‘ಪರಿಹಾರ ಮೊತ್ತ ಪುನರುಜ್ಜೀವನಕ್ಕೆ ಬಳಸಿ’

ಯಮುನಾ ತೀರದ ಪರಿಸರ ಹಾನಿಗೆ ಶ್ರೀಶ್ರೀ ರವಿಶಂಕರ ಗುರೂಜಿ ಆರ್ಟ್‌ ಆಫ್‌ ಲಿವಿಂಗ್ ಹೊಣೆ –ಎನ್‌ಜಿಟಿ

ಯಮುನಾ ತೀರದಲ್ಲಿ ವಿಶ್ವ ಸಂಸ್ಕೃತಿ ಉತ್ಸವ ಆಯೋಜನೆಯಿಂದ ಅಲ್ಲಿನ ಪರಿಸರಕ್ಕೆ ಹೆಚ್ಚಿನ ಹಾನಿಯಾಗಿದೆ. ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ ಪರಿಸರ ಹಾನಿ ಪರಿಹಾರವನ್ನು ಪಾವತಿ ಮಾಡಿದ ಬಳಿಕ, ಆ ಹಣವನ್ನು ನದಿ ತಿರದ ಪರಿಸರ ಪುನರುಜ್ಜೀವನ ಯೋಜನೆಗಳಿಗೆ ಬಳಸುವಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಎನ್‌ಜಿಟಿ ಸೂಚಿಸಿದೆ.  

ಯಮುನಾ ತೀರದ ಪರಿಸರ ಹಾನಿಗೆ ಶ್ರೀಶ್ರೀ ರವಿಶಂಕರ ಗುರೂಜಿ ಆರ್ಟ್‌ ಆಫ್‌ ಲಿವಿಂಗ್ ಹೊಣೆ –ಎನ್‌ಜಿಟಿ

ನವದೆಹಲಿ: ವಿಶ್ವ ಸಾಂಸ್ಕೃತಿಕ ಉತ್ಸವ ಆಯೋಜಿಸಿ ಯಮುನಾ ನದಿ ದಂಡೆಯ ಪರಿಸರಕ್ಕೆ ಹಾನಿಯಾಗಿರುವುದಕ್ಕೆ ಶ್ರೀಶ್ರೀ ರವಿಶಂಕರ್‌ ಗುರೂಜಿ ಅವರ ಆರ್ಟ್‌ ಆಫ್ ಲಿವಿಂಗ್ ಸಂಸ್ಥೆ ಹೊಣೆ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ) ಗುರುವಾರ ಹೇಳಿದೆ.

ದೆಹಲಿಯ ಹೊರವಲಯದಲ್ಲಿರುವ ಯಮುನಾ ನದಿ ದಂಡೆಯ ಮೇಲೆ ಆರ್ಟ್‌ ಆಫ್‌ ಲಿವಿಂಗ್‌ 2016ರ ಮಾರ್ಚ್‌ನಲ್ಲಿ ಸಾಂಸ್ಕೃತಿಕ ಉತ್ಸವ ಆಯೋಜಿಸಿತ್ತು.

ಎನ್‌ಜಿಟಿಯ ಅಧ್ಯಕ್ಷ ಸ್ವತಂತ್ರ ಕುಮಾರ್‌ ಅವರ ನೇತೃತ್ವದ ಪೀಠ, ಯಮುನಾ ತೀರದಲ್ಲಿ ವಿಶ್ವ ಸಂಸ್ಕೃತಿ ಉತ್ಸವ ಆಯೋಜನೆಯಿಂದ ಅಲ್ಲಿನ ಪರಿಸರಕ್ಕೆ ಹೆಚ್ಚಿನ ಹಾನಿಯಾಗಿದೆ. ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ ದಂಡ ಪಾವತಿ ಮಾಡಿದ ಬಳಿಕ, ಆ ಹಣವನ್ನು ನದಿ ತಿರದ ಪರಿಸರ ಪುನರುಜ್ಜೀವನ ಯೋಜನೆಗಳಿಗೆ ಬಳಸುವಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ(ಡಿಡಿಎ) ಸೂಚಿಸಿದೆ.

ಪರಿಸರ ಹಾನಿ ಮಧ್ಯಂತರ ಪರಿಹಾರವಾಗಿ ಆರ್ಟ್‌ ಆಫ್‌ ಲಿವಿಂಗ್‌ಗೆ ಈಗ ಯಾವುದೆ ಹೆಚ್ಚುವರಿ ದಂಡ ವಿಧಿಸುವುದಿಲ್ಲ. ಎನ್‌ಜಿಟಿ ಈ ಹಿಂದೆ ವಿಧಿಸಿದ್ದ ₹ 5 ಕೋಟಿ ಪರಿಸರ ಹಾನಿ ಪರಿಹಾರವನ್ನು ನದಿ ತೀರದ ಪರಿಸರ ಪುನರುಜ್ಜೀವನಗೊಳಿಸಲು ಬಳಸಿ ಎಂದು ಪೀಠ ಹೇಳಿದೆ.

‘ತಜ್ಞ ಸಮಿತಿಯಿಂದ ಸಲ್ಲಿಸಿದ ವರದಿಯ ಪ್ರಕಾರ, ಯಮುನಾ ತೀರಕ್ಕೆ ಹಾನಿಯಾಗುವ ಕುರಿತು ನಾವು ಆರ್ಟ್‌ ಆಫ್‌ ಲಿವಿಂಗ್ ಸಂಸ್ಥೆಯನ್ನು ಜವಾಬ್ದಾರರನ್ನಾಸುತ್ತೇವೆ’ ಎಂದು ಪೀಠ ಹೇಳಿದೆ.

ನ್ಯಾಯಮೂರ್ತಿ ಜಾವದ್ ರಹೀಮ್ ಮತ್ತು ತಜ್ಞ ಸದಸ್ಯರಾದ ಬಿ.ಎಸ್. ಸಜ್ವಾನ್ ಅವರನ್ನೊಳಗೊಂಡ ಪೀಠ, ನದಿ ತೀರದಲ್ಲಿ ಉಂಟಾದ ಹಾನಿಯನ್ನು ನಿರ್ಣಯಿಸಲು ಮತ್ತು ತಜ್ಞರ ಸಮಿತಿಯ ಶಿಫಾರಸಿನ ಅನುಸಾರವಾಗಿ ಪುನಃ ವೆಚ್ಚವನ್ನು ಲೆಕ್ಕಹಾಕಲು ಡಿಡಿಎಗೆ ನಿರ್ದೇಶನ ನೀಡಿದೆ.

ವಿಶ್ವ ಸಾಂಸ್ಕೃತಿಕ ಉತ್ಸವದಿಂದಾಗಿ ಯಮುನಾ ನದಿ ತೀರ ಹಾನಿಗೊಳಗಾಗಿದೆ ಎಂದು ಎನ್‌ಜಿಟಿ ರಚಿಸಿದ್ದ ತಜ್ಞರ ಸಮಿತಿ ವರದಿ ಸಲ್ಲಿಸಿದ್ದರಿಂದ ನದಿ ತೀರದ ಪುನರುಜ್ಜೀವನಕ್ಕಾಗಿ ಪರಿಸರ ಪರಿಹಾರದ ರೂಪದಲ್ಲಿ ₹ 42 ಕೋಟಿ ದಂಡ ಪಾವತಿಸಬೇಕು ಎಂದು ಎನ್‌ಜಿಟಿ ಈ ಹಿಂದೆ ಆದೇಶಿಸಿತ್ತು.

Comments
ಈ ವಿಭಾಗದಿಂದ ಇನ್ನಷ್ಟು
ಅತ್ಯಾಚಾರ ಪ್ರಕರಣ: ಖುಲಾಸೆ ತೀರ್ಪು ಎತ್ತಿಹಿಡಿದ ‘ಸುಪ್ರೀಂ’

ದೆಹಲಿ ಹೈಕೋರ್ಟ್‌ ತೀರ್ಪು
ಅತ್ಯಾಚಾರ ಪ್ರಕರಣ: ಖುಲಾಸೆ ತೀರ್ಪು ಎತ್ತಿಹಿಡಿದ ‘ಸುಪ್ರೀಂ’

20 Jan, 2018

ವಿಶ್ವ ಪರ್ಯಟನೆ
‘ಕೇಪ್‌ ಆಫ್‌ ಹಾರ್ನ್‌’ ಭೂಶಿರ ದಾಟಿದ ತಾರಿಣಿ ನೌಕೆ

ವಿಶ್ವ ಪರ್ಯಟನೆ ಕೈಗೊಂಡಿರುವ ಭಾರತೀಯ ಮಹಿಳಾ ನೌಕಾಪಡೆಯು ದಕ್ಷಿಣ ಅಮೆರಿಕದಲ್ಲಿರುವ ಜಗತ್ತಿನ ಅತ್ಯಂತ ದುರ್ಗಮ ಪ್ರದೇಶ ‘ಕೇಪ್‌ ಆಫ್‌ ಹಾರ್ನ್‌’ ಭೂಶಿರವನ್ನು ಶುಕ್ರವಾರ ದಾಟಿದೆ. ...

20 Jan, 2018
ಲೈಂಗಿಕ ದೌರ್ಜನ್ಯ: ‘ಬಟ್ಟೆ ಸಂಗ್ರಹ’ ಪ್ರತಿರೋಧ!

ಅಭಿಯಾನ
ಲೈಂಗಿಕ ದೌರ್ಜನ್ಯ: ‘ಬಟ್ಟೆ ಸಂಗ್ರಹ’ ಪ್ರತಿರೋಧ!

20 Jan, 2018

ಎ.ಜಿ
ಆಸ್ಟ್ರೇಲಿಯಾ ಗುಂಪಿನಲ್ಲಿ ಭಾರತಕ್ಕೆ ಸದಸ್ಯತ್ವ

ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಪ್ರಸರಣ ತಡೆಗಾಗಿ ರಚನೆಯಾಗಿರುವ ‘ಆಸ್ಟ್ರೇಲಿಯಾ ಗ್ರೂಪ್‌’ನಲ್ಲಿ (ಎ.ಜಿ) ಭಾರತಕ್ಕೆ ಶುಕ್ರವಾರ ಸದಸ್ಯತ್ವ ದೊರೆತಿದೆ.

20 Jan, 2018
ರಾಜ್ಯದ 12 ಜಿಲ್ಲೆಗಳಲ್ಲಿ ಶಾಲೆಬಿಟ್ಟ ಬಾಲಕಿಯರಿಗೆ ವಿಶೇಷ ಯೋಜನೆ

ಸಬಲೀಕರಣ ಉದ್ದೇಶ
ರಾಜ್ಯದ 12 ಜಿಲ್ಲೆಗಳಲ್ಲಿ ಶಾಲೆಬಿಟ್ಟ ಬಾಲಕಿಯರಿಗೆ ವಿಶೇಷ ಯೋಜನೆ

20 Jan, 2018