ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ವೈದ್ಯರು: ಆಸ್ಪತ್ರೆ ಬಳಿಯ ಚರಂಡಿಯಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ!

ಸಮರ್ಪಕ ದಾಖಲೆ ತರದ ಕಾರಣ ಹೆರಿಗೆ ಮಾಡಿಸಲು ಹಿಂದೇಟು ಹಾಕಿದ ವೈದ್ಯರು
Last Updated 16 ಡಿಸೆಂಬರ್ 2017, 13:51 IST
ಅಕ್ಷರ ಗಾತ್ರ

ಕೊರಾಪುಟ್ /ಒಡಿಶಾ: ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಕಾರಣ ಗರ್ಭಿಣಿಯೊಬ್ಬರು ಆಸ್ಪತ್ರೆಯ ಕ್ಯಾಂಟಿನ್ ಬಳಿಯ ಚರಂಡಿಯಲ್ಲಿ ಮಗುವಿಗೆ ಜನ್ಮ ನೀಡಿದ ಶೋಚನೀಯ ಘಟನೆ ನಡೆದಿದೆ.

ಮಹಿಳೆಯು ಕೆಲವು ದಾಖಲೆಗಳನ್ನು ಒದಗಿಸದ ಕಾರಣ ವೈದ್ಯರು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.

ಮಹಿಳೆಯು ಹೆರಿಗೆ ನೋವು ಕಾಣಿಸಿಕೊಂಡ ಕಾರಣ ತಮ್ಮ ಪತಿಯ ಜೊತೆಗೆ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಆಗ ಪರೀಕ್ಷಿಸುವಂತೆ ಮಹಿಳೆಯು ಕೇಳಿದಾಗ ವೈದ್ಯರು ಮಮತಾ ಯೋಜನಾ ಫಲಾನುಭವಿ ಕಾರ್ಡ್‌ ಸೇರಿದಂತೆ ಕೆಲವು ದಾಖಲೆಗಳನ್ನು ಕೇಳಿದ್ದಾರೆ

ಮಮತಾ ಯೋಜನಾ ಫಲಾನುಭವಿ ಕಾರ್ಡ್‌ ನೀಡಲು ವಿಫಲವಾದ ಕಾರಣ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದಾರೆ. ಕೊನೆಗೆ ತೀವ್ರ ಹೆರಿಗೆ ನೋವಿನಿಂದ ನರಳುತ್ತಿದ್ದ ಮಹಿಳೆಯು ಕ್ಯಾಂಟಿನ್ ಬಳಿಯ ಚರಂಡಿಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT