ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಸಿಬಿ: ಹೊಸ ತಂತ್ರಜ್ಞಾನ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಣ ಸಲಕರಣೆ ತಯಾರಿಕಾ ಸಂಸ್ಥೆ ಜೆಸಿಬಿ ಇಂಡಿಯಾ, ತನ್ನ ವೈವಿಧ್ಯಮಯ ಭಾರಿ ಯಂತ್ರೋಪಕರಣಗಳು ಮತ್ತು ಸೇವೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದೆ.

‘ಹೊಸ ತಲೆಮಾರಿನ ಮೂಲ ಸೌಕರ್ಯ ನಿರ್ಮಾಣ ಯೋಜನೆಗಳಿಗೆ ಸ್ಮಾರ್ಟ್ ತಂತ್ರಜ್ಞಾನ ಭಾರಿ ಉತ್ತೇಜನ ನೀಡಲಿದೆ ಎನ್ನುವ ಧ್ಯೇಯವಾಕ್ಯದಡಿ ನಮ್ಮ ಯಂತ್ರೋಪಕರಣಗಳು ಮತ್ತು ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಪರಸ್ಪರ ಸಂವಹನ ಸಾಧಿಸುವ ಡಿಜಿಟಲ್‌ ಸಲಕರಣೆಗಳ(ಐಒಪಿ) ಬಳಕೆ ಹೆಚ್ಚಿಸಲಾಗಿದೆ’ ಎಂದು ಸಂಸ್ಥೆಯ ಸಿಇಒ ವಿಪಿನ್‌ ಸೋಂಧಿ ಹೇಳಿದ್ದಾರೆ.

‘ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗಿರುವ ಕಿರು ತಂತ್ರಾಂಶ (ಆ್ಯಪ್‌) ಮತ್ತು ಡಿಜಿಟಲ್‌ ಸಲಕರಣೆಗಳ ಸಂವಹನವನ್ನು ದೂರಸಂಪರ್ಕ ತಂತ್ರಜ್ಞಾನ ‘ಲೈವ್‌ಲಿಂಕ್‌’ ಮೂಲಕ  ಜೋಡಿಸುವ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಂಪರ್ಕ ಜಾಲದಲ್ಲಿ ಇರುವ ಗ್ಯಾಜೆಟ್‌ಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವುದರಿಂದ ದೂರ ನಿಯಂತ್ರಣದಿಂದ ಯಂತ್ರೋಪಕರಣಗಳ ಕಾರ್ಯವೈಖರಿ ಗಮನಿಸುವ ತಂತ್ರಜ್ಞರು ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ.

‘ಹೊಸ ಬಗೆಯ ಮತ್ತು ಕೃತಕ ಬುದ್ಧಿಮತ್ತೆಯಿಂದ ಕಾರ್ಯನಿರ್ವಹಿಸುವ ಯಂತ್ರೋಪಕರಣಗಳನ್ನು ಸಂಸ್ಥೆಯು ತಯಾರಿಸುತ್ತಿದ್ದು, ನಗರದಲ್ಲಿ ನಡೆಯುತ್ತಿರುವ ಎಕ್ಸ್‌ಕಾನ್‌ ಮೇಳದಲ್ಲಿ ಅವುಗಳನ್ನು ಪ್ರದರ್ಶಿಸಲಾಗುತ್ತಿದೆ. ಮೂಲ ಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಬೇಕಾದ ಜಾಗತಿಕ ಗುಣಮಟ್ಟದ ಯಂತ್ರಗಳ ಅಗತ್ಯವನ್ನು ಜೆಸಿಬಿ ಇಂಡಿಯಾ ಒದಗಿಸುತ್ತಿದೆ.

‘ಭಾರತದಲ್ಲಿಯೇ ತಯಾರಿಸಿ’ ಯೋಜನೆಯಡಿ ಸ್ಥಳೀಯವಾಗಿ ತಯಾರಿಸಿದ ಯಂತ್ರೋಪಕರಣಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಜೆಸಿಬಿ ಬ್ಯಾಕ್‌ಹೋಯ್‌ ಲೋಡರ್‌ನಲ್ಲಿ ಇದೇ ಮೊದಲ ಬಾರಿಗೆ ಐದು ಹೊಸ ಸೌಲಭ್ಯಗಳನ್ನು ಒದಗಿಸಲಾಗಿದೆ. ನಿರ್ವಾಹಕನ ನೆರವಿಲ್ಲದೆ ಸ್ವಯಂಚಾಲಿತವಾಗಿ ಗೇರ್‌ ಬದಲಾಗುವ ಸೌಲಭ್ಯ ಇದರಲ್ಲಿ ಇದೆ. ಇದರಿಂದ ನಿರ್ವಹಣೆ ಸುಲಭವಾಗಿರಲಿದೆ ಜತೆಗೆ ಕಾರ್ಯಕ್ಷಮತೆಯೂ ಹೆಚ್ಚಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT