ನ್ಯಾಯ ಒದಗಿಸಿ!

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸ್ವಚ್ಛ ಭಾರತ ಮಿಷನ್, ವಸತಿ ಯೋಜನೆಗಳ ಪ್ರಗತಿ ದಾಖಲೀಕರಣ, ಪಡಿತರ ಚೀಟಿ ಕಾರ್ಯ, ಬಾಪೂಜಿ ಸೇವಾ ಕೇಂದ್ರದ ಮೂಲಕ ಒಂದೇ ಸೂರಿನಡಿ ನೀಡುವ ಹಲವು ಸೇವೆ- ಈ ಎಲ್ಲದರ ಡಾಟಾ ಎಂಟ್ರಿ, ಆಧಾರ್ ಮಾಹಿತಿ ಪರಿಷ್ಕರಣೆ... ಹೀಗೆ ಗ್ರಾಮ ಪಂಚಾಯಿತಿಗಳಲ್ಲಿ ಈಗ ಕೆಲಸಗಳು ಹೆಚ್ಚಾಗಿವೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸ್ವಚ್ಛ ಭಾರತ ಮಿಷನ್, ವಸತಿ ಯೋಜನೆಗಳ ಪ್ರಗತಿ ದಾಖಲೀಕರಣ, ಪಡಿತರ ಚೀಟಿ ಕಾರ್ಯ, ಬಾಪೂಜಿ ಸೇವಾ ಕೇಂದ್ರದ ಮೂಲಕ ಒಂದೇ ಸೂರಿನಡಿ ನೀಡುವ ಹಲವು ಸೇವೆ- ಈ ಎಲ್ಲದರ ಡಾಟಾ ಎಂಟ್ರಿ, ಆಧಾರ್ ಮಾಹಿತಿ ಪರಿಷ್ಕರಣೆ... ಹೀಗೆ ಗ್ರಾಮ ಪಂಚಾಯಿತಿಗಳಲ್ಲಿ ಈಗ ಕೆಲಸಗಳು ಹೆಚ್ಚಾಗಿವೆ. ಹೀಗಾಗಿ, ಅಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಯನ್ನು ಸರ್ಕಾರ ಸೃಷ್ಟಿ ಮಾಡಿದ್ದು ಸ್ವಾಗತಾರ್ಹ. ಆದರೆ, ಗ್ರಾಮ ಪಂಚಾಯಿತಿಗಳಲ್ಲಿ ದಶಕದಿಂದ ದುಡಿಯುತ್ತಿರುವ ಕಂಪ್ಯೂಟರ್‌ ಆಪರೇಟರ್‌ಗಳನ್ನು ಕೈಬಿಟ್ಟು ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು ಅನ್ಯಾಯ.

ಹಾಲಿ ಇರುವ ಕಂಪ್ಯೂಟರ್ ಆಪರೇಟರ್‌ಗಳು 2005ರಿಂದ ಈವರೆಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ‘ಇ– ಆಡಳಿತ’ ಜಾರಿಯಾದ ನಂತರ ಗ್ರಾಮ ಪಂಚಾ­ಯಿತಿ­ಗಳಲ್ಲಿ ‘ಪಂಚತಂತ್ರ’ ತಂತ್ರಾಂಶದ ಬಳಕೆ­ ಸರ್ವವ್ಯಾಪಿಯಾಯಿತು. ಇದಾದ ನಂತರ ಎಲ್ಲ ಪಂಚಾಯಿತಿಗಳಲ್ಲಿ, ಕಂಪ್ಯೂಟರ್‌ ಆಪರೇಟರ್‌ಗಳನ್ನು ‘ಡಾಟಾ ಎಂಟ್ರಿ ಆಪರೇಟರ್’ ಎನ್ನುವ ಸ್ವತಂತ್ರ ಹುದ್ದೆಯ ಮೂಲಕ ನೇಮಕಾತಿ ಮಾಡಿಕೊಳ್ಳಲಾಗಿತ್ತು.

ಗ್ರಾಮ ಪಂಚಾಯಿತಿಯ ಶೇಕಡ 90ರಷ್ಟು ಕೆಲಸಗಳು ಕಂಪ್ಯೂಟರನ್ನು ಆಧರಿಸಿವೆ. ಹೀಗಿದ್ದರೂ ಪಂಚಾಯತ್‌ ರಾಜ್ ಇಲಾಖೆ ಏಕೆ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಕ ಮಾಡುತ್ತಿಲ್ಲ ಎಂದು ಇಷ್ಟು ದಿನ ಪ್ರಶ್ನಿಸಲಾಗುತ್ತಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಆದರೆ, ಇದ್ದವರನ್ನು ಬಿಟ್ಟು, ಹೊಸ ಅರ್ಜಿಗಳನ್ನು ಕರೆದಿರುವುದರಿಂದ ಇಷ್ಟು ವರ್ಷ ದುಡಿದ ಆಪರೇಟರುಗಳು ಕಂಗಾಲಾಗಿದ್ದಾರೆ.

ರಾಜ್ಯದ ಸಾವಿರಾರು ಆಪರೇಟರ್‌ಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಈಗಿರುವ ಆಪರೇಟರುಗಳಿಗೆ ಅನುಮೋದನೆ ನೀಡಿ, ಖಾಲಿ ಇರುವ ಸ್ಥಳಗಳಲ್ಲಿ ಮಾತ್ರ ಹೊಸ ಅಭ್ಯರ್ಥಿಗಳ ನೇಮಕ ಮಾಡಿದಲ್ಲಿ ಸರ್ವರಿಗೂ ನ್ಯಾಯ ಒದಗಿಸಿದಂತಾಗುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಮಾನಸಿಕ ಅಸ್ವಸ್ಥರೇ ?

ನಾನು ವೃತ್ತಿಯಿಂದ ಮನೋವೈದ್ಯ. ಇತ್ತೀಚಿನ ವರ್ಷಗಳಲ್ಲಿ, ರಾಜಕಾರಣದಲ್ಲಿರುವ ನಾಯಕರು, ಮರಿಪುಡಾರಿಗಳು ಮತ್ತು ಅವರ ಹಿಂಬಾಲಕರ ನಡೆ–ನುಡಿಗಳನ್ನು ಗಮನಿಸಿದರೆ, ವಿರೋಧಿಗಳ ಆರೋಪಗಳಿಗೆ ಅವರು ಪ್ರತಿಕ್ರಿಯಿಸುವುದನ್ನು ನೋಡಿದರೆ,...

19 Jan, 2018

ವಾಚಕರವಾಣಿ
ನಾಚಿಕೆ ಇಲ್ಲವೇ?

ನಾವು ಸುಮಾರು 7–8 ಜನ ಸ್ನೇಹಿತರು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅರೆಕಾಲಿಕ, ಗುತ್ತಿಗೆ ಆಧಾರದ ಕೆಲಸಗಳಲ್ಲಿದ್ದೇವೆ. ನಾವೆಲ್ಲರೂ ಮಧ್ಯಮ ವರ್ಗದಿಂದ ಬಂದವರು.

19 Jan, 2018

ವಾಚಕರವಾಣಿ
ಬುಲೆಟ್‍– ಶಕುಂತಲಾ

ಪ್ರಸನ್ನ ಅವರ ‘ಬಸವನ ಬಂಡಿ ಹಾಗೂ ಬುಲೆಟ್‍ ಟ್ರೇನು’ ಲೇಖನದಲ್ಲಿ (ಪ್ರ.ವಾ., ಡಿ. 21) ‘ಎತ್ತಿನ ಬಂಡಿ ಕಾಯಕ ಚಳವಳಿ ಪಕ್ಕಕ್ಕೆ ಇಟ್ಟು ಭವ್ಯ...

19 Jan, 2018

ವಾಚಕರ ವಾಣಿ
ಒತ್ತಡ ಸರಿಯಲ್ಲ

ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ಏರಿಕೆ (ಪ್ರ.ವಾ., ಜ. 11) ವರದಿ ಆತಂಕ ಮೂಡಿಸುತ್ತದೆ.

18 Jan, 2018

ವಾಚಕರವಾಣಿ
ವಯೋಮಿತಿ ಏರಿಕೆ ಬೇಡ

ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಏರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಸರ್ಕಾರ ಈ ನಿರ್ಧಾರ ಕೈಗೊಂಡರೆ,...

18 Jan, 2018