ದಿನದ ನೆನಪು

ಭಾನುವಾರ, 10–12–1967

ಬೆಳಗಾವಿಯನ್ನು ಬರ್ಲಿನ್‌ನಂತೆ ವಿಭಜಿಸಿ ಮೈಸೂರು ಮತ್ತು ಮಹಾರಾಷ್ಟ್ರ ಸಮವಾಗಿ ಹಂಚಿಕೊಳ್ಳಬೇಕೆಂದು ಮಹಾರಾಷ್ಟ್ರದ ನಾಯಕರು ಸಲಹೆ ಮಾಡಿರುವರಂತೆ!

ಭಾನುವಾರ, 10–12–1967

ಮಹಾಜನ್ ವರದಿ ಚವಾಣರ ಅಧಿಕಾರ ವ್ಯಾಪ್ತಿಯಿಂದ ದೂರವಿರಲೆಂದು ಒತ್ತಾಯ

ಬೆಂಗಳೂರು, ಡಿ. 9– ಶ್ರೀ. ವೈ.ಬಿ. ಚವಾಣ್‌ರವರು ಮಹಾಜನ್ ಆಯೋಗದ ವರದಿಯ ಬಗ್ಗೆ ಕೇಂದ್ರದ ಗೃಹ ಸಚಿವರಾಗಿ ವ್ಯವಹರಿಸದಂತೆ ತಡೆಯಬೇಕೆಂದು ಸ್ವತಂತ್ರ ಸದಸ್ಯ ಶ್ರೀ ಜೆ.ಬಿ. ಮಲ್ಲಾರಾಧ್ಯ ಅವರು ಪ್ರಧಾನಮಂತ್ರಿಯನ್ನು ಇಂದು ಒತ್ತಾಯಪಡಿಸಿದರು.

ಶ್ರೀ ಚವಾಣ್‌ರವರು ಗೃಹಮಂತ್ರಿಯಾಗಿ ಮೈಸೂರು–ಮಹಾರಾಷ್ಟ್ರ–ಕೇರಳ ಗಡಿ ಪ್ರಶ್ನೆಗೆ ಸಂಬಂಧಿಸಿದಂತೆ ತಮ್ಮ ಅಧಿಕಾರವನ್ನು ನಿರ್ವಹಿಸಿದರೆ ‘ನಮಗೆ ನ್ಯಾಯ ದೊರೆಯುವುದಿಲ್ಲ’ ಎಂದು ಶ್ರೀ ಮಲ್ಲಾರಾಧ್ಯರು ಶಂಕಿಸಿದರು.

**

ಭಾರತದಲ್ಲೊಂದು ಬರ್ಲಿನ್!

ಬೆಂಗಳೂರು, ಡಿ. 9– ಬೆಳಗಾವಿಯನ್ನು ಬರ್ಲಿನ್‌ನಂತೆ ವಿಭಜಿಸಿ ಮೈಸೂರು ಮತ್ತು ಮಹಾರಾಷ್ಟ್ರ ಸಮವಾಗಿ ಹಂಚಿಕೊಳ್ಳಬೇಕೆಂದು ಮಹಾರಾಷ್ಟ್ರದ ನಾಯಕರು ಸಲಹೆ ಮಾಡಿರುವರಂತೆ!

ಇಂದು ವಿಧಾನ ಪರಿಷತ್ತಿನಲ್ಲಿ ಮಹಾಜನ್ ಆಯೋಗದ ಚರ್ಚೆಯಲ್ಲಿ ಭಾಗವಹಿಸಿದ್ದ ಶ್ರೀ ಜೆ.ಬಿ. ಮಲ್ಲಾರಾಧ್ಯರವರು ಮಹಾರಾಷ್ಟ್ರದ ನಾಯಕರು ಈ ರೀತಿ ಸಲಹೆ ಮಾಡಿರುವರೆಂದು ತಮಗೆ ಗೊತ್ತಾಗಿದೆ ಎಂದರು.

‘ಬೆಳಗಾವಿಯು ಮಹಾರಾಷ್ಟ್ರೀಯರಿಗೆ ಸಾವು–‍ಬದುಕಿನ ಪ್ರಶ್ನೆಯಾಗಿರುವಂತೆ ಕಂಡು ಬರುತ್ತದೆ’ ಎಂದ ಮಲ್ಲಾರಾಧ್ಯರು ಈ ‘ಸಲಹೆಯನ್ನು’ ಮಾಡಿರುವುದು ‘ಅತಿ ವಕ್ರವಾದ ವಾದ’ ಎಂದು ಟೀಕಿಸಿದರು.

**

ಮದ್ರಾಸ್ ರಾಜ್ಯದಲ್ಲಿ ಭಾರಿ ಮಳೆ ಹಾವಳಿ

ಮದ್ರಾಸ್‌, ಡಿ. 9– ಎರಡು ದಿನ ಬಿದ್ದ ಭಾರಿ ಮಳೆಗೆ ಸಿಕ್ಕಿ ಮದ್ರಾಸ್ ರಾಜ್ಯದ ತೀರದ ಜಿಲ್ಲೆಗಳಲ್ಲಿ 7 ಮಂದಿ ಮರಣ ಹೊಂದಿದರಲ್ಲದೆ, ಹತ್ತಾರು ಸಾವಿರ ಮಂದಿ ನಿರ್ವಸಿತರಾದರು.

ಅಧಿಕ ಮಳೆ ದೆಸೆಯಿಂದ ಕಾಂಚೀಪುರ ಒಂದರಲ್ಲೇ ಮನೆ ಕುಸಿದು ಕುಟುಂಬದ ನಾಲ್ವರು ಸಾವಿಗೀಡಾದರು.

**

ಸೂರ್ಯ ಕಾಣದ ಎರಡನೇ ದಿನ

ಬೆಂಗಳೂರು, ಡಿ. 9– ಸೂರ್ಯ ಕಾಣದ ಎರಡನೆಯ ದಿನ. ನಗರದ ಜನ ದಿನವೆಲ್ಲ ಛತ್ರಿ ಹಿಡಿದು ನಡೆದರು.

ನಿನ್ನೆ ಬೆಳಿಗ್ಗೆ ಆರಂಭವಾದ ಮಳೆ ಇಂದು ಬಹುರಾತ್ರಿಯವರೆಗೆ ಹನಿಯುತ್ತಲೇ ಇತ್ತು.

ಆಗಾಗ್ಗೆ ಕೆಲವು ನಿಮಿಷಗಳ ಕಾಲ ಬಿಡುವು ದೊರಕಿದರೂ ಕಪ್ಪು ಮೋಡ ಸದಾ ಕವಿದಿತ್ತು.

ನಾಳೆಯೂ ಸಂಜೆಯವರೆಗೆ ಮೋಡ ಕವಿದ ವಾತಾವರಣ, ಆಗಾಗ್ಗೆ ಮಳೆ, ಸಂಜೆ ನಂತರ ಮೋಡ ಚದುರುವ ನಿರೀಕ್ಷೆ.

**

ಸಾಗುವಳಿಗೆ ಸಿಕ್ಕುವ ಭೂಮಿ ಬಗೆಗೆ ಸರ್ವೆ

ಬೆಂಗಳೂರು, ಡಿ. 9– ರಾಜ್ಯದಲ್ಲಿ ವ್ಯವಸಾಯಕ್ಕೆ ದೊರೆಯುವ ಸರ್ಕಾರಿ ಜಮೀನಿನ ಬಗ್ಗೆ ಪ್ರತ್ಯೇಕ ಸರ್ವೆ ಮಾಡಲಾಗುತ್ತಿದ್ದು ಅದು ಪೂರೈಸಿದ ಕೂಡಲೆ ತಾಲ್ಲೂಕುವಾರು ಪಟ್ಟಿ ಪ್ರಕಟಿಸಲಾಗುವುದೆಂದು ಕಂದಾಯ ಸಚಿವ ಶ್ರೀ ಬಿ. ರಾಚಯ್ಯನವರು ಇಂದು ವಿಧಾನ ಸಭೆಗೆ ತಿಳಿಸಿದರು.

ಶ್ರೀಮತಿ ವಿನಿಫ್ರೆಡ್ ಎಫ್. ಫರ್ನಾಂಡೀಸ್ (ಪಿ.ಎಸ್.ಪಿ.– ಕುಂದಾಪುರ) ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ಕಾರ್ಕಳ ತಾಲ್ಲೂಕಿನಲ್ಲಿ 2,725 ಎಕರೆ, ಉಡುಪಿ 1,642 ಎಕರೆ ಮತ್ತು ಕುಂದಾಪುರ ತಾಲ್ಲೂಕಿನಲ್ಲಿ 1,477 ಎಕರೆ ಬಂಜರು ಭೂಮಿ ಇದೆಯೆಂದರು.

Comments
ಈ ವಿಭಾಗದಿಂದ ಇನ್ನಷ್ಟು
ಸೋಮವಾರ, 22–4–1968

ಪ್ರಜಾವಾಣಿ: 50 ವರ್ಷಗಳ ಹಿಂದೆ
ಸೋಮವಾರ, 22–4–1968

22 Apr, 2018

50 ವರ್ಷಗಳ ಹಿಂದೆ
ಭಾನುವಾರ, 21–4–1968

ಮಂಗಳೂರು ಬಂದರು ಪ್ರದೇಶದಲ್ಲಿ ಇಂದು ಲೂಟಿ, ಗಲಭೆ, ಬೆಂಕಿ ಹಚ್ಚುವ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮುಂತಾದ ಯತ್ನಗಳಲ್ಲಿ...

21 Apr, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
20–4–1968

ಕೈಗಾರಿಕೆಗಳ ವೇತನ ಮಂಡಲಿಯ ಶಿಫಾರಸುಗಳ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೂ ಕೈಗಾರಿಕೆಯಲ್ಲಿ ವೇತನ ಸ್ಥಗಿತಗೊಳಿಸಬೇಕೆಂಬ ಮಹತ್ವದ ವಿಷಯವನ್ನು ಈ ವಾರಾಂತ್ಯದಲ್ಲಿ ಇಲ್ಲಿ ಸೇರಲಿರುವ ತ್ರಿಪಕ್ಷೀಯ ಕಾರ್ಮಿಕ...

20 Apr, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಶುಕ್ರವಾರ, 19–4–1968

ಅನಾಸ್ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಎರಡು ಗೂಡ್ಸ್ ರೈಲುಗಳು ಡಿಕ್ಕಿ ಹೊಡೆದಾಗ ಹನ್ನೆರಡು ಮಂದಿ ಸತ್ತು, ಆರು ಜನಕ್ಕೆ ಗಾಯವಾಯಿತೆಂದು ಅಧಿಕೃತ ವರದಿಗಳು...

19 Apr, 2018

ಪ್ರಜಾವಾಣಿ: 50 ವರ್ಷಗಳ ಹಿಂದೆ
ಗುರುವಾರ, 18–4–1968

ಎರಡು ಅಥವಾ ಮೂರು ವಾರಗಳೊಳಗೆ ರಾಜ್ಯದ ಹೊಸ ಮುಖ್ಯಮಂತ್ರಿಯ ಆಯ್ಕೆ ನಡೆಯುವುದು ಎಂಬ ಸ್ಪಷ್ಟ ಸೂಚನೆಯನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ತೆರಳಲಿರುವ ಶ್ರೀ ನಿಜಲಿಂಗಪ್ಪನವರು ಇಂದು...

18 Apr, 2018