ಮುಧೋಳ: ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕೃಷಿ ಅಭಿಯಾನ

ಕೃಷಿ ಮೇಳಕ್ಕೆ ವ್ಯಾಪಕ ಸ್ಪಂದನೆ

150 ವಿವಿಧ ಮಳಿಗೆಗಳಲ್ಲಿ, ಕೃಷಿ ಉಪಕರಣ, ಯಂತ್ರೋಪಕರಣ, ಟ್ರ್ಯಾಕ್ಟರ್, ಹನಿ ನಿರಾವರಿ, ಪೋಷಕಾಂಶಗಳು, ಶ್ರೀಗಂಧ, ಹೆಬ್ಬೇವು ತಳಿಗಳ ಮಾಹಿತಿ, ಸುಧಾರಿತ ಹೆಚ್ಚಿನ ಇಳುವರಿಯ ಬೀಜಗಳು, ಪುಷ್ಪ ಬೀಜಗಳು, ಕ್ರಿಮಿನಾಶಕಗಳು, ತರೇವಾರಿ ವಸ್ತುಗಳ ಪ್ರದರ್ಶನ ಜೋರಾಗಿತ್ತು.

ಮುಧೋಳದ ರನ್ನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೃಷಿ ಇಲಾಖೆಯ ಕೃಷಿ ಮೇಳದಲ್ಲಿ ಹನಿ ನೀರಾವರಿ ಪ್ರಾತ್ಯಕ್ಷಿಕೆ ನೋಡುತ್ತಿರುವ ಕೃಷಿಕರು

ಮುಧೋಳ: ನಗರದ ರನ್ನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ’ ಕೃಷಿ ಅಭಿಯಾನ ಹಾಗೂ ಕೃಷಿ ಮೇಳ–2017ಕ್ಕೆ ಉತ್ತಮ ಸ್ಪಂದನೆ ದೊರಕಿದೆ.

ಎರಡನೇ ದಿನವಾದ ಗುರುವಾರ ಅಧಿಕ ಸಂಖ್ಯೆಯ ಜನರು ಜಮಾಯಿಸಿದ್ದರು. ಮಹಿಳೆಯರು, ವಿದ್ಯಾರ್ಥಿಗಳು ತಾವು ಕಡಿಮೆ ಇಲ್ಲ ಎಂಬಂತೆ ಭಾಗವಹಿಸಿದ್ದರು.

ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಅಂಗವಾಗಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು, ಕೃಷಿ ಸಂಶೋಧನಾ ಕೇಂದ್ರ ಮುಧೋಳ ಮತ್ತು ಕೃಷಿಕ ಸಮಾಜ ಮುಧೋಳ, ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳು, ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಮೇಳ ಆಯೋಜಿಸಲಾಗಿದೆ.

150 ವಿವಿಧ ಮಳಿಗೆಗಳಲ್ಲಿ, ಕೃಷಿ ಉಪಕರಣ, ಯಂತ್ರೋಪಕರಣ, ಟ್ರ್ಯಾಕ್ಟರ್, ಹನಿ ನಿರಾವರಿ, ಪೋಷಕಾಂಶಗಳು, ಶ್ರೀಗಂಧ, ಹೆಬ್ಬೇವು ತಳಿಗಳ ಮಾಹಿತಿ, ಸುಧಾರಿತ ಹೆಚ್ಚಿನ ಇಳುವರಿಯ ಬೀಜಗಳು, ಪುಷ್ಪ ಬೀಜಗಳು, ಕ್ರಿಮಿನಾಶಕಗಳು, ತರೇವಾರಿ ವಸ್ತುಗಳ ಪ್ರದರ್ಶನ ಜೋರಾಗಿತ್ತು. ಪರಿಸರ ಸ್ನೇಹಿ ಹೊಗೆ ರಹಿತ, ಶಬ್ದ ರಹಿತ ವಿದ್ಯುತ್ ಇ–ರೀಕ್ಷಾ ನೋಡುವುದಕ್ಕೆ ಹಾಗೂ ಅದರಲ್ಲಿ ಸವಾರಿಮಾಡಲು ಮುಗಿಬಿದ್ದಿರು. ಇದು ಆಕರ್ಷಣೆಯ ಕೇಂದ್ರ ಬಿಂದು ಆಗಿತ್ತು

ಸಹಾಯಕ ಕೃಷಿ ನಿರ್ದೇಶಕ ಆರ್.ಜಿ.ನಾಗಣ್ಣವರ ಹಾಗೂ ಸಿಬ್ಬಂದಿ ಸ್ಥಳದಲ್ಲೆ ಇದ್ದು ಕೃಷಿಕರಿಗೆ ಮಾಹಿತಿ ನೀಡುತ್ತಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ತಾಲ್ಲೂಕು ಕಚೇರಿಗೆ ರೈತರ ಮುತ್ತಿಗೆ

ಹುನಗುಂದ
ತಾಲ್ಲೂಕು ಕಚೇರಿಗೆ ರೈತರ ಮುತ್ತಿಗೆ

17 Jan, 2018
ಕನ್ನಡದ ಚೆಕ್‌ ನಿರಾಕರಣೆ: ಆರ್‌ಬಿಐಗೆ ಗ್ರಾಹಕರ ದೂರು!

ಬಾದಾಮಿ
ಕನ್ನಡದ ಚೆಕ್‌ ನಿರಾಕರಣೆ: ಆರ್‌ಬಿಐಗೆ ಗ್ರಾಹಕರ ದೂರು!

17 Jan, 2018

ಕೂಡಲಸಂಗಮ
‘ಪಂಚಾಚಾರ್ಯರು ಲಿಂಗಾಯತರಾಗಲು ಸಾಧ್ಯವಿಲ್ಲ’

ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟಲಿಂಗವನ್ನು ಕೊರಳಲ್ಲಿ ಧರಿಸಿಕೊಂಡು ರುದ್ರಾಭಿ ಷೇಕ, ಹೋಮ, ಯಾಗ, ಯಜ್ಞ ಮಾಡು ವುದು ಧರ್ಮದ್ರೋಹದ ಕೆಲಸ ಎಂದು ಬಸವಾದಿ ಶರಣರು...

17 Jan, 2018
ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ₹ 20 ಕೋಟಿ ದೇಣಿಗೆ

ಕೂಡಲಸಂಗಮ
ಕಳಸಾ ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ₹ 20 ಕೋಟಿ ದೇಣಿಗೆ

17 Jan, 2018
ಬಾದಾಮಿ: ಪಾರಂಪರಿಕ ಕಟ್ಟಡದ ಸಂರಕ್ಷಣೆ

ಬಾದಾಮಿ
ಬಾದಾಮಿ: ಪಾರಂಪರಿಕ ಕಟ್ಟಡದ ಸಂರಕ್ಷಣೆ

16 Jan, 2018