ಕೋಲಾರ ತಾಲ್ಲೂಕಿನ ಸುಗಟೂರು ರಸ್ತೆ ಕಾಮಗಾರಿಯಲ್ಲಿ ತಾರತಮ್ಯ

ಅಧಿಕಾರಿಗಳಿಗೆ ಆರೋಗ್ಯ ಸಚಿವ ತೀವ್ರ ತರಾಟೆ

ಇದರಿಂದ ಆಕ್ರೋಶಗೊಂಡ ಸಚಿವರು, ‘ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬೇಡಿ. ತೀರ್ಮಾನ ತೆಗೆದುಕೊಳ್ಳಲು ನೀವು ಯಾರು. ಜನರನ್ನು ದಾರಿ ತಪ್ಪಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಅಧಿಕ ಪ್ರಸಂಗತನ ಬಿಟ್ಟು ಹೇಳಿದಷ್ಟು ಮಾಡಿ. ಇಲ್ಲದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಜಾಗ ಖಾಲಿ ಮಾಡಿ’ ಎಂದು ಹರಿಹಾಯ್ದರು.

ಕೋಲಾರ: ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳುವಲ್ಲಿ ತಾರತಮ್ಯವಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೆಂಡಾಮಂಡಲರಾದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಅವರು  ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಾರ್ವಜನಿಕವಾಗಿ ‘ರಾಸ್ಕಲ್ಸ್‌, ಯೂಸ್‌ಲೆಸ್‌ ಫೆಲೋಸ್‌’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಬುಧವಾರ ಗ್ರಾಮಕ್ಕೆ ಬಂದ ಸಚಿವರ ಬಳಿ ದೂರು ಹೇಳಿಕೊಂಡ ಗ್ರಾಮಸ್ಥರು, ‘ಪಿಡಬ್ಲ್ಯೂಡಿ ಅಧಿಕಾರಿಗಳು ವಿಶೇಷ ಘಟಕ ಯೋಜನೆಯಡಿ ದಲಿತ ಕಾಲೊನಿಗಳಲ್ಲಿ ಮಾತ್ರ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಿದ್ದಾರೆ. ದಲಿತ ಕಾಲೊನಿಗಳು ಒಳಗೊಂಡಂತೆ ಇಡೀ ಗ್ರಾಮಕ್ಕೆ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದರೂ ಕಿರಿಯ ಎಂಜಿನಿಯರ್‌ ವೆಂಕಟೇಶ್‌ ಒಪ್ಪುತ್ತಿಲ್ಲ’ ಎಂದರು.

ಇದರಿಂದ ಆಕ್ರೋಶಗೊಂಡ ಸಚಿವರು, ‘ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬೇಡಿ. ತೀರ್ಮಾನ ತೆಗೆದುಕೊಳ್ಳಲು ನೀವು ಯಾರು. ಜನರನ್ನು ದಾರಿ ತಪ್ಪಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಅಧಿಕ ಪ್ರಸಂಗತನ ಬಿಟ್ಟು ಹೇಳಿದಷ್ಟು ಮಾಡಿ. ಇಲ್ಲದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಜಾಗ ಖಾಲಿ ಮಾಡಿ’ ಎಂದು ಹರಿಹಾಯ್ದರು.

‘ಜೆ.ಇ, ಗುಮಾಸ್ತರು ಈ ರಾಜ್ಯ ನಡೆಸುತ್ತಿದ್ದಾರೆ. ಅಧಿಕಾರಿಗಳದೇ ರಾಜ್ಯಭಾರವಾಗಿದೆ. ಸಿಎಂ ಸಿದ್ದ ರಾಮಯ್ಯ ಮತ್ತು ನಾನು ಅಧಿಕಾರಿಗಳ ಮನೆಗಳಲ್ಲಿ ಕಸ ಗುಡಿಸುತ್ತೇವೆ. ಇಡೀ ಗ್ರಾಮಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಬೇಕೆಂದು ಸಾವಿರ ಸಲ ಹೇಳಿದ್ದೇನೆ. ಆದರೂ ತಲೆಹರಟೆ ಮಾಡುತ್ತೀರಿ. ನೀವು ಹೇಳಿದ ಮಾತು ಕೇಳಲು ನಾನು ಜನಪ್ರತಿನಿಧಿಯಾಗಿಲ್ಲ’ ಎಂದು ರೇಗಿ ಅಧಿಕಾರಿಗಳ ಮೇಲೆ ನೀರಿನ ಬಾಟಲಿ ಎಸೆಯಲು ಮುಂದಾದರು. ಆಗ ಕಾರ್ಯಕರ್ತರು ಸಚಿವರನ್ನು ಸಮಾಧಾನಪಡಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಬಂಗಾರಪೇಟೆ
ಧೂಪಕ್ಕೆ ಎದ್ದ ಹೆಜ್ಜೇನು: ಐವರಿಗೆ ಗಂಭೀರ ಗಾಯ

ತಿಮ್ಮಾಪುರ ಬಳಿ ಹೆಜ್ಜೇನು ದಾಳಿಗೆ ಸಿಲುಕಿ, 5 ಮಂದಿ ಗಂಭೀರ ಗಾಯಗೊಂಡಿದ್ದು, ಮಕ್ಕಳೂ ಸೇರಿದಂತೆ 30ಕ್ಕೂ ಹೆಚ್ಚು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

21 Mar, 2018
ಅಧಿಕಾರಿಗಳ ಔಚಿತ್ಯ ಪ್ರಶ್ನಿಸಿದ ಹಿರಿಯ ಅಧಿಕಾರಿ

ಕೆಜಿಎಫ್‌
ಅಧಿಕಾರಿಗಳ ಔಚಿತ್ಯ ಪ್ರಶ್ನಿಸಿದ ಹಿರಿಯ ಅಧಿಕಾರಿ

21 Mar, 2018

ಕೋಲಾರ
ಮಂಕುತಿಮ್ಮನ ಕಗ್ಗ ಆಧುನಿಕ ಭಗವದ್ಗೀತೆ

‘ಕವಿ ಡಿ.ವಿ.ಗುಂಡಪ್ಪನವರ ರಚನೆಯ ಮಂಕು ತಿಮ್ಮನ ಕಗ್ಗವು ಆಧುನಿಕ ಭಗವದ್ಗೀತೆ’ ಎಂದು ಸಾಹಿತಿ ವಿಜಯ ರಾಘವನ್ ಬಣ್ಣಿಸಿದರು.

21 Mar, 2018
ಠಾಣೆ ಎದುರು ಮೊದಲ ಪತ್ನಿಯ ಧರಣಿ

ಕೋಲಾರ
ಠಾಣೆ ಎದುರು ಮೊದಲ ಪತ್ನಿಯ ಧರಣಿ

20 Mar, 2018

ಶ್ರೀನಿವಾಸಪುರ
ಮದ್ಯ ಮಾರಾಟ ಕೇಂದ್ರ ಬೇಡ

ಹೊಸದಾಗಿ ಎಂಎಸ್‌ಐಎಲ್‌ ಮದ್ಯ ಮಾರಾಟ ಕೇಂದ್ರಗಳನ್ನು ತೆರೆಯುವುದನ್ನು ವಿರೋಧಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಶೀಲ್ದಾರ್ ವೈ.ರವಿ...

20 Mar, 2018