ಆಟೊ ಸಂತೆಯಲ್ಲಿ...

ವಿಶೇಷ ಸಂದರ್ಭಕ್ಕೆ ರಾಯಲ್ ಎನ್‌ಫೀಲ್ಡ್‌ನಿಂದ ಸೀಮಿತ ಆವೃತ್ತಿ

ಈಗಾಗಲೇ ಈ ಬೈಕ್‌ಗಳ ನೋಂದಣಿ ಆರಂಭವಾಗಿದೆ. ನೋಂದಣಿ ಮಾಡಿಕೊಂಡ ನಂತರ ‘ಯುನಿಕ್ ಐಡೆಂಟಿಫಿಕೇಷನ್ ಕೋಡ್’ ನೀಡಲಾಗುವುದು.

ವಿಶೇಷ ಸಂದರ್ಭಕ್ಕೆ ರಾಯಲ್ ಎನ್‌ಫೀಲ್ಡ್‌ನಿಂದ ಸೀಮಿತ ಆವೃತ್ತಿ

ರಾಯಲ್ ಎನ್‌ಫೀಲ್ಡ್ ಒಂದು ವಿಶೇಷ ಕಾರಣಕ್ಕಾಗಿ ವಿಶೇಷ ಸೀಮಿತ ಆವೃತ್ತಿಯನ್ನು ಹೊರತಂದಿದೆ. ತನ್ನ ಕ್ಲಾಸಿಕ್ 500 ಲಿಮಿಟೆಡ್ ಎಡಿಷನ್ ಅನ್ನು ಪರಿಚಯಿಸಿದೆ.

‘ಸ್ಟೆಲ್ತ್ ಬ್ಲಾಕ್ ಕ್ಲಾಸಿಕ್ 500’ ಎಂಬ 15 ಮೋಟಾರು ಸೈಕಲನ್ನು ಬಿಡುಗಡೆಗೊಳಿಸುವು ದಾಗಿ ಘೋಷಿಸಿದೆ. ‘ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ಸ್’ ಬೆಂಬಲವಾಗಿ ಮೋಟಾರು ಸೈಕಲ್ ಯಾತ್ರೆ ‘ಫೈಟ್ ಅಗೇನ್ಸ್ಟ್‌ ಟೆರರಿಸಂ’

ಸೆಪ್ಟೆಂಬರ್‌ನಲ್ಲಿ ನಡೆದಿದ್ದು, ಈ ಸಲುವಾಗಿ ಬೈಕ್‌ ಹೊರತಂದಿರುವುದಾಗಿ ಹೇಳಿಕೊಂಡಿದೆ.

ಈಗಾಗಲೇ ಈ ಬೈಕ್‌ಗಳ ನೋಂದಣಿ ಆರಂಭವಾಗಿದೆ. ನೋಂದಣಿ ಮಾಡಿಕೊಂಡ ನಂತರ ‘ಯುನಿಕ್ ಐಡೆಂಟಿಫಿಕೇಷನ್ ಕೋಡ್’ ನೀಡಲಾಗುವುದು.

ಭಯೋತ್ಪಾದನೆ ವಿರುದ್ಧ ಹೋರಾಡಲು ಜನರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಬೈಕ್‌ ಬೆಲೆ ₹ 1,90,000 (ಎಕ್ಸ್‌ ಶೋ ರೂಂ, ದೆಹಲಿ). ಇದಕ್ಕೆ ವಿಶೇಷವಾದ ಎನ್‌ಎಸ್‌ಜಿ ಮುದ್ರೆ ಇರಲಿದೆ. ಮಾರಾಟದ ಎಲ್ಲಾ ಹಣವನ್ನು ಅಂಗವಿಕಲ ಮಕ್ಕಳ ಕಾಳಜಿಯಲ್ಲಿ ನಿರತವಾಗಿರುವ ಸ್ವಯಂ ಸೇವಾ ಸಂಸ್ಥೆ ಪ್ರೇರಣಾಗೆ ನೀಡಲಿದೆ.

ಬೈಕ್‌ನ ದೇಹ ಹಾಗೂ ಎಕ್ಸ್‌ಹಾಸ್ಟ್ ಮೇಲೆ ವಿಶೇಷ ಬಣ್ಣವನ್ನು ನೀಡಲಾಗಿದೆ. ಕಪ್ಪು ಸ್ಪೋಕ್ ವೀಲ್‌ಗಳನ್ನು ಹೊಂದಿರುವುದು ವಿನ್ಯಾಸಕ್ಕೆ ಹೇಳಿ ಮಾಡಿಸಿದಂತಿದೆ. 499 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್, 27.2ಎಚ್‌ಪಿ ಮತ್ತು 41.3 ಎನ್‌ಎಂ ಪೀಕ್ ಟಾರ್ಕ್ ಶಕ್ತಿ ನೀಡಲಿದ್ದು ಇದಕ್ಕೆ ಜೊತೆಯಾಗಿ 5 ಸ್ಪೀಡ್ ಟ್ರಾನ್ಸ್‌ಮಿಷನ್ ಇದೆ.

Comments
ಈ ವಿಭಾಗದಿಂದ ಇನ್ನಷ್ಟು
ಮೋರೇರ ಅಂಗಳದಲ್ಲೊಂದು ದಿನ

ವಿದ್ಯಾರ್ಥಿಗಳ ಪ್ರವಾಸ
ಮೋರೇರ ಅಂಗಳದಲ್ಲೊಂದು ದಿನ

19 Apr, 2018
ನಾನಿದ್ದಲ್ಲೇ ನಾದಲೀಲೆ!

ಸಂಗೀತ
ನಾನಿದ್ದಲ್ಲೇ ನಾದಲೀಲೆ!

19 Apr, 2018
ಯಾರು ಚಾಲನೆ ಮಾಡಿದರೆ ನಿಮ್ಮ ಪ್ರವಾಸ ಸುರಕ್ಷಿತ?

ಕಾಮನಬಿಲ್ಲು
ಯಾರು ಚಾಲನೆ ಮಾಡಿದರೆ ನಿಮ್ಮ ಪ್ರವಾಸ ಸುರಕ್ಷಿತ?

19 Apr, 2018
ಬುಟ್ಟಿಯು ಬರಿದಾಗಿತ್ತು ಹರಕೆ ಮನತುಂಬಿತ್ತು!

ಒಡಲಾಳ
ಬುಟ್ಟಿಯು ಬರಿದಾಗಿತ್ತು ಹರಕೆ ಮನತುಂಬಿತ್ತು!

19 Apr, 2018

ಬೆಳದಿಂಗಳು
ಸಂಸ್ಕೃತಿಯ ಮಾಲೆ

ನಮ್ಮ ಇಂದಿನ ಸಮಾಜಕ್ಕೂ ಕುಟುಂಬಗಳಿಗೂ ಖಂಡಿತವಾಗಿಯೂ ಬೇಕಾಗಿರುವ ವಿವೇಕವನ್ನು ಸೊಗಸಾದ ರೀತಿಯಲ್ಲಿ ಈ ಪದ್ಯ ವಿವರಿಸಿದೆ.‌

19 Apr, 2018