ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ

ಆಧಾರ್‌ ಜೋಡಣೆ: ಮಾರ್ಚ್‌ ಗಡುವು

ಸರ್ಕಾರ ನೀಡುವ ವಿವಿಧ ಸೇವೆಗಳಿಗೆ ಆಧಾರ್‌ ಜೋಡಣೆ ಮಾಡುವ ಗಡುವನ್ನು ಮಾರ್ಚ್‌ 31ರವರೆಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪುನರುಚ್ಚರಿಸಿದೆ. ಈ ಬಗ್ಗೆ ಶುಕ್ರವಾರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದೆ.

ಆಧಾರ್‌ ಜೋಡಣೆ: ಮಾರ್ಚ್‌ ಗಡುವು

ನವದೆಹಲಿ: ಸರ್ಕಾರ ನೀಡುವ ವಿವಿಧ ಸೇವೆಗಳಿಗೆ ಆಧಾರ್‌ ಜೋಡಣೆ ಮಾಡುವ ಗಡುವನ್ನು ಮಾರ್ಚ್‌ 31ರವರೆಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪುನರುಚ್ಚರಿಸಿದೆ. ಈ ಬಗ್ಗೆ ಶುಕ್ರವಾರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದೆ.

ಮೊಬೈಲ್‌ ಸಿಮ್‌ಗೆ ಆಧಾರ್‌ ಜೋಡಣೆ ಮಾಡುವುದನ್ನು ಸುಪ್ರೀಂ ಕೋರ್ಟ್‌ ಕಡ್ಡಾಯ ಮಾಡಿರುವುದರಿಂದ ಅದರ ಗಡುವನ್ನು ವಿಸ್ತರಿಸಲಾಗುವುದಿಲ್ಲ. ಸಿಮ್‌ಗೆ ಆಧಾರ್‌ ಜೋಡಣೆ ಮಾಡಲು ಮುಂದಿನ ಫೆಬ್ರುವರಿ 6 ಕೊನೆಯ ದಿನವಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್‌ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠಕ್ಕೆ ತಿಳಿಸಿದರು. ಬ್ಯಾಂಕ್‌ ಖಾತೆ ಮತ್ತು ಪ್ಯಾನ್‌ ಸಂಖ್ಯೆಗೆ ಆಧಾರ್‌ ಜೋಡಣೆಗೂ ಇದು ಅನ್ವಯ ಎಂದು ಹೇಳಿದರು.

ವಿವಿಧ ಸೇವೆಗಳಿಗೆ ಆಧಾರ್‌ ನೋಂದಣಿ ಮಾಡದವರಿಗೆ ಕಿರುಕುಳ ನೀಡುವಂತಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ಕೊಡಬೇಕು ಎಂದು ಆಧಾರ್‌ ಯೋಜನೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವವರ ಪರ ವಾದಿಸುತ್ತಿರುವ ವಕೀಲ ಶ್ಯಾಮ್‌ ದಿವಾನ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ವೇಣುಗೋಪಾಲ್‌, ಆಧಾರ್‌ ನೋಂದಣಿ ಮಾಡಲು ಬಯಸುವವರಿಗೆ ಕಿರುಕುಳ ನೀಡುವಂತಹ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಇವರಿಗೆ ಮುಂದಿನ ಮಾರ್ಚ್‌ 31ರವರೆಗೆ ಯಾವುದೇ ಸೇವೆಯನ್ನು ನಿರಾಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

**

ಆಧಾರ್‌ಗೆ ಕಾನೂನು ಬಲ

* 2016ರಲ್ಲಿ ಸಂಸತ್ತು ಆಧಾರ್‌ ಕಾಯ್ದೆಗೆ ಅನುಮೋದನೆ ನೀಡಿದೆ. ಬಳಿಕ, ಪಡಿತರ, ಅಡುಗೆ ಅನಿಲ, ನರೇಗಾ, ವಿದ್ಯಾರ್ಥಿವೇತನ ಮತ್ತು ಪಿಂಚಣಿಯಂತಹ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್‌ ಜೋಡಣೆಯನ್ನು ಸರ್ಕಾರ ಕಡ್ಡಾಯ ಮಾಡಿದೆ

* ಪ್ಯಾನ್‌ ಕಾರ್ಡ್‌ಗಳಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸುವುದಕ್ಕಾಗಿ ಆದಾಯ ತೆರಿಗೆ ಕಾಯ್ದೆಗೆ ಇದೇ ಮಾರ್ಚ್‌ನಲ್ಲಿ ತಿದ್ದುಪಡಿ ಮಾಡಲಾಗಿದೆ‌

* ಬ್ಯಾಂಕ್‌ ಖಾತೆ, ವಿಮೆ, ಪಿಂಚಣಿ, ಮ್ಯೂಚುವಲ್‌ ಫಂಡ್‌ ಮತ್ತು ಡಿಮ್ಯಾಟ್‌ ಖಾತೆಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವುದಕ್ಕಾಗಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಗೆ ಜೂನ್‌ 1ರಂದು ತಿದ್ದುಪಡಿ ಮಾಡಲಾಗಿದೆ

* ಲೋಕನೀತಿ ಫೌಂಡೇಶನ್‌ ಸಲ್ಲಿಸಿದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸಿಮ್‌ ಕಾರ್ಡ್‌ಗೆ ಆಧಾರ್‌ ಜೋಡಣೆಯನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ

**

ಯುಐಡಿಎಐ ಭಿನ್ನ ರಾಗ

ಮೊಬೈಲ್‌ ಸಿಮ್‌ ಬಿಟ್ಟು ಉಳಿದೆಲ್ಲ ಸೌಲಭ್ಯಗಳಿಗೆ ‌ಆಧಾರ್‌ ಜೋಡಣೆ ಗಡುವನ್ನು ವಿಸ್ತರಿಸಲಾಗಿದೆ ಎಂದು ಸರ್ಕಾರ ಹೇಳಿದರೂ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಬೇರೆಯದೇ ಹೇಳಿಕೆ ನೀಡಿದೆ.

ಬ್ಯಾಂಕ್‌ ಖಾತೆಗಳು, ಪ್ಯಾನ್‌ ಕಾರ್ಡ್‌ ಮತ್ತು ಮೊಬೈಲ್‌ ಸಿಮ್‌ಗಳಿಗೆ ಆಧಾರ್‌ ಜೋಡಣೆಯ ಗಡುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.

ಬ್ಯಾಂಕ್‌ ಖಾತೆ ಮತ್ತು ಆದಾಯ ತೆರಿಗೆ ಶಾಶ್ವತ ಖಾತೆ ಸಂಖ್ಯೆಗೆ (ಪ್ಯಾನ್‌) ಆಧಾರ್ ಜೋಡಣೆ ಮಾಡಲು ಡಿ. 31 ಮತ್ತು ಸಿಮ್‌ ಕಾರ್ಡ್‌ಗಳಿಗೆ ಆಧಾರ್‌ ಜೋಡಣೆಗೆ ಮುಂದಿನ ಫೆ. 6ರ ಗಡುವು ನಿಗದಿಪಡಿಸಲಾಗಿದೆ.

ವಿವಿಧ ಸೇವೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುವುದಕ್ಕೆ ಸುಪ್ರೀಂ ಕೋರ್ಟ್‌ ಈವರೆಗೆ ತಡೆ ನೀಡಿಲ್ಲ. ತಡೆ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.

**

ಮುಂದಿನ ವಾರ ವಿಚಾರಣೆ

ಆಧಾರ್‌ಗೆ ಸಂಬಂಧಿಸಿ ದಾಖಲಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಸಂವಿಧಾನ ಪೀಠವನ್ನು  ಮುಂದಿನ ವಾರ ರಚಿಸಲಾಗುವುದು. ಮುಂದಿನ ವಾರವೇ ವಿಚಾರಣೆಯೂ ಆರಂಭವಾಗಲಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸಂವಿಧಾನ ಪೀಠ ರಚಿಸುವುದಾಗಿ ಅಕ್ಟೋಬರ್‌ 30ರಂದೇ ಸುಪ್ರೀಂ ಕೋರ್ಟ್‌ ಹೇಳಿತ್ತು. ನವೆಂಬರ್‌ ಕೊನೆಯ ವಾರದಲ್ಲಿ ವಿಚಾರಣೆ ಆರಂಭಿಸಲಾಗುವುದು ಎಂದೂ ಹೇಳಿತ್ತು. ಆದರೆ ಅದು ಮುಂದೂಡಿಕೆ ಆಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
3 ಸಾವಿರ ಚಿತ್ರಮಂದಿರಗಳಲ್ಲಿ ‘ಪದ್ಮಾವತ್‌’ ಬಿಡುಗಡೆಗೆ ಸಿದ್ಧತೆ: ಮುಂಬೈ, ಅಹಮದಾಬಾದ್‌, ಹರಿಯಾಣದಲ್ಲಿ ಪ್ರತಿಭಟನೆ

ಕಲ್ಲು ತೂರಾಟ, ಬಸ್‌ಗೆ ಬೆಂಕಿ; ಕರ್ಣಿ ಸೇನಾ ಬೆಂಬಲಿಗರ ಬಂಧನ
3 ಸಾವಿರ ಚಿತ್ರಮಂದಿರಗಳಲ್ಲಿ ‘ಪದ್ಮಾವತ್‌’ ಬಿಡುಗಡೆಗೆ ಸಿದ್ಧತೆ: ಮುಂಬೈ, ಅಹಮದಾಬಾದ್‌, ಹರಿಯಾಣದಲ್ಲಿ ಪ್ರತಿಭಟನೆ

24 Jan, 2018
ಗಣರಾಜ್ಯೋತ್ಸವದಂದು ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಮೋಹನ್ ಭಾಗವತ್

ವ್ಯಾಸ ವಿದ್ಯಾ ಪೀಠಂ ಶಾಲೆಯಲ್ಲಿ ಧ್ವಜಾರೋಹಣ
ಗಣರಾಜ್ಯೋತ್ಸವದಂದು ಕೇರಳದ ಶಾಲೆಯೊಂದರಲ್ಲಿ ಧ್ವಜಾರೋಹಣ ಮಾಡಲಿದ್ದಾರೆ ಮೋಹನ್ ಭಾಗವತ್

24 Jan, 2018
ಮೇವು ಹಗರಣದ ಮೂರನೇ ಪ್ರಕರಣ: ಲಾಲು ಪ್ರಸಾದ್‌ ದೋಷಿ, 5 ವರ್ಷ ಸಜೆ

ಒಟ್ಟು ಆರು ಪ್ರಕರಣಗಳು
ಮೇವು ಹಗರಣದ ಮೂರನೇ ಪ್ರಕರಣ: ಲಾಲು ಪ್ರಸಾದ್‌ ದೋಷಿ, 5 ವರ್ಷ ಸಜೆ

24 Jan, 2018
ಡಾರ್ವಿನ್ ಸಿದ್ಧಾಂತದ ಬಗ್ಗೆ ಆ ರೀತಿ ಹೇಳಿಕೆ ನೀಡಬೇಡಿ: ಸತ್ಯಪಾಲ್ ಸಿಂಗ್‌‍ಗೆ ಜಾವಡೇಕರ್ ಪಾಠ

'ಮಾನವ ವಿಕಾಸ' ಸಿದ್ಧಾಂತ
ಡಾರ್ವಿನ್ ಸಿದ್ಧಾಂತದ ಬಗ್ಗೆ ಆ ರೀತಿ ಹೇಳಿಕೆ ನೀಡಬೇಡಿ: ಸತ್ಯಪಾಲ್ ಸಿಂಗ್‌‍ಗೆ ಜಾವಡೇಕರ್ ಪಾಠ

24 Jan, 2018
ಪದ್ಮಾವತ್ ವಿವಾದ: ಮಾಲ್‍ಗಳಿಗೆ ನುಗ್ಗಿ ಕರ್ಣಿ ಸೇನೆ ಕಾರ್ಯಕರ್ತರ ದಾಂಧಲೆ, ವಾಹನಗಳಿಗೆ ಬೆಂಕಿ

ಗುರುಗ್ರಾಮದಲ್ಲಿ ಸೆಕ್ಷನ್ 144 ಜಾರಿ
ಪದ್ಮಾವತ್ ವಿವಾದ: ಮಾಲ್‍ಗಳಿಗೆ ನುಗ್ಗಿ ಕರ್ಣಿ ಸೇನೆ ಕಾರ್ಯಕರ್ತರ ದಾಂಧಲೆ, ವಾಹನಗಳಿಗೆ ಬೆಂಕಿ

24 Jan, 2018