿಶ್ವಾಸ’

ನವದೆಹಲಿ
ನಡೆಯದ ಸಂಸತ್‌ ಕಲಾಪ ಚರ್ಚೆಯಾಗದ ‘ಅವಿಶ್ವಾಸ’

20 Mar, 2018
ಮನೆಗೊಬ್ಬರು ಯೋಗಪಟು ಯೋಜನೆ

ಜೂನ್‌ 21ರ ಯೋಗ ದಿನಕ್ಕೂ ಮೊದಲು ಜನಜಾಗೃತಿ ಅಭಿಯಾನ
ಮನೆಗೊಬ್ಬರು ಯೋಗಪಟು ಯೋಜನೆ

20 Mar, 2018
ಯಥಾಸ್ಥಿತಿ ಮನವಿ ತಳ್ಳಿ ಹಾಕಿದ ‘ಸುಪ್ರೀಂ’

ಗೆಜೆಟೆಡ್‌ ಪ್ರೊಬೆಷನರಿ ಹುದ್ದೆ ನೇಮಕ
ಯಥಾಸ್ಥಿತಿ ಮನವಿ ತಳ್ಳಿ ಹಾಕಿದ ‘ಸುಪ್ರೀಂ’

20 Mar, 2018
ಕ್ಷಮೆ ಕೇಳಿದ ಕೇಜ್ರಿವಾಲ್, ಸಿಸೋಡಿಯಾ

ನವದೆಹಲಿ
ಕ್ಷಮೆ ಕೇಳಿದ ಕೇಜ್ರಿವಾಲ್, ಸಿಸೋಡಿಯಾ

20 Mar, 2018

ಮುಂಬೈ
ಓಲಾ, ಉಬರ್ ಮುಷ್ಕರ: ಪರದಾಟ

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಓಲಾ ಹಾಗೂ ಉಬರ್‌ ಚಾಲಕರು ಸೋಮವಾರದಿಂದ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ವಾಣಿಜ್ಯ ನಗರಿ ಮುಂಬೈನಲ್ಲಿ ಲಕ್ಷಾಂತರ ಪ್ರಯಾಣಿಕರು ಪರದಾಡಬೇಕಾಯಿತು. ...

20 Mar, 2018