ಹಿಂದೂ ಸಂಘಟನೆಯಿಂದ ಹನುಮಾನ್‌ ಚಾಲೀಸಾ ಪಠಣ; ಎಸ್‌ಡಿಪಿಐನಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ

ಮಸೀದಿ ಧ್ವಂಸ: ಕರಾಳ, ಶೌರ್ಯ ದಿನಾಚರಣೆ

ಯೋಧ್ಯೆಯಲ್ಲಿ ಬಾಬರಿ ಮಸೀದಿ ಪುನರ್‌ ನಿರ್ಮಾಣ ಮಾಡಬೇಕು, ಮಸೀದಿ ಧ್ವಂಸ ಮಾಡಿದವರನ್ನು ಜೈಲಿಗಟ್ಟಬೇಕು ಎಂದು ಘೋಷಣೆ ಕೂಗಿದರು.

ವಿಶ್ವ ಹಿಂದೂ ವ್ಯಾಪಾರಿ ಪರಿಷತ್‌ನ ಪದಾಧಿಕಾರಿಗಳು ಹುಬ್ಬಳ್ಳಿಯ ಸಹಸ್ರಾರ್ಜುನ ವೃತ್ತದಲ್ಲಿ ‘ಶೌರ್ಯ ದಿನ’ ಆಚರಿಸಿದರು

ಹುಬ್ಬಳ್ಳಿ: ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಖಂಡಿಸಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ) ಕಾರ್ಯಕರ್ತರು ಬುಧವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ಕರಾಳ ದಿನ ಆಚರಿಸಿದರು.

ಕಪ್ಪು ಬಟ್ಟೆ ಧರಿಸಿದ್ದ ಎಸ್‌ಡಿಪಿಐನ ಕೆಲ ಕಾರ್ಯಕರ್ತರು, ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಪುನರ್‌ ನಿರ್ಮಾಣ ಮಾಡಬೇಕು, ಮಸೀದಿ ಧ್ವಂಸ ಮಾಡಿದವರನ್ನು ಜೈಲಿಗಟ್ಟಬೇಕು ಎಂದು ಘೋಷಣೆ ಕೂಗಿದರು.
ಎಸ್‌ಡಿಪಿಐನ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಷಾದ್‌ ಅಹ್ಮದ್‌ ಅತ್ತಾರ, ‘ಪ್ರಕರಣದ ಪ್ರಮುಖ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ದೇಶದಲ್ಲಿ ಜಾತ್ಯತೀತತೆ ಮರುಸ್ಥಾಪನೆ ಸಾಧ್ಯವಿಲ್ಲ. ಬಾಬರಿ ಮಸೀದಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿರಂತರವಾಗಿರುತ್ತದೆ’ ಎಂದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್‌ ರಫೀಕ್‌ ಲಷ್ಕರ್‌, ಉಪಾಧ್ಯಕ್ಷ ಅಬ್ದುಲ್‌ ಬೆಂಗಾಲಿ, ಅಬ್ದುಲ್ಲಾ ಕುಮಳೂರ, ಇರ್ಷಾದ್‌ ಅಹ್ಮದ್‌ ರಿತ್ತಿ ಪಾಲ್ಗೊಂಡಿದ್ದರು.
ಶೌರ್ಯ ದಿನ: ಬಾಬರಿ ಮಸೀದಿ ಧ್ವಂಸದ 25ನೇ ವರ್ಷಾಚರಣೆ ಅಂಗವಾಗಿ ವಿಶ್ವ ಹಿಂದೂ ವ್ಯಾಪಾರಿ ಪರಿಷತ್‌ ವತಿಯಿಂದ ಬುಧವಾರ ಸಂಜೆ ‘ಶೌರ್ಯ ದಿನ’ ಆಚರಿಸಲಾಯಿತು.

ಇಲ್ಲಿನ ಸಹಸ್ರಾರ್ಜುನ ವೃತ್ತದಲ್ಲಿ ಹಣತೆ ಬೆಳಗಿ, ಹನುಮಾನ್‌ ಚಾಲೀಸ್‌ ಪಠಣ ಮಾಡುವ ಮೂಲಕ ಶ್ರೀರಾಮನ ಪರ ಘೋಷಣೆ ಕೂಗಿದರು.

‘ಅಯೋಧ್ಯೆಯಲ್ಲಿ ಮುಂದಿನ ವರ್ಷ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ’ ಎಂದು ವಿಶ್ವ ಹಿಂದೂ ಪರಿಷತ್‌ನ ಉತ್ತರ ಪ್ರಾಂತ ಕಾರ್ಯದರ್ಶಿ ರಮೇಶ ಕುಲಕರ್ಣಿ ಹೇಳಿದರು.

ವಿಶ್ವ ಹಿಂದೂ ವ್ಯಾಪಾರಿ ಪರಿಷತ್‌ನ ಹುಬ್ಬಳ್ಳಿ ಘಟಕದ ಉಪಾಧ್ಯಕ್ಷ ರಾಮ್‌ ಭದ್ರನ್‌, ಮುಖಂಡರಾದ ಅಶೋಕ ಅಮೀನಗಡ, ಗಣು ಜರತಾರಘರ್‌, ಸುರೇಶ ಜೈನ್‌, ಸಿದ್ದು ಶೆಟ್ಟರ್‌, ಅಮಿತ್‌ ಕಾಂಬಳೆ, ಮೋಹನ ಬಿಲಾನ್‌, ಅಂಬಸಾ ಕಾಟವೆ, ಗಜು ಪವಾರ್‌, ಅಭಯ ಕುಲಕರ್ಣಿ ಪಾಲ್ಗೊಂಡಿದ್ದರು.

 

Comments
ಈ ವಿಭಾಗದಿಂದ ಇನ್ನಷ್ಟು

ಧಾರವಾಡ
ಬಿಆರ್‌ಟಿಎಸ್‌ ಕಾಮಗಾರಿ ವಿಳಂಬ ವಿರೋಧಿಸಿ ಜೆಡಿಎಸ್‌ ಧರಣಿ

‘ಹುಬ್ಬಳ್ಳಿ–ಧಾರವಾಡ ಮಧ್ಯೆ ಅನವಶ್ಯಕವಾಗಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಒಂದು ನಿಲ್ದಾಣಕ್ಕೆ ಅಂದಾಜು ₹1.15 ಕೋಟಿ ಖರ್ಚು ಮಾಡಲಾಗುತ್ತಿದೆ.

17 Jan, 2018

ಧಾರವಾಡ
ಆಯೋಗಗಳ ಶಿಫಾರಸು ಕಡೆಗಣನೆಗೆ ಬೇಸರ

‘ರಾಜ್ಯದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಉಪ್ಪಾರ ಸಮುದಾಯದ ಜನರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದೆ. ಪಶ್ಚಿಮ ಬಂಗಾಳದಲ್ಲೂ ಪರಿಶಿಷ್ಟ ಜಾತಿಯಲ್ಲಿದೆ. ...

17 Jan, 2018
ಗೋವಾ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ

ಧಾರವಾಡ
ಗೋವಾ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ

16 Jan, 2018

ಹುಬ್ಬಳ್ಳಿ
ಸ್ಮಾರ್ಟ್‌ಸಿಟಿ ವ್ಯಾಪ್ತಿಗೆ ನೃಪತುಂಗಬೆಟ್ಟ: ಶೆಟ್ಟರ್‌ ಪ್ರಸ್ತಾವ

‘ಸ್ಮಾರ್ಟ್‌ಸಿಟಿ ಯೋಜನೆಯಡಿ ತಲಾ ₹ 10 ಕೋಟಿಯಿಂದ ₹ 15 ಕೋಟಿ ಅನುದಾನವನ್ನು ನೀಡಿ ಅಭಿವೃದ್ಧಿ ಪಡಿಸಿದರೆ ಸಾರ್ವಜನಿಕರ ಬಳಕೆಗೆ ಅನುಕೂಲವಾಗಲಿದೆ’

15 Jan, 2018
ಕ್ರಾಂತಿಕುಮಾರ್‌, ವಿಠ್ಠಲ್‌ ಬ್ಯಾಟಿಂಗ್‌ ಜುಗಲ್‌ಬಂದಿ

ಹುಬ್ಬಳ್ಳಿ
ಕ್ರಾಂತಿಕುಮಾರ್‌, ವಿಠ್ಠಲ್‌ ಬ್ಯಾಟಿಂಗ್‌ ಜುಗಲ್‌ಬಂದಿ

15 Jan, 2018