ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬ ಸಮುದಾಯವನ್ನು ಎಷ್ಟಿಗೆ ಸೇರಿಸಲು ಆಗ್ರಹ

Last Updated 13 ಡಿಸೆಂಬರ್ 2017, 9:10 IST
ಅಕ್ಷರ ಗಾತ್ರ

ಬಳ್ಳಾರಿ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾ ಘಟಕದ ನೂರಾರು ಕಾರ್ಯಕರ್ತರು ನಗರದ ನಗರೂರು ನಾರಾಯಣರಾವ್ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮಂಗಳವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ರಾಜ್ಯದಲ್ಲಿ ಕುರುಬ ಸಮುದಾಯದ ಜನಸಂಖ್ಯೆ 15 ರಿಂದ 20ಲಕ್ಷ ಇದೆ. ಅಲ್ಲದೇ ಅತಿ ದೊಡ್ಡ ಬುಡಕಟ್ಟು ಜನಾಂಗವಾಗಿ ಗುರುತಿಸಿಕೊಂಡಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಕುರಿಗಾಹಿಗಳಾಗಿ ಜೀವನ ನಡೆಸುತ್ತಿದ್ದಾರೆ. ಸಮುದಾಯವು ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ಹೀಗಾಗಿ ಸರ್ಕಾರ ಜನಾಂಗವನ್ನು ಕೂಡಲೇ ಎಸ್ಟಿಗೆ ಸೇರಿಸಬೇಕು’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಂ.ಪಾಟೀಲ ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಡಿ.ನಾಗರಾಜ, ಎ.ಮಹಾಲಿಂಗಯ್ಯ, ಡಿ.ದೊಡ್ಡಬಸಪ್ಪ, ಕೆ.ಎಂ.ರೇವಣಸಿದ್ಧಪ್ಪ, ಬಿ.ನಾಗರಾಜ, ಕೆ.ಮೋಹನ್, ಬತ್ರಿ ರಘು, ಲಿಂಗಣ್ಣ ಪೂಜಾರ್, ಕೋಳೂರು ಗಾದಿಲಿಂಗ, ಕೆ.ಶಂಕರಗೌಡ, ಕೆ.ಕೇಶವ, ಗೌರಿವರ, ಕೆ.ಬಿ.ರವಿಚಂದ್ರ, ಉಮಾಪತಿ, ಲಿಂಗರಾಜು, ಬೆಣಕಲ್ ಗಾದಿಲಿಂಗನಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT