ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಕಲಾವಿದರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಹುಚ್ಚಯ್ಯ ಮಾಸ್ತರ ಅವರಿಗೆ ಡಾ. ಜೀ. ಶಂ.ಪ ಪ್ರಶಸ್ತಿ, ಶಾಲಿನಿ ರಘುನಾಥ ಅವರಿಗೆ ಡಾ. ಬಿ. ಎಸ್‌. ಗದ್ದಗಿಮಠ ಪ್ರಶಸ್ತಿ
Last Updated 11 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿ 2017ರ ಗೌರವ ಪ್ರಶಸ್ತಿಗೆ 30 ಜನಪದ ಕಲಾವಿದರು ಹಾಗೂ ತಜ್ಞ ಪ್ರಶಸ್ತಿಗೆ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಿದೆ.

‘ಶಿವಮೊಗ್ಗದ ಎನ್‌. ಹುಚ್ಚಪ್ಪ ಮಾಸ್ತರ ಅವರನ್ನು ಡಾ. ಜೀ.ಶಂ.ಪ ಪ್ರಶಸ್ತಿಗೆ, ಧಾರವಾಡದ ಶಾಲಿನಿ ರಘುನಾಥ ಅವರನ್ನು ಡಾ. ಬಿ. ಎಸ್‌. ಗದ್ದಗಿಮಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಅಕಾಡೆಮಿ ಅಧ್ಯಕ್ಷ ಬಿ. ಟಾಕಪ್ಪ ಕಣ್ಣೂರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗೌರವ ಪ್ರಶಸ್ತಿ ತಲಾ ₹25 ಸಾವಿರ ಹಾಗೂ ತಜ್ಞ ಪ್ರಶಸ್ತಿ ತಲಾ ₹50 ಸಾವಿರ ನಗದು ಒಳಗೊಂಡಿದೆ. ಇದೇ 29ರಂದು ಸಾಗರದಲ್ಲಿ ನಡೆಯುವ ಸಮಾರಂಭದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಪ್ರಶಸ್ತಿ ಪ್ರದಾನ ಮಾಡುವರು ಎಂದರು.

ಗೌರವ ಪ್ರಶಸ್ತಿಗೆ ಆಯ್ಕೆಯಾದವರು: ರಾಮನಗರ ಜಿಲ್ಲೆಯ ಗಂಗನರಸಮ್ಮ (ಸೋಬಾನೆ ಪದ), ದಾವಣಗೆರೆಯ ಜಿ.ಸಿದ್ಧನಗೌಡ (ಜನಪದ ಗಾಯನ), ತುಮಕೂರಿನ ಕೆ. ಆರ್‌. ಹೊಸಳಯ್ಯ (ವೀರಭದ್ರನ ಕುಣಿತ), ಬೆಂಗಳೂರು ನಗರದ ಎಚ್‌.ಕೆ ಪಾಪಣ್ಣ (ದಾಸರ ಪದ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಕ್ಕಯ್ಯಮ್ಮ (ಮದುವೆ ಹಾಡುಗಳು), ಕೋಲಾರದ ಮಾರಮ್ಮ (ಸೋಬಾನೆ ಪದ), ಚಿಕ್ಕಬಳ್ಳಾಪುರದ ಶಾಂತಮ್ಮ (ಸಂಪ್ರದಾಯದ ಪದ), ಚಿತ್ರದುರ್ಗದ ಡಿ. ತಿಮ್ಮಪ್ಪ (ಕೋಲಾಟದ ಪದ), ಶಿವಮೊಗ್ಗದ ಕೆ.ವಾಸುದೇವಪ್ಪ (ಜನಪದ ವೈದ್ಯ), ಕೊ‍‍ಪ್ಪಳದ ಹನುಮವ್ವ ವಾಲೀಕಾರ (ಸಂಪ್ರದಾಯದ ಪದ), ಬಳ್ಳಾರಿಯ ಶಿವಮ್ಮ (ಬುರ್ರಕಥೆ), ಯಾದಗಿರಿಯ ಶಿವಪ್ಪ ಹೆಬ್ಬಾಳ (ಹೆಜ್ಜೆ ಕುಣಿತ), ರಾಯಚೂರಿನ ರುಕ್ಮವ್ವ (ತತ್ವಪದ), ಬೀದರದ ನಾಗಪ್ಪ ಕಾಶಂಪೂರ (ಮೊಹರಂ ಪದ).

ಕಲಬುರಗಿಯ ಇಸ್ಮಾಯಿಲ್‌ ಸಾಬ (ಗೀಗೀ ಪದ), ಧಾರವಾಡದ ವೀರಭದ್ರಪ್ಪ ಯ. ಮಳ್ಳೂರ (ಗೀಗೀ ಭಜನೆ ಪದ), ಬಾಗಲಕೋಟೆಯ ಜಕ್ಕವ್ವ ಸತ್ಯಪ್ಪ ಮಾದರ (ಗೀಗೀ ಪದ), ಬೆಳಗಾವಿಯ ಸಾಬವ್ವ ಅಣ್ಣಪ್ಪ ಕೋಳಿ (ಸಂಪ್ರದಾಯ ಪದ), ವಿಜಯಪುರದ ಜಗದೇವ ಗೊಳವ್ವ ಮಾಡ್ಯಾಳ (ಭಜನೆ), ಹಾವೇರಿಯ ಮಹಾರುದ್ರಪ್ಪ ವೀರಪ್ಪ ಇಟಗಿ (ಪುರವಂತಿಕೆ), ಗದಗದ ರಾಮಪ್ಪ ದ್ಯಾಮಪ್ಪ ಕೊರವರ (ಡೊಳ್ಳಿನ ಪದ), ಉತ್ತರ ಕನ್ನಡದ ಸೋಮಯ್ಯ ಸಣ್ಣಗೊಂಡ (ಗೊಂಡರ ಢಕ್ಕೆ ಕುಣಿತ).

ಮೈಸೂರಿನ ಪುಟ್ಟಸ್ವಾಮಿ (ಬೀಸು ಕಂಸಾಳೆ), ಚಿಕ್ಕಮಗಳೂರಿನ ಎಸ್‌.ಜಿ ಜಯಣ್ಣ (ಚೌಕಿ ಪದ), ಮಂಡ್ಯದ ಕೃಷ್ಣೇಗೌಡ (ಗಾರುಡಿಗೊಂಬೆ), ಚಾಮರಾಜನಗರದ ಸಣ್ಣಶೆಟ್ಟಿ (ನೀಲಗಾರರ ಕಾವ್ಯ), ಹಾಸನದ ಲಕ್ಷ್ಮಮ್ಮ (ಭಜನೆ ಪದ), ದಕ್ಷಿಣ ಕನ್ನಡದ ಲೀಲಾ ಶೆಡ್ತಿ (ಸಿರಿಪಾಡ್ದನ), ಕೊಡಗಿನ ರಾಣಿಮಾಚಯ್ಯ (ಉಮ್ಮತ್ತಾಟ್‌), ಉಡುಪಿಯ ಗುರುವ ಡೋಲು (ಕೊರವರ ಡೋಲು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT