ನ್ಯೂಯಾರ್ಕ್

ಕೀಟಗಳ ಬುದ್ಧಿಶಕ್ತಿಯ ‘ರೋಬೊಬೀ’

ಕೀಟಗಳ ರೀತಿ ಆಲೋಚಿಸುವ ಹಾಗೂ ಅವುಗಳಂತೆ ಓಡಾಡಬಲ್ಲ ಅತಿಸಣ್ಣ ರೋಬೊಟ್‌ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸದ್ದಾರೆ. ಸಂಕೀರ್ಣ ವಾತಾವರಣದಲ್ಲಿ ಇವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲವು.

ಕೀಟಗಳ ಬುದ್ಧಿಶಕ್ತಿಯ ‘ರೋಬೊಬೀ’

ನ್ಯೂಯಾರ್ಕ್: ಕೀಟಗಳ ರೀತಿ ಆಲೋಚಿಸುವ ಹಾಗೂ ಅವುಗಳಂತೆ ಓಡಾಡಬಲ್ಲ ಅತಿಸಣ್ಣ ರೋಬೊಟ್‌ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸದ್ದಾರೆ. ಸಂಕೀರ್ಣ ವಾತಾವರಣದಲ್ಲಿ ಇವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಲ್ಲವು.

ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯ ಹಾಗೂ ಹಾರ್ವರ್ಡ್‌ ಮೈಕ್ರೊಬಯೊಟಿಕ್ಸ್ ಲ್ಯಾಬೊರೇಟರಿ ಸಹಯೋಗದಲ್ಲಿ 80 ಮಿಲಿಗ್ರಾಂ ತೂಕದ ಹಾರುವ ರೋಬೊಟನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ‘ರೋಬೊಬೀ’ ಎಂದು ಹೆಸರಿಡಲಾಗಿದೆ. ಇದಕ್ಕಿರುವ ಒಂದೇ ನ್ಯೂನತೆ ಎಂದರೆ ಇಂಧನ ಪೂರೈಕೆ. ಹೀಗಾಗಿ ಹೊಸ ರೀತಿಯ ಶಕ್ತಿ ಮೂಲಕ್ಕಾಗಿ ಸಂಶೋಧನೆ ನಡೆಯುತ್ತಿದೆ.

‘ಹಾರಾಟದ ವೇಳೆ ಗಾಳಿಯ ಹೊಡೆತಕ್ಕಿ ಸಿಲುಕಿ ಅಥವಾ ವಸ್ತುಗಳಿಗೆ ತಗುಲಿ ಈ ಚಿಕ್ಕ ರೋಬೊಗಳು ತಮ್ಮ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ಅಪಘಾತಗಳಿಂದ ಪಾರಾಗಲು ಮತ್ತು ಅಪಘಾತವಾದಾಗಲೂ ನಿಯಂತ್ರಣ ಸಾಧಿಸುವ ಸಾಮರ್ಥ್ಯ ಒದಗಿಸುವ ಸೆನ್ಸರ್‌ ಹಾಗೂ ಅಲ್ಗೊರಿದಮ್ಸ್‌ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಿಲ್ವಿಯಾ ಫೆರಾರಿ ಹೇಳಿದ್ದಾರೆ.

ಇದರ ಪಾದದಲ್ಲಿ ತೆಳುವಾದ ಕೂದಲಿನ ರೂಪದ ಕಾಂಟಾಕ್ಟ್ ಸೆನ್ಸರ್, ಏರ್‌ಫ್ಲೋ ಸೆನ್ಸರ್‌ ಅಳವಡಿಸಲಾಗಿದೆ. ಇದರ ಜತೆ ಮೈಕ್ರೊ ಕ್ಯಾಮರಾ, ಆಂಟೆನಾಗಳನ್ನು ಅಳವಡಿಸಿದ್ದು, ಇವು ರೋಬೊ ಜೊತೆ ಸಂವಹನಕ್ಕೆ ನೆರವಾಗುತ್ತವೆ. 17 ಮಿಲಿಮೀಟರ್ ಉದ್ದ ಹಾಗೂ 3 ಗ್ರಾಂ ತೂಕದ ನಾಲ್ಕು ಪಾದಗಳ ಹಾರ್ವರ್ಡ್ ಸಂಚಾರಿ ಮೈಕ್ರೊರೋಬೊಟ್ ಈಗಾಗಲೇ ಈ ತಂತ್ರಜ್ಞಾನದ ಲಾಭ ಪಡೆಯುತ್ತಿದೆ.

ವೈಶಿಷ್ಟ್ಯತೆ
ವೇಗ: ಸೆಕೆಂಡ್‌ಗೆ 0.44 ಮೀಟರ್‌

ತೂಕ: 80 ಮಿಲಿಗ್ರಾಂ

ಸ್ವರೂಪ: ಹಾರುವ ದುಂಬಿ

ವಿಶೇಷತೆ: ಸ್ವಯಂ ನಿಯಂತ್ರಣ

ಸಾಮರ್ಥ್ಯ: ಅಪಘಾತ ತಪ್ಪಿಸಿಕೊಳ್ಳುವ ಸಾಮರ್ಥ್ಯ

Comments
ಈ ವಿಭಾಗದಿಂದ ಇನ್ನಷ್ಟು
ಮ್ಯಾನ್ಮಾರ್ ಅಧ್ಯಕ್ಷ ಹಟಿನ್‌ ನಿವೃತ್ತಿ

ಯಾಂಗೂನ್
ಮ್ಯಾನ್ಮಾರ್ ಅಧ್ಯಕ್ಷ ಹಟಿನ್‌ ನಿವೃತ್ತಿ

22 Mar, 2018
‘ಪಾಕ್‌ನಲ್ಲಿ ಸಿಖ್ ಯುವಕರಿಗೆ ತರಬೇತಿ’

ಭಾರತದ ಮೇಲೆ ದಾಳಿ ನಡೆಸಲು ಉಗ್ರರಿಗೆ ಐಎಸ್ಐ ಒತ್ತಡ: ವರದಿ
‘ಪಾಕ್‌ನಲ್ಲಿ ಸಿಖ್ ಯುವಕರಿಗೆ ತರಬೇತಿ’

22 Mar, 2018
ಎಚ್‌–1ಬಿ ವೀಸಾಗೆ ಏ.2ರಿಂದ ಅರ್ಜಿ ಸಲ್ಲಿಕೆ ಆರಂಭ

ವಾಷಿಂಗ್ಟನ್‌
ಎಚ್‌–1ಬಿ ವೀಸಾಗೆ ಏ.2ರಿಂದ ಅರ್ಜಿ ಸಲ್ಲಿಕೆ ಆರಂಭ

22 Mar, 2018
ಗ್ರೀನ್‌ಕಾರ್ಡ್‌ ವಿಳಂಬ ಭಾರತೀಯರ ಆಕ್ರೋಶ

70 ವರ್ಷ ಕಾಯುವ ಸ್ಥಿತಿ
ಗ್ರೀನ್‌ಕಾರ್ಡ್‌ ವಿಳಂಬ ಭಾರತೀಯರ ಆಕ್ರೋಶ

21 Mar, 2018
‘ಒಂದಿಂಚು ಭೂಮಿ ಬಿಟ್ಟು ಕೊಡುವುದಿಲ್ಲ’

ಜಿನ್‌ಪಿಂಗ್‌ ಸ್ಪಷ್ಟನೆ
‘ಒಂದಿಂಚು ಭೂಮಿ ಬಿಟ್ಟು ಕೊಡುವುದಿಲ್ಲ’

21 Mar, 2018