50 ವರುಷಗಳ ಹಿಂದೆ–07

ಶುಕ್ರವಾರ , 08–12–1967

ಮೈಸೂರಿನ ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪನವರು ಸರ್ವಾನುಮತದಿಂದ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಶ್ರೀ ಸಾದಿಕ್‌ ಆಲಿಯವರು ಇಂದು ಇಲ್ಲಿ ಪ್ರಕಟಿಸಿದರು.

ಶುಕ್ರವಾರ , 08–12–1967

ಕಾಂಗ್ರೆಸ್‌ ಅಧ್ಯಕ್ಷರಾಗಿ ಶ್ರೀ ನಿಜಲಿಂಗಪ್ಪ ಅವಿರೋಧ ಆಯ್ಕೆ

ನವದೆಹಲಿ, ಡಿ. 7– ಮೈಸೂರಿನ ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪನವರು ಸರ್ವಾನುಮತದಿಂದ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಶ್ರೀ ಸಾದಿಕ್‌ ಆಲಿಯವರು ಇಂದು ಇಲ್ಲಿ ಪ್ರಕಟಿಸಿದರು.

*

ಮೂದೇವಿ

ನವದೆಹಲಿ, ಡಿ. 7– ‘ಕೈಯ್ಯಲ್ಲಿ ಕಸಪೊರಕೆ– ಕಡೆಯ ಹೆಸರು ಮಾತ್ರ ದೇವಿ’.

ಹಿಂದಿಗೆ ನೀಡಲಾಗುತ್ತಿರುವ ಸ್ಥಾನ ಮಾನವನ್ನು ಸುಚೇತ ಕೃಪಲಾನಿ ಅವರು ನಾರಿಗೆ ಹೋಲಿಸಿದ್ದು ಹೀಗೆ.

ಅಧಿಕೃತ ಭಾಷಾ (ತಿದ್ದುಪಡಿ) ಮಸೂದೆ ಬಗ್ಗೆ ಇಂದು ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ, ‘ಮಸೂದೆಯನ್ನು ಅದರ ಈಗಿನ ರೂಪದಲ್ಲಿಯೇ ಅಂಗೀಕರಿಸಿದರೆ, ಹಿಂದಿ ಭಾಷೆಯು ಹೆಸರಿಗೆ ಮಾತ್ರ ಅಧಿಕೃತ ಭಾಷೆಯಾಗುತ್ತದೆಯೇ ಹೊರತು ಕಾರ‍್ಯತಃ ಅಲ್ಲ’ ಎಂದರು ಕೃಪಲಾನಿ. ‘ಹೆಣ್ಣನ್ನು ದೇವಿ ಎಂದು ಕರೆದು, ಪೂಜಿಸಿ, ಅವಳ ಕೈಯಲ್ಲಿ ಬೀದಿ ಕಸ ಗುಡಿಸುವ ಕೆಲಸ ಮಾಡಿಸಿದಂತೆ’ ಎಂದು ಅವರು ನುಡಿದಾಗ ಸಭೆ ಘೊಳ್ಳನೆ ನಕ್ಕಿತು.

*

ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿಂದಿ ನಿಯಮ ಸಡಿಲಿಕೆ

ಬೆಂಗಳೂರು, ಡಿ. 7– ರಾಜ್ಯ ಸರ್ಕಾರವು ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯ ಹಿಂದಿ ವಿಷಯ ಕುರಿತಾದ ನಿಯಮವನ್ನು ಸಡಿಲಗೊಳಿಸಿದೆ.

ಸದ್ಯಕ್ಕೆ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯ ಭಾಗ–1ರ ಕನ್ನಡ ವಿಷಯದಲ್ಲಿ ಶೇಕಡಾ ಕನಿಷ್ಠ 30 ಹಾಗೂ ಹಿಂದಿ ವಿಷಯದಲ್ಲಿ ಶೇಕಡಾ ಕನಿಷ್ಠ 25 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಉತ್ತೀರ‍್ಣರಾಗುತ್ತಾರೆ. ಆದರೆ ಈ ನಿಯಮಾವಳಿ ಸಡಿಲಿಕೆಯಿಂದ ಇನ್ನು ಮೇಲೆ ಭಾಗ–1ರ ಕನ್ನಡ ವಿಷಯದಲ್ಲಿ ಶೇಕಡಾ ಕನಿಷ್ಠ 35 ಅಂಕಗಳನ್ನು ಪಡೆದು, ಹಿಂದಿಯಲ್ಲಿ ಎಷ್ಟೇ ಅಂಕಗಳನ್ನು ಪಡೆದರೂ ಅವರು ಉತ್ತೀರ‍್ಣರೆಂದು ಸಾರಲಾಗುವುದು.

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರ ವಾಣಿ
ಕಾನ್ವೆಂಟ್‌ ಏಜೆನ್ಸಿ?

ಸಾಹಿತಿಗಳಿಗೆ ನೈತಿಕ ಸ್ಥೈರ್ಯವಿರುವುದಿಲ್ಲ. ಆದ್ದರಿಂದ ಯಾರೂ ಆಕ್ಷೇಪಿಸಲಾರರು ಎಂದುಕೊಂಡು ಅವರು ಹೀಗೆ ಮಾತನಾಡಿರಬಹುದು. ಆ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ನಾನು, ‘ನನ್ನ ಮಗಳು, ನನ್ನೆದುರಿಗಿದ್ದ ಸುಬ್ರಾಯ...

22 Jan, 2018

ಮತದಾರರಿಗೆ ಹಣ, ಚಿನ್ನ, ಬೆಳ್ಳಿ, ಮದ್ಯ, ಊಟ...
ಆತಂಕದ ಬೆಳವಣಿಗೆ!

ಪ್ರಸ್ತುತ ದೇಶದ ರಾಜಕೀಯ ಸ್ಥಿತಿಯಲ್ಲಿ, ‘ಗೆಲುವು ಮುಖ್ಯ, ಅದಕ್ಕಾಗಿ ತುಳಿಯುವ ಮಾರ್ಗ ಮುಖ್ಯವಲ್ಲ’ ಎಂಬ ಧೋರಣೆ ದಟ್ಟವಾಗಿದೆ. ಇಂಥ ಸ್ಥಿತಿಯಲ್ಲಿ, ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು...

22 Jan, 2018

ವಾಚಕರ ವಾಣಿ
ಅಂಧಾಭಿಮಾನ ಸಲ್ಲ

ಒಂದೆರಡು ಘಟನೆಗಳನ್ನಾಧರಿಸಿ ಭಾರತದಂಥ ಬೃಹತ್ ದೇಶದಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆಧಕ್ಕೆಯೊದಗಿದೆ’ ಎಂದು ಹಳಹಳಿಸುವುದು ಎಷ್ಟು ಸಮರ್ಥನೀಯ?

22 Jan, 2018

ವಾಚಕರವಾಣಿ
ಹೆಲ್ಮೆಟ್ ಭಾಗ್ಯ?!

ರಾಜಕೀಯ ಪಕ್ಷಗಳಿಗೆ ಒಂದು ಒಳ್ಳೆಯ ಅವಕಾಶ. ‘ದ್ವಿಚಕ್ರ ವಾಹನ ಸವಾರರು ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್ ಅನ್ನೇ ಧರಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.

20 Jan, 2018

ವಾಚಕರವಾಣಿ
ಸುಗ್ಗಿ – ಹುಗ್ಗಿ!

ಇನ್ನು ಮುಂದೆ ಚುನಾವಣಾ ಪರ್ವಕಾಲ ಶ್ರೀಸಾಮಾನ್ಯನಿಗೆ ಇನ್ನಿಲ್ಲದ ಅನುಕೂಲ

20 Jan, 2018