‘ಸಚಿನ್‌ ಸಾಗಾ ಕ್ರಿಕೆಟ್‌ ಚಾಂಪಿಯನ್ಸ್‌'

ಕ್ರಿಕೆಟ್‌ ದೇವರ ಆಟ ಅನುಭವಿಸಿ

ಅಂದಹಾಗೆ ಸಚಿನ್‌ ಬೆಂಗಳೂರಿಗೆ ಬಂದಿದ್ದು, ಜೆಟ್‌ ಸಿಂಥೆಸಿಸ್‌ ಕಂಪೆನಿ ಪ್ರಾರಂಭಿಸಿರುವ ‘ಸಚಿನ್‌ ಸಾಗಾ ಕ್ರಿಕೆಟ್‌ ಚಾಂಪಿಯನ್ಸ್‌' ಗೇಮ್‌ ಬಿಡುಗಡೆಗೆ. ‘ಬೆಂಗಳೂರು ನನಗಿಷ್ಟ’ ಎಂದು ಮಾತು ಆರಂಭಿಸಿದ ಅವರು, ನಗರದ ಜೊತೆಗಿನ ತಮ್ಮ ಒಡನಾಟ ನೆನಪಿಸಿಕೊಂಡರು.

ಸಚಿನ್‌ ತೆಂಡೂಲ್ಕರ್

ಕಾರ್ಯಕ್ರಮ ಶುರುವಾಗುವುದು ಒಂದು ಗಂಟೆ ತಡವಾದರೂ, ಎಲ್ಲರೂ ಉತ್ಸಾಹದಿಂದ ಸಚಿನ್‌ ತೆಂಡೂಲ್ಕರ್ ಬರುವಿಕೆಗಾಗಿ ಕಾತರರಾಗಿದ್ದರು. ಸಚಿನ್‌ ಬರುತ್ತಿದ್ದಂತೆ ಕುರ್ಚಿಯಲ್ಲಿ ಕುಳಿತವರು ಎದ್ದು ತಮ್ಮ ಮೊಬೈಲ್‌ ಫೋನಿನಲ್ಲಿ ಫೋಟೊ, ವಿಡಿಯೊ ತೆಗೆಯಲು ಅಣಿಯಾದರು. ನಗುಮೊಗದಿಂದಲೇ ವೇದಿಕೆ ಏರಿದರು ಸಚಿನ್‌.

ಅಂದಹಾಗೆ ಸಚಿನ್‌ ಬೆಂಗಳೂರಿಗೆ ಬಂದಿದ್ದು, ಜೆಟ್‌ ಸಿಂಥೆಸಿಸ್‌ ಕಂಪೆನಿ ಪ್ರಾರಂಭಿಸಿರುವ ‘ಸಚಿನ್‌ ಸಾಗಾ ಕ್ರಿಕೆಟ್‌ ಚಾಂಪಿಯನ್ಸ್‌' ಗೇಮ್‌ ಬಿಡುಗಡೆಗೆ. ‘ಬೆಂಗಳೂರು ನನಗಿಷ್ಟ’ ಎಂದು ಮಾತು ಆರಂಭಿಸಿದ ಅವರು, ನಗರದ ಜೊತೆಗಿನ ತಮ್ಮ ಒಡನಾಟ ನೆನಪಿಸಿಕೊಂಡರು.

‘ನಾನು ಮೊಬೈಲ್‌ ಗೇಮ್‌ ಮೋಹಿ’ ಎಂದ ಅವರು, ಹಿಂದೆಲ್ಲ ನಾವು ಆಟವಾಡಲು ಹೊರಾಂಗಣ ಕ್ರೀಡಾಂಗಣವನ್ನು ನೆಚ್ಚಿಕೊಂಡಿದ್ದೆವು. ಈಗ ಮನರಂಜನೆಗೆ ಹಲವು ಆಯ್ಕೆಗಳಿವೆ. ಮಗನೊಂದಿಗೆ ಬಿಡುವಿನ ವೇಳೆ ವಿಡಿಯೊ ಗೇಮ್‌ ಆಡುತ್ತಿರುತ್ತೇನೆ. ಕೆಲವೊಮ್ಮೆ ಮಗಳೂ ಆಟಕ್ಕೆ ಜೊತೆಯಾಗುತ್ತಾಳೆ’ ಎಂದು ಮಾತು ಮುಂದುವರೆಸಿದರು.

‘ಎರಡು ವರ್ಷ ಈ ಗೇಮ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೆ. ಲಂಡನ್‌ನಲ್ಲಿ ಶೂಟಿಂಗ್‌ ನಡೆಯಿತು. ಸಾಕಷ್ಟು ಸಿದ್ಧತೆ ಮಾಡಿ ಈ ಗೇಮ್‌ ತಯಾರಿಸಿದ್ದೇವೆ’ ಎಂದು ಗೇಮ್‌ ತಯಾರಿಯ ಅನುಭವ ಹಂಚಿಕೊಂಡರು.

‘ಈ ಗೇಮ್‌ ವರ್ಚುವಲ್‌ ಕ್ರಿಕೆಟ್‌ನ ಅನುಭವ ನೀಡುತ್ತದೆ. ಆಧುನಿಕ ತಂತ್ರಜ್ಞಾನ ಇರುವುದರಿಂದ ಆಟಗಾರರಿಗೆ ಪ್ರದರ್ಶನದ ವೇಳೆ ಅಡ್ಡಿಗಳು ಎದುರಾಗುವುದಿಲ್ಲ. ಹೀಗಾಗಿ ಚಿತ್ರದ ಚಲನೆಗಳನ್ನು ಅನುಭವಿಸುತ್ತಾ ಆಡುವುದು ಸಾಧ್ಯವಾಗುತ್ತದೆ. ಕ್ರಿಕೆಟ್‌ನಲ್ಲಿ ನಾನು ಎದುರಿಸಿದ ಪ್ರತಿ ಸವಾಲನ್ನು ಆಟಗಾರರೂ ಎದುರಿಸಬಹುದು’ ಎಂದರು.

‘ಕ್ರಿಕೆಟ್‌ ಅಭಿಮಾನಿಗಳನ್ನು ಒಂದುಗೂಡಿಸಿ ಈ ಆಟದ ಮೂಲಕ ನನ್ನ ಪ್ರಯಾಣವನ್ನು ಅವರಲ್ಲಿ ಪ್ರತಿಯೊಬ್ಬರು ಅನುಭವಿಸುವ ಅವಕಾಶ ಮಾಡಿಕೊಡುವುದು ಈ ಆಟದ ಉದ್ದೇಶ. ಇದೊಂದು ಸವಾಲಿನ ಗೇಮ್‌. ಕ್ರಿಕೆಟ್‌ ಮೋಹಿಗಳಿಗೆ ಈ ಗೇಮ್‌ ಮನರಂಜನೆ ನೀಡಲಿದೆ’ ಎಂದು ಆಟದ ಹೆಚ್ಚುಗಾರಿಕೆ ಬಗ್ಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಈ ಗೇಮ್‌ ಆಡಿದ ಮೂರು ಮಂದಿಗೆ ಸಚಿನ್‌ ಸಹಿ ಇರುವ ಬ್ಯಾಟ್‌ ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ನಾಲ್ವರು ಅದೃಷ್ಟಶಾಲಿಗಳಿಗೆ ಸಚಿನ್‌ ಜೊತೆ ಕ್ರಿಕೆಟ್‌ ಆಡುವ ಅವಕಾಶ ನೀಡಲಾಯಿತು.

ಆ್ಯಪ್‌ಸ್ಟೋರ್ ಮತ್ತು ಪ್ಲೇಸ್ಟೋರ್‌ಗಳಲ್ಲಿ Sachin Saga Cricket Champions ಎಂದು ಟೈಪಿಸುವ ಮೂಲಕ ಗೇಂ ಹುಡುಕಬಹುದು. ಇದು ಉಚಿತ ಗೇಂ. ಮಾಹಿತಿಗೆ: http://www.sachinsaga.com ನೋಡಿ 

Comments
ಈ ವಿಭಾಗದಿಂದ ಇನ್ನಷ್ಟು
ಕಪ್ಪು ಲೋಕಕ್ಕೆ ದೊಂದಿ ಬೆಳಕು

ನಾ ಕಂಡ ಬದುಕು
ಕಪ್ಪು ಲೋಕಕ್ಕೆ ದೊಂದಿ ಬೆಳಕು

22 Jan, 2018
‘ಬ್ರಹ್ಮಾಸ್ತ್ರ’ದ ಬೆಡಗಿ ದೀಪಾ

ಕಿರುತೆರೆ
‘ಬ್ರಹ್ಮಾಸ್ತ್ರ’ದ ಬೆಡಗಿ ದೀಪಾ

22 Jan, 2018
‘ಸಾಹೊ’ದಲ್ಲಿ ಶ್ರದ್ಧಾ ಹವಾ

ಬಾಲಿವುಡ್‌
‘ಸಾಹೊ’ದಲ್ಲಿ ಶ್ರದ್ಧಾ ಹವಾ

22 Jan, 2018
‘ಫಿಲ್ಮ್‌ಫೇರ್‌’ ಸಂಜೆಯಲ್ಲಿ ಪುಳಕದ ಮಳೆ

ಮೆಟ್ರೋ
‘ಫಿಲ್ಮ್‌ಫೇರ್‌’ ಸಂಜೆಯಲ್ಲಿ ಪುಳಕದ ಮಳೆ

22 Jan, 2018
ಹರ್ಷೋಲ್ಲಾಸದ ಹಳದಿಪುರ

ಸುತ್ತಾಣ
ಹರ್ಷೋಲ್ಲಾಸದ ಹಳದಿಪುರ

22 Jan, 2018