ಡಿ.ಸಿ ಕಚೇರಿಯಲ್ಲಿ ನಿಮಗೇನು ಕೆಲಸ?

ಹಚ್ಚ ಹಸಿರಿನಿಂದ ಕೂಡಿರುವ ಈ ಉದ್ಯಾನದಲ್ಲಿ ಮುಂಗಾರಿನ ನಂತರ ಎಲ್ಲೆಲ್ಲೂ ಚಿಟ್ಟೆಗಳದ್ದೆ ಸಾಮ್ರಾಜ್ಯ. ಜಿಲ್ಲಾಧಿಕಾರಿ ಕಚೇರಿಗೆ ಬರುವ ಅಧಿಕಾರಿಗಳ ಗತ್ತು, ಗೈರತ್ತು ಕೆಲವು ಚಿಟ್ಟೆಗಳದ್ದಾದರೆ, ಮತ್ತೆ ಕೆಲವು ಚಿಟ್ಟೆಗಳದ್ದು ಅದೇನು ಒನಪು ಒಯ್ಯಾರ!

‘ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ..’ ಚಿತ್ರಗಳು–ಬಿ.ಆರ್‌.ಸವಿತಾ

ವರಕವಿ ದ.ರಾ. ಬೇಂದ್ರೆ ‘ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ..’ದಂತಹ ಅಪ್ಯಾಯಮಾನ ಹಾಡನ್ನು ರಚಿಸಲು ಪ್ರೇರಣೆ ಇಂತಹ ನೋಟಗಳಿಂದಲೇ ಸಿಕ್ಕಿರಬಹುದೇ?

ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸುತ್ತಾಡುವಾಗ ಈ ಪ್ರಶ್ನೆ ತಲೆಯಲ್ಲಿ ಗಿರಿಕಿ ಹೊಡೆಯುತ್ತಿತ್ತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಇರುವುದು ಶತಮಾನ ಕಂಡಂತಹ ಪಾರಂಪರಿಕ ಕಟ್ಟಡದಲ್ಲಿ. ಇದರ ಆವರಣದಲ್ಲಿ ಚೆಂದದ ಒಂದು ಉದ್ಯಾನ ಇದೆ. ಹಚ್ಚ ಹಸಿರಿನಿಂದ ಕೂಡಿರುವ ಈ ಉದ್ಯಾನದಲ್ಲಿ ಮುಂಗಾರಿನ ನಂತರ ಎಲ್ಲೆಲ್ಲೂ ಚಿಟ್ಟೆಗಳದ್ದೆ ಸಾಮ್ರಾಜ್ಯ. ಜಿಲ್ಲಾಧಿಕಾರಿ ಕಚೇರಿಗೆ ಬರುವ ಅಧಿಕಾರಿಗಳ ಗತ್ತು, ಗೈರತ್ತು ಕೆಲವು ಚಿಟ್ಟೆಗಳದ್ದಾದರೆ, ಮತ್ತೆ ಕೆಲವು ಚಿಟ್ಟೆಗಳದ್ದು ಅದೇನು ಒನಪು ಒಯ್ಯಾರ!

ಆಗತಾನೆ ಅರಿಶಿಣದಲ್ಲಿ ಅದ್ದಿ ತೆಗೆದಂತೆ ಕಾಣುವ ಚಿಟ್ಟೆ ಅರಿಶಿಣ ಬಣ್ಣದ ಡೇರೆ ಹೂವಿನ ಮೇಲೆ ಕೂತರೆ ಕಾಣುವುದೇ ಇಲ್ಲ. ರೆಕ್ಕೆಗಳ ಮೇಲೆ ಕಣ್ಣುಗಳ ಚಿತ್ರ ಹೊಂದಿದ ಪಾತರಗಿತ್ತಿಯದೇ ಮತ್ತೊಂದು ಬಗೆ. ಇದು ನೋಡುಗರಿಗೆ ಚಿಟ್ಟೆಯ ರೆಕ್ಕೆಯಲ್ಲೂ ಕಣ್ಣೆ ಎಂಬ ಅನುಮಾನ ಮೂಡಿಸದೇ ಇರದು.

ಸೃಷ್ಟಿಕರ್ತ ಕತ್ತರಿ ಹಿಡಿದು ಸೂಕ್ಷ್ಮವಾಗಿ ಕತ್ತರಿಸಿದಂತೆ ಕಾಣುವ ಈ ಏರೋಪ್ಲೇನ್‌ ಚಿಟ್ಟೆಗಳ ಅಂದವನ್ನು ‌ರೆಕ್ಕೆ ಬಡಿಯುವಾಗ ನೋಡಿಯೇ ಸವಿಯಬೇಕು.

ಸದಾ ಸುಳಿದಾಡುವ ಪಾತರಗಿತ್ತಿಯದ್ದು ದಣಿವರಿಯದ ಹಾರಾಟ. ಪುಟ್ಟ ಜಾಗದಲ್ಲೇ ಅವುಗಳು ಹಲವು ಕಿಲೋಮೀಟರ್‌ಗಳಷ್ಟು ದೂರ ಸುಳಿದಾಡುತ್ತವೆಯಂತೆ. ಸ್ವಚ್ಛಂದವಾಗಿ ಹಾರಾಡುವ ಅವುಗಳು ಹೂವಿನ ಮೆತ್ತನೆ ಹಾಸಿಗೆ ಮೇಲೆ ಕುಳಿತು ಮಕರಂದ ಹೀರುವ ಪರಿ ಬಲು ಅನನ್ಯ.

ಹೊಸ ಜಿಲ್ಲಾಧಿಕಾರಿ ಕಟ್ಟಡದ ಕೆಲಸ ಭರದಿಂದ ಸಾಗಿದ್ದು, ಕಚೇರಿ ಸ್ಥಳಾಂತರಕ್ಕೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಹಳೆಯ ಕಟ್ಟಡದ ಪಾಡೇನು ಎಂಬ ಪ್ರಶ್ನೆ ಕಾಡಿದ್ದುಂಟು. ಅದಕ್ಕೆ ಉತ್ತರವಾಗಿ, ಇದನ್ನು ನಮಗೆ ಬಿಟ್ಟು ಬಿಡಿ, ಹಾಯಾಗಿ ಇಲ್ಲಿಯೆ ಕಾಲಕಳೆಯುತ್ತೇವೆ ಎಂದು ಆ ಚಿಟ್ಟೆಗಳು ಕೇಳುತ್ತವೆಯೇನೋ?

Comments
ಈ ವಿಭಾಗದಿಂದ ಇನ್ನಷ್ಟು
ಎಪ್ಪತ್ತೇಳು ಮಲೆಗಳ ಕಣಿವೆ ಗ್ರಾಮ!

ಕರ್ನಾಟಕ ದರ್ಶನ
ಎಪ್ಪತ್ತೇಳು ಮಲೆಗಳ ಕಣಿವೆ ಗ್ರಾಮ!

16 Jan, 2018
ಬರಡಾದ ಬೆಟ್ಟದಲಿ ಬೀಜ ಬಿತ್ತಿದವರು...

ಕರ್ನಾಟಕ ದರ್ಶನ
ಬರಡಾದ ಬೆಟ್ಟದಲಿ ಬೀಜ ಬಿತ್ತಿದವರು...

16 Jan, 2018
ಮಡಿಕೆ ಮಣ್ಣಿನಲ್ಲಿ ಮೂಡಿದ ಬೆಳಕು

ಕರ್ನಾಟಕ ದರ್ಶನ
ಮಡಿಕೆ ಮಣ್ಣಿನಲ್ಲಿ ಮೂಡಿದ ಬೆಳಕು

16 Jan, 2018
ಕಲ್ಲೂಡಿಯ ಹಪ್ಪಳ ಮಾಡಿತಲ್ಲ ಸಪ್ಪಳ!

ಕರ್ನಾಟಕ ದರ್ಶನ
ಕಲ್ಲೂಡಿಯ ಹಪ್ಪಳ ಮಾಡಿತಲ್ಲ ಸಪ್ಪಳ!

9 Jan, 2018
ತೇರಿಲ್ಲದ ಜಾತ್ರೆಗೆ 100ರ ಸಂಭ್ರಮ

ಕರ್ನಾಟಕ ದರ್ಶನ
ತೇರಿಲ್ಲದ ಜಾತ್ರೆಗೆ 100ರ ಸಂಭ್ರಮ

9 Jan, 2018