ಸುರಪುರ

‘ಸೂಫಿ, ಶರಣರ ಸಂದೇಶಗಳಲ್ಲಿ ವ್ಯತ್ಯಾಸವಿಲ್ಲ’

‘ಶರಣರು ಮತ್ತು ಸೂಫಿಗಳ ಸಂದೇಶದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲರೂ ಮಾನವ ಕಲ್ಯಾಣವನ್ನೇ ಬಯಸಿದರು. ಜಾತೀಯತೆ ಮತ್ತು ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದರು. ಅವರ ಬದುಕು ನಮಗೆ ಆದರ್ಶ’ ಎಂದು ಸಾಹಿತಿ ನಬಿಲಾಲ ಮಕಾಂದಾರ ಹೇಳಿದರು.

ಸುರಪುರ: ‘ಶರಣರು ಮತ್ತು ಸೂಫಿಗಳ ಸಂದೇಶದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲರೂ ಮಾನವ ಕಲ್ಯಾಣವನ್ನೇ ಬಯಸಿದರು. ಜಾತೀಯತೆ ಮತ್ತು ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದರು. ಅವರ ಬದುಕು ನಮಗೆ ಆದರ್ಶ’ ಎಂದು ಸಾಹಿತಿ ನಬಿಲಾಲ ಮಕಾಂದಾರ ಹೇಳಿದರು.

ರಂಗಂಪೇಟೆಯ ನೀಲಕಂಠೇಶ್ವರ ದೇವಸ್ಥಾನದಲ್ಲಿ ಬುಧವಾರ ಬಸವಪ್ರಿಯ ಲಿಂಗಾಯತ ಸಮಿತಿ ಹಮ್ಮಿಕೊಂಡಿದ್ದ ಅಲ್ಲಮಾದಿ ಶರಣರ ಅರಿವು ಅನುಭಾವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಂತಪ್ಪ ಬೂದಿಹಾಳ ಮಾತನಾಡಿ, ‘ಈ ಹಿಂದೆ ಸಾಹಿತ್ಯ ಕೇವಲ ಕೆಲವರ ಸ್ವತ್ತಾಗಿತ್ತು. ಸಾಮಾನ್ಯರಿಗೆ ತಿಳಿಯುತ್ತಿರಲಿಲ್ಲ. ಬಸವಾದಿ ಶರಣರ ವಚನಗಳಿಂದ ಜನರಿಗೆ ಸಾಹಿತ್ಯದ ಅರಿವು ಮೂಡಿತು’ ಎಂದರು.

ಮಹಾದೇವಪ್ಪ ಗಾಳೆನೋರ ವಚನ ಗಾಯನ ಮಾಡಿದರು. ಮಲ್ಲಿಕಾರ್ಜುನ ಸತ್ಯಂಪೇಟೆ, ಬಾಲಯ್ಯ ಶರಣ ಮಂಗಳೂರ, ಮುನ್ನಸಾಬ ಅಮ್ಮಾಪುರ, ಜಟ್ಟೆಪ್ಪ ಕಟ್ಟಿಮನಿ,
ಪ್ರಕಾಶ ಅಲಬನೂರ, ಮುರಳಿಧರ ಗೌಡ, ನಿಂಗಪ್ಪ, ನಿಂಗಣ್ಣ ಬುಡ್ಡ, ರಾಮುಲು ವಳಕೇರಾ, ಶಿವಲೀಲಾ ಪುರತಗೇರಿ, ಸಿದ್ದಮ್ಮ ಚಿಂತಿ, ಸೂಗಮ್ಮ, ಪದ್ಮಾ ನಾಲವಾರ ಇದ್ದರು.

ಚನ್ನ ಮಲ್ಲಿಕಾರ್ಜುನ ಗುಂಡಾನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಣ್ಣ ಗುಳಗಿ ನಿರೂಪಿಸಿದರು. ನಾಗಭೂಷಣ ಯಾಳಗಿ ಸ್ವಾಗತಿಸಿದರು. ವಸಂತ ನಾಲವಾರ ವಂದಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಯಾದಗಿರಿಯಲ್ಲಿ ಭದ್ರತಾ ಸಿಬ್ಬಂದಿ ಪಥ ಸಂಚಲನ

ಯಾದಗಿರಿ
ಯಾದಗಿರಿಯಲ್ಲಿ ಭದ್ರತಾ ಸಿಬ್ಬಂದಿ ಪಥ ಸಂಚಲನ

19 Apr, 2018
ಪಿಡ್ಡನಾಯಕ ಶಿವಸೇನೆ ಅಭ್ಯರ್ಥಿ, ಎಂಇಪಿಯಿಂದ ರಾಮಪ್ಪನಾಯಕ

ಸಂಘ ಪರಿವಾರ
ಪಿಡ್ಡನಾಯಕ ಶಿವಸೇನೆ ಅಭ್ಯರ್ಥಿ, ಎಂಇಪಿಯಿಂದ ರಾಮಪ್ಪನಾಯಕ

19 Apr, 2018
ಮೆರವಣಿಗೆಗೆ ಅನುಮತಿ ಕಡ್ಡಾಯ

ಸುರಪುರ
ಮೆರವಣಿಗೆಗೆ ಅನುಮತಿ ಕಡ್ಡಾಯ

18 Apr, 2018

ಯಾದಗಿರಿ
ಬಿಜೆಪಿಯಲ್ಲಿ ಬಂಡಾಯ ಬೂದಿಮುಚ್ಚಿದ ಕೆಂಡ

ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಜಿಲ್ಲೆಯ ಮಟ್ಟಿಗೆ ನಾಲ್ಕು ಮತಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ಆದರೆ, ಉಳಿದ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಹೆಚ್ಚು ಅಸಮಾಧಾನಗೊಂಡ ವ್ಯಕ್ತಿಗಳು...

18 Apr, 2018

ಯಾದಗಿರಿ
‘ಅಂಕ ಗಳಿಕೆ ವಿದ್ಯಾರ್ಥಿಗಳ ಮುಖ್ಯ ಗುರಿಯಲ್ಲ’

‘ವಿದ್ಯಾರ್ಥಿಗಳು ನಿಷ್ಠೆಯಿಂದ ಅಧ್ಯಯನ ಮಾಡುವುದರ ಜತೆಗೆ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಬಿ.ಎಸ್‌.ಮಂಜುನಾಥ ಸ್ವಾಮಿ ಸಲಹೆ ನೀಡಿದರು.

18 Apr, 2018