ಲಿಂಗಸುಗೂರು

ಅಕ್ರಮ ಮರಳು ತಡೆಗೆ ಕರವೇ ಒತ್ತಾಯ

ಜಿಲ್ಲೆಯಾದ್ಯಂತ ಹೊಸ ಮರಳು ನೀತಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಗುತ್ತಿಗೆದಾರರು, ವಿವಿಧ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಅಕ್ರಮ ಮರಳು ಮಾಫಿಯಾ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಅಕ್ರಮ ಮರಳು ತಡೆಗೆ ಕರವೇ ಒತ್ತಾಯ

ಲಿಂಗಸುಗೂರು: ಜಿಲ್ಲೆಯಾದ್ಯಂತ ಹೊಸ ಮರಳು ನೀತಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಗುತ್ತಿಗೆದಾರರು, ವಿವಿಧ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಅಕ್ರಮ ಮರಳು ಮಾಫಿಯಾ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ದೇವದುರ್ಗ ಮರಳು ಸಂಗ್ರಹಣಾ ಕೇಂದ್ರದಿಂದ ಜಿಲ್ಲೆಯ ಜನರಿಗೆ ಅವಶ್ಯಕತೆಗೆ ತಕ್ಕಷ್ಟು ಮರಳು ಸಿಗುತ್ತಿಲ್ಲ. ಪ್ರತಿನಿಧಿಗಳ ಹೆಸರು ಹೇಳಿಕೊಂಡು ರಾಜಸ್ವಧನ ಪಾವತಿಸದೆ ಹುಬ್ಬಳ್ಳಿ, ಹೈದರಾಬಾದ್‌, ಬೆಳಗಾವಿ, ಬಳ್ಳಾರಿ ಇತರೆ ನಗರ ಪ್ರದೇಶಕ್ಕೆ ಅಕ್ರಮ ಮರಳು ಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಅಕ್ರಮ ಮರಳು ಸಾಗಣೆ ತಡೆಯುವಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದ ಸಮಿತಿಗಳು ಸಂಪೂರ್ಣ ವಿಫಲವಾಗಿವೆ. ಜಿಲ್ಲೆಯಿಂದ ಹೊರ ಜಿಲ್ಲೆಗೆ ಸಾಗಣೆ ಆಗುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಜಿಲ್ಲಾ ಮತ್ತು ತಾಲ್ಲೂಕು ಗಡಿ ಭಾಗದಲ್ಲಿ ತಪಾಸಣೆ ಕೇಂದ್ರಗಳನ್ನು ತೆರೆಯಬೇಕು. ಈ ಮುಂಚಿನ ಹೊಸ ಮರಳು ನೀತಿಯನ್ನು ಕಡ್ಡಾಯ ಪಾಲನೆಗೆ ಆದೇಶಿಸಬೇಕು, ತಾಲ್ಲೂಕು ಕೇಂದ್ರಗಳಲ್ಲಿ ಮರಳು ಬ್ಲಾಕ್‌ ಗುರುತಿಸಬೇಕು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪರವಾನಿಗೆ ನೀಡುವಲ್ಲಿ ನಡೆಸುತ್ತಿರುವ ಅಕ್ರಮದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಕರವೇ ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷ, ಮುಖಂಡರಾದ ಶಿವರಾಜ ನಾಯಕ, ಅಮರೇಶ ನಾಯಕ, ಅಜೀಜಪಾಷ, ರವಿಕುಮಾರ ಬರಗುಡಿ, ಎಂ.ಜಿಲಾನಿ, ಚಂದ್ರು ನಾಯಕ, ಮೊಹ್ಮದ ಅರೀಫ್‌, ಹನುಮಂತ ನಾಯಕ, ಮೌನೇಶ ಭೋವಿ, ಸಲ್ಮಾನ್‌ಖಾನ, ಮಂಜುನಾಥ ರಾಠೋಡ, ಮಾರುತಿ ಮುಂಡೆವಾಡಿ, ಮಂಜುನಾಥ, ಯಮನೂರ, ಆದಿಲ್‌, ಪ್ರಭು ಕಾಳಾಪುರ, ಅಲ್ಲಾವುದ್ದೀನ್‌ಬಾಬ, ಯಾಸೀನ್‌ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ

ಸಿರವಾರ
ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ

20 Mar, 2018

ರಾಯಚೂರು
ಶ್ರೀಶೈಲ ಭಕ್ತರಿಗೆ ಅನ್ನದಾಸೋಹ, ವೈದ್ಯಕೀಯ ಸೇವೆ

ಯುಗಾದಿಯ ಅಂಗವಾಗಿ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿ ದೇವರ ದರ್ಶನ ಪಡೆದು ವಾಪಸ್‌ ಮರಳುತ್ತಿದ್ದ ಭಕ್ತರಿಗಾಗಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಉಚಿತ ವೈದ್ಯಕೀಯ ಸೇವೆ ಹಾಗೂ...

20 Mar, 2018

ಮಾನ್ವಿ
ರೈತ ವಿರೋಧಿ ಸರ್ಕಾರ ತೊಲಗಿಸಿ: ರಾಜಾ ವೆಂಕಟಪ್ಪ

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ರಾಜ್ಯದ ಮತದಾರರು ಮತದಾರರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು’ ಎಂದು ಜೆಡಿಎಸ್‌ ಪಕ್ಷದ...

20 Mar, 2018
ದ್ವೇಷ ಬಿಡಿ ಮುಖ್ಯವಾಹಿನಿಗೆ ಬನ್ನಿ: ಶಾಸಕ

ಮಸ್ಕಿ
ದ್ವೇಷ ಬಿಡಿ ಮುಖ್ಯವಾಹಿನಿಗೆ ಬನ್ನಿ: ಶಾಸಕ

19 Mar, 2018
ಮಠಗಳ ಸಾಮಾಜಿಕ ಚಿಂತನೆ ಬಡವರಿಗೆ ಬೆಳಕು

ಸಿರವಾರ
ಮಠಗಳ ಸಾಮಾಜಿಕ ಚಿಂತನೆ ಬಡವರಿಗೆ ಬೆಳಕು

16 Mar, 2018